ಗದಗ ಜನೆವರಿ ೨೭: ಲಕ್ಷೆ÷್ಮÃಶ್ವರ ಉಪವಿಭಾಗದ ಬೆಳ್ಳಟ್ಟಿ ಶಾಖೆಯ ವ್ಯಾಪ್ತಿಯಲ್ಲಿ ಎಸ್.ಡಿ.ಪಿ ಯೋಜನೆಯಡಿಯಲ್ಲಿ ೧೧ಕೆ.ವ್ಹಿ. ಲಿಂಕ್ ಲೈನ್ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ೧೧೦ಕೆ.ವ್ಹಿ. ಬೆಳ್ಳಟ್ಟಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-೭ ಹೊಸೂರು ಈ.ಐ.ಪಿ ಮಾರ್ಗ, ಎಫ್-೯ ತಾರಿಕೊಪ್ಪ ಹಾಗೂ ಎಫ್-೧೦ ಕೊಂಚಿಗೇರಿ ಈ.ಐ.ಪಿ ಮಾರ್ಗದ ವಿದ್ಯುತ್ ಸರಬರಾಜು ವೇಳೆಯಲ್ಲಿ ಬದಲಾವಣೆಯಾಗಲಿದೆ. ಜನೆವರಿ ೩೦ ರಿಂದ ಫೆ.೫ ರವರೆಗೆ ವಿದ್ಯುತ್ ಪೂರೈಕೆಯಾಗುವ ವೇಳಾಪಟ್ಟಿ ಈ ಕೆಳಗಿನಂತಿದೆ.
ಎಫ್-೭ ಹೊಸೂರು ಈಐಪಿ ಮಾರ್ಗದಲ್ಲಿ ಅಲಗಿಲವಾಡ, ಬೆಳ್ಳಟ್ಟಿ, ತಂಗೋಡ, ಕೋಗನೂರ, ಗೋವನಕೊಪ್ಪ, ಚಿಕ್ಕಸವಣೂರ ಗ್ರಾಮಗಳಿಗೆ ಬೆ. ೬ ಗಂಟೆಯಿಂದ ಮ.೧೨ ರವರೆಗೆ, ಎಫ್.-೯ ತಾರಿಕೊಪ್ಪ ಈ.ಐ.ಪಿ. ಮಾರ್ಗದಲ್ಲಿ ತಾರಿಕೊಪ್ಪ, ಕೆರಳ್ಳಿ, ಸೇವಾನಗರ, ಹೊಸೂರವಡವಿ, ಬೆಳಗಟ್ಟಿ ಗ್ರಾಮಗಳಿಗೆ ಬೆ ೬ ರಿಂz ಮ ೧೨ ರವರೆಗೆ. ಎಫ್-೧೦ ಕೊಂಚಿಗೇರಿ ಈ.ಐ.ಪಿ. ಮಾರ್ಗದಲ್ಲಿ ಅಂಕಲಿ, ಕೊಂಚಿಗೇರಿ, ಬಿಜ್ಜೂರ, ನಾಗರಮಡುವು, ಕೊಕ್ಕರಗುಂದಿ, ಬೂದಿಹಾಳ ಗ್ರಾಮಗಳಿಗೆ ಮ.೧೨ ರಿಂದ ಸಂಜೆ ೬ ರವರೆಗೆ ವಿದ್ಯುತ್ ಪೂರೈಕೆಯಾಗಲಿದೆ ಎಂದು ಕಾರ್ಯ ಮತ್ತು ಪಾಲನೆ ವಿಭಾಗ ಕಾರ್ಯನಿರ್ವಾಹಕ ಇಂಜನೀಯರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > State > ವಿದ್ಯುತ್ ಸರಬರಾಜು ವೇಳೆಯಲ್ಲಿ ಬದಲಾವಣೆ
More important news
ಲಿಂಗಾಯತ ಸಂಘಟನೆಯಿಂದ ಮಹಿಳಾ ದಿನಾಚರಣೆ
20/03/2023
ಶ್ರೀ ರೇಣುಕಾಚಾರ್ಯ ಜಯಂತಿ ಮಾ.೧೯ಕ್ಕೆ
17/03/2023
ಸಾರ್ವಜನಿಕರ ಗಮನಕ್ಕೆ
17/03/2023
ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
17/03/2023
ಸಂತೆ ಕರ ಲಿಲಾವು
16/03/2023