WhatsApp Group
Join Now
ಬೆಂಗಳೂರು; ಬೆಂಗಳೂರಿನ ಕರ್ನಾಟಕ ಸ್ವಾಭಿಮಾನಿ ವೇದಿಕೆಯು ದಿ.ಚಂದ್ರಶೇಖರ ಪಾಟೀಲ( ಚಂಪಾ) ಸ್ಮರಣಾರ್ಥ ಪ್ರತಿವರ್ಷ
ನೀಡುವ ” ಚಂಪಾ ಸಿರಿಗನ್ನಡ ಪ್ರಶಸ್ತಿ”ಯನ್ನು
ಇಂದು ಬುಧವಾರ ಜೂನ್ 18 ರಂದು
ಖ್ಯಾತ ಸಾಹಿತಿ ಡಾ.ಬರಗೂರು
ರಾಮಚಂದ್ರಪ್ಪ ಅವರು ಬೆಂಗಳೂರಿನ
ರವೀಂದ್ರ ಕಲಾಕ್ಷೇತ್ರದ ನಯನ
ಸಭಾಂಗಣದಲ್ಲಿ ಸಂಜೆ ನಡೆದ
ಸಮಾರಂಭದಲ್ಲಿ ಅಶೋಕ್ ಚಂದರಗಿ ಅವರಿಗೆ ಪ್ರಧಾನ ಮಾಡಿ ಗೌರವಿಸಿದರು.
ಕನ್ನಡ
ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
ಶ್ರೀ ಪುರುಷೋತ್ತಮ ಬಿಳಿಮಲೆ ಅವರು
ಅಧ್ಯಕ್ಷತೆ ವಹಿಸಿದ್ದರು.ಚಂಪಾ ಪುತ್ರಿ
ಮೀನಾ ಪಾಟೀಲ,ವೇದಿಕೆಯ ಅಧ್ಯಕ್ಷ
ಶಂಕರ ಹೂಗಾರ,ಕನ್ನಡ ಜನಶಕ್ತಿ ಕೇಂದ್ರದ
ಅಧ್ಯಕ್ಷ ಸಿ.ಕೆ.ರಾಮೇಗೌಡ ವೇದಿಕೆಯಲ್ಲಿದ್ದರು.