This is the title of the web page
This is the title of the web page

Please assign a menu to the primary menu location under menu

State

ಸಿರಿಧಾನ್ಯಗಳ ಪಾಕ ಸ್ಪರ್ಧೆ, ಆಹಾರ ಮೇಳ


ಕೊಪ್ಪಳ ಜುಲೈ 20: ಗಂಗಾವತಿ ಕೃಷಿ ವಿಜ್ಞಾನ ಕೇಂದ್ರ ಹಾಗೂ ಸಂಜೀವಿನಿ ಎನ್.ಆರ್.ಎಲ್.ಎಂ ಯೋಜನೆಯ ಸಹಯೋಗದೊಂದಿಗೆ ಸ್ವಸಹಾಯ ಸಂಘದ ಮಹಿಳೆಯರಿಂದ 2023ನೇ ಸಾಲಿನ ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷದ ಪ್ರಯುಕ್ತ ಸಿರಿಧಾನ್ಯಗಳ ಪಾಕ ಸ್ಪರ್ಧೆ ಮತ್ತು ಆಹಾರ ಮೇಳವು ಜುಲೈ 19ರಂದು ಕೊಪ್ಪಳ ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯಿತು.
ಕೃಷಿ ವಿಸ್ತರಣಾ ಕೇಂದ್ರದ ಹಿರಿಯ ನಿರ್ದೇಶಕರಾದ ರವಿ ಎಂ ಅವರು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ವಿವಿಧ ಆಹಾರ ಖಾದ್ಯಗಳು: ಸ್ಪರ್ಧೆಯಲ್ಲಿ 34 ಸ್ವ-ಸಹಾಯ ಸಂಘಗಳ ಮಹಿಳೆಯರಿಂದ ವಿವಿಧ ಸಿರಿಧಾನ್ಯ ಆಹಾರ ಖಾದ್ಯಗಳಾದ ರಾಗಿ ಉಂಡೆ, ರಾಗಿ ಅಂಬಲಿ, ರಾಗಿ ಬರ್ಫಿ, ರಾಗಿ ಹಲ್ವಾ, ನವಣೆ ತಂಬಿಟ್ಟು, ನವಣೆ ಹೋಳಿಗೆ, ನವಣೆ ಹಲ್ವಾ, ಹರ್ಕಾ ಬರ್ಫಿ, ಹರ್ಕಾ ಉಂಡೆ, ಸಜ್ಜೆ ಉಂಡೆ, ಸಜ್ಜೆ ರೊಟ್ಟಿ ಇತ್ಯಾದಿಯನ್ನು  ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಕೃಷಿ ವಿಜ್ಞಾನ ಕೇಂದ್ರದ ನಿರ್ದೇಶಕರು, ಸಿಬ್ಬಂದಿಯು ಆಹಾರ ಖಾದ್ಯಗಳನ್ನು ಸೇವಿಸಿ ಮೌಲ್ಯ ಮಾಪನ ಮಾಡಿದರು. ಅಂತಿಮವಾಗಿ ಅತ್ಯುತ್ತಮವಾಗಿ ಖಾದ್ಯ ತಯಾರಿಸಿದ 5 ಜನ ಮಹಿಳೆಯರಿಗೆ ಬಹುಮಾನಗಳನ್ನು ನೀಡಲಾಯಿತು.
ಬಹುಮಾನ ವಿತರಣೆ: ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಹುಲಿಗೆಮ್ಮ ಮುನಿರಾಬಾದ್, ದ್ವಿತೀಯ ಮಂಜುಳಾ ಬಹದೂರ ಬಂಡಿ, ತೃತೀಯ ಯಶೋದಾ ಅಳವಂಡಿ ಮತ್ತು ಸಮಾಧಾನಕರ ಬಹುಮಾನವನ್ನು ವಿಜಯಾ ಹಾಗೂ ಶೋಭಾ ಅಗಳಕೇರ ಅವರು ಪಡೆದುಕೊಂಡರು. ಈ ಎಲ್ಲಾ ಜನರಿಗೆ ಕೃಷಿ ವಿಜ್ಞಾನ ಕೇಂದ್ರದಿಂದ ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕ ಪಂಚಾಯತ್‌ ಸಹಾಯಕ ನಿರ್ದೇಶಕರಾದ ಮಹೇಶ ಹಡಪದ,  ನರೇಗಾ ವಿಭಾಗದ ಸಹಾಯಕ ನಿರ್ದೇಶಕರಾದ ಕೆ.ಸೌಮ್ಯ, ಲೆಕ್ಕಾಧಿಕಾರಿ ರವಿ, ಕೃಷಿ ವಿಜ್ಞಾನ ಕೇಂದ್ರದ ಕವಿತಾ, ಸಂಜೀವಿನಿ-ಎನ್.ಆರ್.ಎಲ್.ಎಂ ಯೋಜನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಸುನೀಲ್ ಹೆಚ್.ಕೆ., ನವೀನ್ ಶಿಳ್ಳಿನ್, ವಲಯ ಮೇಲ್ವಿಚಾರಕರಾದ ವಿದ್ಯಾಲಕ್ಷ್ಮಿ ಹಾಗೂ ವೆಂಕಟೇಶ್, ಮೆಂಟರ್ ಕಲ್ಲಪ್ಪ, ಧರಣೀಶ್ ಸೇರಿದಂತೆ ಕೃಷಿ ವಿಜ್ಞಾನ ಕೇಂದ್ರದ ಹಾಗೂ ಕೃಷಿ ವಿಸ್ತರಣಾ ಕೇಂದ್ರದ ಸಿಬ್ಬಂದಿ, ಒಕ್ಕೂಟಗಳ ಸದಸ್ಯರು, ಮುಖ್ಯ ಪುಸ್ತಕ ಬರಹಗಾರರು, ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳು, ಸ್ವ ಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು.


Leave a Reply