This is the title of the web page
This is the title of the web page

Please assign a menu to the primary menu location under menu

Local News

ಚಂಡಿಗಡ ವಿವಿ ಪ್ರಕರಣ ಬೆಳಗಾವಿ ಹಾಸ್ಟೆಲ್ ವಾರ್ಡನ್ ಗಳ ಸಭೆ ಕರೆದ ಎಸ್.ಪಿ


ಬೆಳಗಾವಿ: ಚಂಡಿಗಡ ವಿವಿ ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ಲೀಕ ಪ್ರಕರಣದಿಂದ ಮುಂಜಾಗೃತ ಕ್ರಮವಾಗಿ ಬೆಳಗಾವಿ ಎಸ್.ಪಿ ಡಾ‌. ಸಂಜೀವ ಪಾಟೀಲ್ ಹಾಸ್ಟೆಲ್ ವಾರ್ಡನ್ ಗಳ ಸಭೆ ಕರೆದು ಅವಘಡಳು ಸಂಭವಿಸಿದಂತೆ ಕಟ್ಟು ನಿಟ್ಟಿನ ಕ್ರಮ ಗೈಗೊಳ್ಳಲು ಸೂಚಿಸಿದ್ದಾರೆ.

ಜಿಲ್ಲೆಯ ಆಯಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬರುವ ಹಾಸ್ಟೆಲ್ ಗಳ ವಾರ್ಡನ್ ಗಳನ್ನು ಸಭೆ ಕರೆಯುವ ಮೂಲಕ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಚಂಡಿಗಡ ವಿವಿ ವಿದ್ಯಾರ್ಥಿನಿಯರ ಹಾಸ್ಟೆಲ್ ನಲ್ಲಿಯ ಖಾಸಗಿ ವಿಡಿಯೋ ಲೀಕ ಆಗಿದೆ ಎಂದು ಅಲ್ಲಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಸಂಬಂಧಿಸಿದೆ ಚಂಡಿಗಡ ಪೊಲೀಸರು ತನಿಖೆ ನಡೆಸಿದ್ದು ಓರ್ವ ವಿದ್ಯಾರ್ಥಿನಿ ತನ್ನ ಖಾಸಗಿ ವಿಡಿಯೋವನ್ನು ಮಾತ್ರ ಅವಳ ಸ್ನೇಹಿತನಿಗೆ ಕಳುಹಿಸಿದ್ದು ಬೇರೆ ಯಾವುದೇ ವಿಡಿಯೋಗಳನ್ನು ಮಾಡಿಲ್ಲ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಪೊಲೀಸರು ಎಚ್ಚೆತ್ತುಕೊಂಡಿದ್ದು ಅವಘಡಗಳು ಸಂಭವಿಸುವ ಮೊದಲೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ವಸತಿ ನಿಲಯ ಪಾಲಕರಿಗೆ ಸೂಚನೆ ನೀಡಿದ್ದಾರೆ.


Gadi Kannadiga

Leave a Reply