ಮೂಡಲಗಿ: ‘ಮೂಡಲಗಿಯ ಚೈತನ್ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸೈಟಿಯು ಪ್ರಸಕ್ತ ಮಾರ್ಚ ಅಂತ್ಯಕ್ಕೆ ೨.೦೩ ಕೋಟಿ ರೂ ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಸಾಗಿದೆ’ ಎಂದು ಸೊಸೈಟಿ ಅಧ್ಯಕ್ಷ ತಮ್ಮಣ್ಣಾ ಬಿ. ಕೆಂಚರಡ್ಡಿ ಹೇಳಿದರು.
ಪಟ್ಟಣದ ಚೈತನ್ಯ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸೈಟಿಯ ೨೩ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಸೊಸೈಟಿಯ ಸದ್ಯ ರೂ. ೧.೯೭ ಕೋಟಿ ಶೇರು ಬಂಡವಾಳ, ರೂ. ೮.೬೭ ಕೋಟಿ ನಿಧಿಗಳು, ರೂ.೧.೦೧ ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ರೂ. ೮೫.೪೪ ಕೋಟಿ ಠೇವುಗಳನ್ನು ಹೊಂದಿದೆ ಎಂದರು.
ಸೊಸೈಟಿಯು ಈ ವರೆಗೆ ವಿವಿಧ ಕ್ಷೇತ್ರಗಳಿಗೆ ೫೨.೧೪ ಕೋಟಿ ಸಾಲವನ್ನು ನೀಡಿದ್ದು ಪ್ರತಿ ವರ್ಷವೂ ಅಡಿಟ್ ವರ್ಗದಲ್ಲಿ ‘ಅ’ ಶ್ರೇಣಿಯನ್ನು ಪಡೆಯಲಾಗಿದೆ ಎಂದರು.
ಪ್ರಧಾನ ವ್ಯವಸ್ಥಾಪಕ ಜಿ.ಎಸ್. ಬಿಜಗುಪ್ಪಿ ಮಾತನಾಡಿ ಸೊಸೈಟಿಯು ಈ ವರೆಗೆ ೬ ಶಾಖೆಗಳನ್ನು ಹೊಂದಿದೆ. ಸೊಸೈಟಿಯು ಗಣಕಿಕರಣಗೊಂಡಿದ್ದು, ಇ-ಸ್ಟಾಂಪಿಂಗ್ ಸೇವೆ, ಹಿರಿಯ ನಾಗರಿಕರೆಗೆ ಶೇ. ೦.೫೦ ಅಧಿಕ ಬಡ್ಡಿ ಸೇರಿದಂತೆ ಗ್ರಾಹಕರ ಸ್ನೇಹಿಯಾಗಿ ಸೊಸೈಟಿಯು ಸಹಕಾರಿ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುತ್ತಲಿದೆ ಎಂದರು.
ಸಮಾರಂಭದಲ್ಲಿ ಶಿಕ್ಷಣ, ಪೊಲೀಸ್, ಕಂದಾಯ, ಸಹಕಾರಿ ಕ್ಷೇತ್ರಗಳಲ್ಲಿ ನಿವೃತ್ತರಾದ ೩೫ ಮಹಿನೀಯರನ್ನು ಸನ್ಮಾನಿಸಿ ಗೌರವಿಸಿದರು.
ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿರ್ದೇಶಕ ಡಾ. ಸಂಜಯ ಹೊಸಮಠ, ಪ್ರೊ. ಎಸ್.ಎಂ. ಕಮದಾಳ, ಲೆಕ್ಕಪರಿಶೋಧಕ ಸೈದಪ್ಪ ಗದಾಡಿ, ನಿವೃತ್ತ ಪ್ರಾಚಾರ್ಯ ಪ್ರೊ.ಎ. ಪಿ. ರಡ್ಡಿ ಮಾತನಾಡಿದರು.
ಸಮಾರಂಭದಲ್ಲಿ ಸೊಸೈಟಿ ಉಪಾಧ್ಯಕ್ಷ ಹನಮಂತ ಗಾಣಿಗೇರ, ನಿರ್ದೇಶಕರಾದ ಉದಯಕುಮಾರ ಜೋಕಿ, ಓಗೆಪ್ಪ ಬಬಲಿ, ಉದ್ದಪ್ಪ ಬಬಲಿ, ಮಹಾದೇವಯ್ಯ ಹಿರೇಮಠ, ವಿಠ್ಠಲ ಪಾಟೀಲ, ಕಾಶಿಬಾಯಿ ಬಿಜಗುಪ್ಪಿ, ಶಾಂತಾ ಮೂಡಲಗಿ, ಮಾಲಾ ಗೂಳನ್ನವರ, ಲಕ್ಷö್ಮವ್ವಾ ಮಾಹನ್ನವರ, ವಿಜಯ ಹೊರಟ್ಟಿ, ಮಲ್ಲಪ್ಪ ಅನಿಗೋಳ, ಕಾನೂನು ಸಲಹೆಗಾರರಾದ ಎಸ್.ಕೆ. ಬಾಲನಾಯಕ, ಡಿ.ಎಸ್. ರೊಡ್ಡನವರ ಇದ್ದರು.
ಅಶ್ವಿನಿ ಗಟನಟ್ಟಿ ಲೆಕ್ಕಪತ್ರ ವರದಿ ವಾಚಿಸಿದರು, ಬಸವರಾಜ ಹಿರೇಮಠ ಮತ್ತು ಪ್ರಧಾನ ವ್ಯವಸ್ಥಾಪಕ ಜಿ.ಎಸ್. ಬಿಜಗುಪ್ಪಿ ನಿರೂಪಿಸಿದರು, ಸಹ ವ್ಯವಸ್ಥಾಪಕ ಎನ್.ಆರ್. ಜೋಕಿ ವಂದಿಸಿದರು.ಮೂಡಲಗಿ: ‘ಮೂಡಲಗಿಯ ಚೈತನ್ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸೈಟಿಯು ಪ್ರಸಕ್ತ ಮಾರ್ಚ ಅಂತ್ಯಕ್ಕೆ ೨.೦೩ ಕೋಟಿ ರೂ ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಸಾಗಿದೆ’ ಎಂದು ಸೊಸೈಟಿ ಅಧ್ಯಕ್ಷ ತಮ್ಮಣ್ಣಾ ಬಿ. ಕೆಂಚರಡ್ಡಿ ಹೇಳಿದರು.
ಪಟ್ಟಣದ ಚೈತನ್ಯ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸೈಟಿಯ ೨೩ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಸೊಸೈಟಿಯ ಸದ್ಯ ರೂ. ೧.೯೭ ಕೋಟಿ ಶೇರು ಬಂಡವಾಳ, ರೂ. ೮.೬೭ ಕೋಟಿ ನಿಧಿಗಳು, ರೂ.೧.೦೧ ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ರೂ. ೮೫.೪೪ ಕೋಟಿ ಠೇವುಗಳನ್ನು ಹೊಂದಿದೆ ಎಂದರು.
ಸೊಸೈಟಿಯು ಈ ವರೆಗೆ ವಿವಿಧ ಕ್ಷೇತ್ರಗಳಿಗೆ ೫೨.೧೪ ಕೋಟಿ ಸಾಲವನ್ನು ನೀಡಿದ್ದು ಪ್ರತಿ ವರ್ಷವೂ ಅಡಿಟ್ ವರ್ಗದಲ್ಲಿ ‘ಅ’ ಶ್ರೇಣಿಯನ್ನು ಪಡೆಯಲಾಗಿದೆ ಎಂದರು.
ಪ್ರಧಾನ ವ್ಯವಸ್ಥಾಪಕ ಜಿ.ಎಸ್. ಬಿಜಗುಪ್ಪಿ ಮಾತನಾಡಿ ಸೊಸೈಟಿಯು ಈ ವರೆಗೆ ೬ ಶಾಖೆಗಳನ್ನು ಹೊಂದಿದೆ. ಸೊಸೈಟಿಯು ಗಣಕಿಕರಣಗೊಂಡಿದ್ದು, ಇ-ಸ್ಟಾಂಪಿಂಗ್ ಸೇವೆ, ಹಿರಿಯ ನಾಗರಿಕರೆಗೆ ಶೇ. ೦.೫೦ ಅಧಿಕ ಬಡ್ಡಿ ಸೇರಿದಂತೆ ಗ್ರಾಹಕರ ಸ್ನೇಹಿಯಾಗಿ ಸೊಸೈಟಿಯು ಸಹಕಾರಿ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುತ್ತಲಿದೆ ಎಂದರು.
ಸಮಾರಂಭದಲ್ಲಿ ಶಿಕ್ಷಣ, ಪೊಲೀಸ್, ಕಂದಾಯ, ಸಹಕಾರಿ ಕ್ಷೇತ್ರಗಳಲ್ಲಿ ನಿವೃತ್ತರಾದ ೩೫ ಮಹಿನೀಯರನ್ನು ಸನ್ಮಾನಿಸಿ ಗೌರವಿಸಿದರು.
ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳ ನಿರ್ದೇಶಕ ಡಾ. ಸಂಜಯ ಹೊಸಮಠ, ಪ್ರೊ. ಎಸ್.ಎಂ. ಕಮದಾಳ, ಲೆಕ್ಕಪರಿಶೋಧಕ ಸೈದಪ್ಪ ಗದಾಡಿ, ನಿವೃತ್ತ ಪ್ರಾಚಾರ್ಯ ಪ್ರೊ.ಎ. ಪಿ. ರಡ್ಡಿ ಮಾತನಾಡಿದರು.
ಸಮಾರಂಭದಲ್ಲಿ ಸೊಸೈಟಿ ಉಪಾಧ್ಯಕ್ಷ ಹನಮಂತ ಗಾಣಿಗೇರ, ನಿರ್ದೇಶಕರಾದ ಉದಯಕುಮಾರ ಜೋಕಿ, ಓಗೆಪ್ಪ ಬಬಲಿ, ಉದ್ದಪ್ಪ ಬಬಲಿ, ಮಹಾದೇವಯ್ಯ ಹಿರೇಮಠ, ವಿಠ್ಠಲ ಪಾಟೀಲ, ಕಾಶಿಬಾಯಿ ಬಿಜಗುಪ್ಪಿ, ಶಾಂತಾ ಮೂಡಲಗಿ, ಮಾಲಾ ಗೂಳನ್ನವರ, ಲಕ್ಷö್ಮವ್ವಾ ಮಾಹನ್ನವರ, ವಿಜಯ ಹೊರಟ್ಟಿ, ಮಲ್ಲಪ್ಪ ಅನಿಗೋಳ, ಕಾನೂನು ಸಲಹೆಗಾರರಾದ ಎಸ್.ಕೆ. ಬಾಲನಾಯಕ, ಡಿ.ಎಸ್. ರೊಡ್ಡನವರ ಇದ್ದರು.
ಅಶ್ವಿನಿ ಗಟನಟ್ಟಿ ಲೆಕ್ಕಪತ್ರ ವರದಿ ವಾಚಿಸಿದರು, ಬಸವರಾಜ ಹಿರೇಮಠ ಮತ್ತು ಪ್ರಧಾನ ವ್ಯವಸ್ಥಾಪಕ ಜಿ.ಎಸ್. ಬಿಜಗುಪ್ಪಿ ನಿರೂಪಿಸಿದರು, ಸಹ ವ್ಯವಸ್ಥಾಪಕ ಎನ್.ಆರ್. ಜೋಕಿ ವಂದಿಸಿದರು.
Gadi Kannadiga > Local News > ಚೈತನ್ಯ ಕೋ.ಆಪ್ ಸೊಸೈಟಿಗೆ ರೂ. ೨.೦೩ ಕೋಟಿ ಲಾಭ
ಚೈತನ್ಯ ಕೋ.ಆಪ್ ಸೊಸೈಟಿಗೆ ರೂ. ೨.೦೩ ಕೋಟಿ ಲಾಭ
Suresh24/08/2023
posted on