ಬೆಳಗಾವಿ: ಮಂಗಳವಾರ ದಿನಾಂಕ 3/5/2022 ರಂದು ನಗರದ ಕಾಂಗ್ರೆಸ್ ಭವನದಲ್ಲಿ ಜಗಜ್ಯೋತಿ ಬಸವೇಶ್ವರರ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಯಿತು.
ಸಂಧರ್ಭದಲ್ಲಿ ಶಿವಬಸವ ಭಾವಚಿತ್ರಕ್ಕೆ ಕಾಂಗ್ರೆಸ್ಸಿನ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷರಾದ ವಿನಯ ನಾವಲಗಟ್ಟಿ ಪುಷ್ಪಾರ್ಚನೆ, ಪೂಜೆ ಮಾಡಿ, ಬಸವಣ್ಣನವರ ವಚನ, ಅವರ ಯೋಚನೆ, ಸಮಾಜಕ್ಕೆ ಅವರು ನೀಡಿದ ಸಂದೇಶ ಸಾರ್ವಕಾಲಿಕ ಶ್ರೇಷ್ಠವಾದ ವಿಚಾರಗಳು
12 ನೆಯ ಶತಮಾನದಲ್ಲಿ ಜಾತಿ ಬೇಧದ, ಮೂಢನಂಬಿಕೆಗಳ, ಡ್ಡಾಂಬಿಕ ಕಟ್ಟುಪಾಡುಗಳ ವಿರುದ್ಧ ದ್ವನಿ ಎತ್ತಿ, ಸಂಪ್ರದಾಯವಾದಿಗಳ ವಿರೋಧ ಕಟ್ಟಿಕೊಂಡರು.. ಆದರೂ ಸಮಾಜದ ಮನುಜರೆಲ್ಲ ಸಮಾನರು ಎಂದು ಸಮಾನತೆಯ ಹರಿಕಾರರಾದರು.
ಅವತ್ತಿನ ಅಂಧ ಆಚರಣೆಗಳ ವಿರುದ್ಧ ದ್ವನಿ ಎತ್ತಿ, ಸಾಮಾನ್ಯರ ಪರ ನಿಂತು ನ್ಯಾಯ ಕೊಡಸಿದ್ದು, ಇವತ್ತಿಗೂ ಕೂಡಾ ಅವರ ಆ ಆಲೋಚನೆ ಪ್ರಸ್ತುತ ಏನಿಸುತ್ತದೆ ಎಂದರು.
ನಾವೆಲ್ಲರೂ ಇನ್ನಾದರೂ ಮೇಲೂ ಕೀಳು ಜಾತಿ ಧರ್ಮ ಎನ್ನದೆ ಬಸವತತ್ವದಂತೆ ನಡೆದುಕೊಳ್ಳಬೇಕಾದ.. ಅದರಿಂದ ಸಮಾಜದ ಎಳ್ಗೆ ಇದೆ ಎಂದರು.
ಇನ್ನು ಶಿವಾಜಿಯ ಬಗ್ಗೆ ಮಾತನಾಡಿದ ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ್ ಅವರು ಶಿವಾಜಿಯ ಶೌರ್ಯ ಹೋರಾಟ ಚಾಕಚಕ್ಯತೆ, ಅವರ ಆಡಳಿತ ಕೌಶಲ್ಯ ಇವೆಲ್ಲದರ ಫಲವಾಗಿ ದೇಶದ ಧರ್ಮ, ಸಂಸ್ಕೃತಿ, ಸಂಪ್ರದಾಯ, ಭಾರತೀಯತೆ ಇವತ್ತು ಉಚ್ಛ ಸ್ಥಾನದಲ್ಲಿದೆ ಎಂದರೆ ತಪ್ಪಾಗಲಾರದು, ಪರಕೀಯರ ದಾಳಿಯಿಂದ ತಮ್ಮ ಜೀವದ ಕೊನೆವರೆಗೂ ದೇಶ, ಧರ್ಮ, ಸಂಸ್ಕೃತಿಯನ್ನು ಕಾಪಾಡಲು ಹೋರಾಡಿದರು.. ಭಾರತೀಯತೆ ಇಷ್ಟೊಂದು ಬಲಿಷ್ಠವಾಗಿ ಇವತ್ತು ನಿಲ್ಲಲು ಛತ್ರಪತಿ ಅವರ ಕೊಡುಗೆ ಅಪಾರವಿದೆ ಎಂದರು,,
ಆದರೆ ಇತ್ತೀಚಿನ ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಇಂತಹ ಮಹಾಪುರುಷರ ಹೆಸರು ಹಾಗೂ ಸಾಧನೆಯನ್ನು ತಮ್ಮ ಸಾಧನೆಯೇ ಎಂದು ಜನರನ್ನು ಮೋಡಿ ಮಾಡುತ್ತಿರುವುದು ಮಾತ್ರ ವಿಪರ್ಯಾಸ ಹಾಗೂ ಖಂಡನೀಯ ಎಂದರು.
ಈ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ವಿನಯ ನಾವಲಗಟ್ಟಿ, ಕೆಪಿಸಿಸಿ ಸದಸ್ಯರಾದ ಮಲಗೌಡ್ ಪಾಟೀಲ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಪ್ರದೀಪ್ ಎಂ ಜೇ, ಕಾಂಗ್ರೆಸ್ಸಿನ ಮಹಿಳಾ ಪದಾಧಿಕಾರಿಗಳಾದ ರೋಹಿಣಿ ಬಾಪಶೆಟ್, ಅನ್ನಪೂರ್ಣ, ಕಾರ್ಮಿಕ ಘಟಕದ ಅಧ್ಯಕ್ಷ ಮಂಜು ಕಾಂಬ್ಳೆ, ಸಾಮಾಜಿಕ ಕಾರ್ಯಕರ್ತ ಸುಧೀರ ಸಂಭಾಜಿ, ಯುವರಾಜ್ ತಳವಾರ, ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು..