ಬೆಳಗಾವಿ, ಫೆ.೦೩: ಬೆಳಗಾವಿ ತಾಲ್ಲೂಕು ಪಂಚಾಯತ ಕಚೇರಿ ಆವರಣದಲ್ಲಿ ಗುರುವಾರ (ಫೆ,೨) ಉದ್ಯೋಗ ವಾಹಿನಿ ವಾಹನಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ದರ್ಶನ್ ಎಚ್.ವ್ಹಿ ಅವರು ಚಾಲನೆ ನೀಡಿದರು.
ಉದ್ಯೋಗ ವಾಹಿನಿಯು ಬೆಳಗಾವಿ ತಾಲ್ಲೂಕಿನ ಗ್ರಾಮಗಳಿಗೆ ಸಂಚರಿಸಿ ನರೇಗಾ ಯೋಜನೆಯಡಿ ದೊರಕುವ ಕೃಷಿ ಹೊಂಡ, ಅಲ್ಪ ಆಳದ ಬಾವಿ, ಜಮೀನು ಸಮತಟ್ಟು ಸೇರಿದಂತೆ ವಿವಿಧ ಕಾಮಗಾರಿಗಳ ಕುರಿತು ಪ್ರಚಾರ ಮಾಡಲಿದೆ.
ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಜೇಶ ದಾನವಾಡಕರ, ಸಹಾಯಕ ನಿರ್ದೇಶಕರು (ಗ್ರಾ.ಉ) ರಾಜೇಂದ್ರ ಮೊರಬದ, ಸಹಾಯಕ ನಿರ್ದೇಶಕರಾದ (ಪಂಚಾಯತ ರಾಜ್) ಗಣೇಶ ಕೆ ಎಸ್, ಜಿಲ್ಲಾ ಪಂಚಾಯತ ಸಹಾಯಕ ಕಾರ್ಯಕ್ರಮಗಳ ಸಂಯೋಜರಾದ ಬಸವರಾಜ ಎನ್, ಜಿಲ್ಲಾ ಐಇಸಿ ಸಂಯೋಜಕರು ಪ್ರಮೊದ ಗೊಡೆಕರ್, ತಾಂತ್ರಿಕ ಸಂಯೋಜಕರಾದ ನಾಗರಾಜ ಯರಗುದ್ದಿ, ಎಂ.ಐ.ಎಸ್ ಸಂಯೋಜಕರಾದ ಶೀತಲ್ ಪಾಟೀಲ್, ತಾಐಇಸಿ ಸಂಯೋಜಕರಾದ ರಮೇಶ ಮಾದರ ಹಾಗೂ ತಾಲ್ಲೂಕು ಪಂಚಾಯತ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
Gadi Kannadiga > Local News > ಉದ್ಯೋಗ ವಾಹಿನಿ ಸಂಚಾರಿ ವಾಹನಕ್ಕೆ ಸಿಇಒ ದರ್ಶನ್ ಎಚ್.ವ್ಹಿ ಚಾಲನೆ