This is the title of the web page
This is the title of the web page

Please assign a menu to the primary menu location under menu

Local News

ದೇಶದ ಪ್ರಥಮ ಪ್ರಧಾನಿ ನೆಹೂರವರ ಪುಣ್ಯತಿಥಿ ಆಚರಣೆ


ಬೆಳಗಾವಿ ನಗರದ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ದಿನಾಂಕ 27/5/22 ರಂದು ದೇಶದ ಪ್ರಥಮ ಪ್ರಧಾನಿಯಾದ ಜವಹಾರ ಲಾಲ ನೆಹರು ಅವರ ಪುಣ್ಯತಿಥಿ ಆಚರಣೆ ಮಾಡಲಾಯಿತು.

ನೆಹರೂ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ದೀಪ ಬೆಳಗಿಸಿ, ಪೂಜೆ ಮಾಡುವ ಮೂಲಕ ಸರಳವಾಗಿ ಮಾಜಿ ಪ್ರಧಾನಿಯನ್ನು ನೇನೆಯಲಾಯಿತು.

ಈ ಸಂಧರ್ಭದಲ್ಲಿ ಮಾತನಾಡಿದ ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ವಿನಯ್ ನಾವಲಗಟ್ಟಿ ಅವರು, ಜವಹಾರ್ಲಾಲ್ ನೆಹರು ಅವರು ದೇಶ ಕಂಡ ಶ್ರೇಷ್ಠ ಪ್ರಧಾನಿ, ಚಿಂತಕ ಎಂದರು.

ಸ್ವಾತಂತ್ರ ಬಂದ ಸಂಧರ್ಭದಲ್ಲಿ ದೇಶದಲ್ಲಿ ನೂರಾರು ಸಮಸ್ಯೆಗಳು ಕಾಡುತ್ತಿದ್ದವು, ಅಂತಾ ಕಠಿಣ ಪರಿಸ್ಥಿತಿಯಲ್ಲಿ ಎಲ್ಲವನ್ನೂ ನಿಭಾಯಿಸಿ ದೇಶದ ಜನರಿಗೆ ಯಾವುದೇ ಕೊರತೆ ಆಗದಂತೆ ನೋಡಿಕೊಂಡರು.

ನಂತರದ ದಿನಗಳಲ್ಲಿ ಕೃಷಿ, ಕೈಗಾರಿಕೆ, ಸಾರಿಗೆ, ವಸತಿ, ಶಿಕ್ಷಣ ಸುಧಾರಣೆ,ಎಲ್ಲಾ ಜನರಿಗೆ ಮೂಲಸೌಕರ್ಯ ಒದಗಿಸುವುದು, ಹಿಗೆ ಹತ್ತು ಹಲವಾರು ಸವಾಲುಗಳನ್ನು ಎದುರಿಸುತ್ತಲೇ ಆಡಳಿತ ನಡೆಸಿದರು.. ಇಡೀ ದೇಶದಲ್ಲೇ ಅತಿ ಸುದೀರ್ಘವಾಗಿ ಪ್ರಧಾನಿಯಾಗಿ ಉತ್ತಮ ಆಡಳಿತ ನೀಡಿ, ದೇಶದ ಅಭಿವೃದ್ಧಿಗೆ ಕಾರಣಿಕರ್ತರಾಗಿದ್ದರೆ.

ಸರ್ವಧರ್ಮೀಯ, ಸರ್ವಜಾತಿಯ, ದೀನದಲಿತರ, ಶೋಷಿತರ, ಬಡವರ, ಕೂಲಿಕಾರ್ಮಿಕರ ಕಷ್ಟ ಪರಿಹರಿಸುವ ಹರಿಕಾರರಾಗಿದ್ದರು.. ಇಂದಿನ ರಾಜಕೀಯ ನಾಯಕರು ಅವರಿಂದ ಬಹಳಷ್ಟು ಕಲಿಯಬೇಕಾದದ್ದಿದೆ ಎಂದರು.

ಈ ಸಂಧರ್ಭದಲ್ಲಿ ಕಾಂಗ್ರೆಸ್ಸಿನ ಜಿಲ್ಲಾಧ್ಯಕ್ಷರಾದ ವಿನಯ ನಾವಲಗಟ್ಟಿ, ಚಿಕ್ಕೋಡಿ ಅಧ್ಯಕ್ಷರಾದ ಲಕ್ಷ್ಮಣರಾವ್ ಚಿಂಗಳೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಪ್ರದೀಪ ಎಂ ಜೇ, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ಕಚೇರಿಯ ಸಿಬ್ಬಂದಿಗಳಾದ ರವಿ, ಭೀಮರಾವ ಮುಂತಾದವರು ಭಾಗಿಯಾಗಿದ್ದರು.


Gadi Kannadiga

Leave a Reply