ಬೆಳಗಾವಿ ೧- ಸಮಾಜದಲ್ಲಿ ಜನರು ಹೇಗೆ ಬದುಕಬೇಕು ಅಲ್ಲದೇ ಅರ್ಥಪೂರ್ಣ ಜೀವನವನ್ನು ಹೇಗೆ ನಡೆಸಬೇಕೆಂಬುದನ್ನು ವಿಶ್ವಗುರು ಬಸವಣ್ಣವರ ವಚನಗಳು ಹೇಳಿಕೊಡುತ್ತವೆ. ಜೀವನದಲ್ಲಿ ವಚನಗಳು ಬದಕುವ ದಾರಿಯನ್ನು ಹೇಳಿ ಕೊಡುತ್ತವೆ ಎಂದು ಸ್ವರಾಂಜಲಿ ಸಂಸ್ಥೆಯ ಸ್ಥಾಪಕ ಚಂದ್ರಶೇಖರ ಹಿರೇಮಠ ಇಂದಿಲ್ಲಿ ಹೇಳಿದರು.
ಹಿಂದವಾಡಿಯ ಸ್ವರಾಂಜಲಿ ಕರೋಕೆ ಸಂಗೀತ ಶಾಲೆಯವರು ತಮ್ಮ ಶಾಲೆಯಲ್ಲಿ ಬಸವ ಜಯಂತಿಯನ್ನು ಆಚರಿಸಿದರು. ಈ ಸಂದರ್ಬದಲ್ಲಿ ಸ್ವರಾಂಜಲಿ ಸ್ಥಾಪಕ ಚಂದ್ರಶೇಖರ ಮೇಲಿನಂತೆ ಹೇಳಿದರು.
ಮುಂದೆ ಮಾತನಾಡುತ್ತ ಚಂದ್ರಶೇಖರ ಅವರು ವಚನಗಳನ್ನು ಸಂಗೀತವು ಸಾಮಾನ್ಯ ಜನರ ಬಾಯಲ್ಲಿ ಹರಿದಾಡುವಂತೆ ಮಾಡುತ್ತದೆ ಎಂದು ಹೇಳಿದರು.
ಜಗಜ್ಯೋತಿ ಬಸವೇಶ್ವರ ಮೂರ್ತೀ ಗೆ ಮಾಲೆ ಹಾಕಿ ಪೂಜಿಸಿ ಸಿಹಿ ಹಂಚಿದರು.
ಈ ಸಂದರ್ಭದಲ್ಲಿ ಲೇಖಕ ಗುಂಡೇನಟ್ಟಿ ಮಧುಕರ, ಮಂಜುನಾಥ ಅಣ್ಣಯ್ಯ ಹಿರೇಮಠ, ಜಿ. ಎಸ್ ಸೋನಾರ, ಪಾಂಡುರಂಗ, ಪ್ರಭಾಕರ ಕೊಲ್ಹಾರ, ಚಂದ್ರಕಾಂತ ಅಪ್ಪಣ್ಣವರ, ಶ್ರೀಮತಿ ಸುಕನ್ಯಾ ಸೂಜಿ ಉಪಸ್ಥಿತರಿದ್ದರು.