This is the title of the web page
This is the title of the web page

Please assign a menu to the primary menu location under menu

Local News

ಬದಲಾದ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಮಕ್ಕಳ ಹೈಟೆಕ್ ವಾರ್ಡ ಉದ್ಘಾಟನೆ


 ಶುಕ್ರವಾರ ದಿ ೦೮.ರಂದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆರವರು ಬೆಳಗಾವಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕ್ಕ ಮಕ್ಕಳ ಆಸ್ಪತ್ರೆ, ಶಿಶು ವಿಹಾರ ಕೇಂದ್ರ, ಆನಲೈನ ಸೇವೆ, ವಿಶೇಷ ಚೇತನರಿಗೆ ಪ್ರತ್ಯೇಕ ಕೌಂಟರ್, ಎಸ್‌ಸಿ.ಎಎಸ್‌ಟಿ ವೈದ್ಯ ವಿದ್ಯಾರ್ಥಿಗಳಿಗೆ ಲ್ಯಾಪಟಾಪ್ ವಿತರಣೆ ಇನ್ನಿತರೆ ಹಲವಾರು ಕಾರ್ಯಗಳಿಗೆ ಚಾಲನೆ ನೀಡಿದರು.
ಬೆಳಗಾವಿ ನಗರದಲ್ಲಿನ ಜಿಲ್ಲಾ ಆಸ್ಪತ್ರೆಯು ಈ ಹಿಂದಿನಗಿಂತಲೂ ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಅನಿಲ ಬೆನಕೆರವರು ಶಾಸಕರಾಗಿ ಬಂದ ನಂತರ ಹಲವಾರು ಬದಲಾವಣೆಯನ್ನು ಕಂಡಿದೆ ಎನ್ನುವದರಲ್ಲಿ ಯಾವುದೇ ಸಂದೇಹವಿಲ್ಲ. ಹೌದು ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಈ ಹಿಂದೆ ಅಲ್ಲಿನ ಅವ್ಯವಸ್ಥೆ, ಭ್ರಷ್ಟಾಚಾರ, ಅಸ್ವಚ್ಚತೆ, ಅಸಮರ್ಪಕ ಚಿಕಿತ್ಸೆಯಿಂದಾಗಿ ಇಡಿ ರಾಜ್ಯಾದ್ಯಂತ ಅಪಸ್ವರಗಳ ಮಾತುಗಳು ಕೇಳಿ ಬರುತ್ತಿತ್ತು. ಇದನ್ನು ನೋಡಿ ಅಲ್ಲಿ ಯಾರು ಚಿಕಿತ್ಸೆಯನ್ನು ಪಡೆಯುವಲ್ಲಿ ಹಿಂದೇಟು ಹಾಕುತ್ತಿದ್ದರು. ಕೋರೊನ ಕಾಲದಲ್ಲಿ ಆಸ್ಪತ್ರೆಯಲ್ಲಿನ ಕಾರ್ಯವೈಕರಿಯನ್ನು ಗಮನಿಸಿ ಸ್ವತಃ ಭಿಮ್ಸ ಆಸ್ಪತ್ರೆಗೆ ಬಿ.ಎಸ್. ಯಡಿಯೂರಪ್ಪಾಜಿ ರವರು ಬೇಟಿಯಾಗಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಜೊತೆಗೆ ಭೀಮ್ಸ್ ಆಸ್ಪತ್ರೆಗೆ ಪ್ರಾಧೇಶಿಕ ಆಯುಕ್ತ ಆಮ್ಲಾನ ಆದಿತ್ಯ ಬಿಸ್ವಾಸ್ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿದ್ದರು. ಅಂದಿನಿಂದ ಭೀಮ್ಸ್ ಆಸ್ಪತ್ರೆಯು ಪ್ರಾದೇಶಿಕ ಆಯುಕ್ತರ ಹಾಗೂ ಶಾಸಕರ ಇಚ್ಚಾಸಕ್ತಿಯಿಂದಾಗಿ ಭೀಮ್ಸ್ ಆಸ್ಪತ್ರೆಯು ಪ್ರಗತಿ ಪಥದಲ್ಲಿ ಸಾಗುತ್ತಿದೆ.
ಬೆಳಗಾವಿ ಜಿಲ್ಲಾ ಆಸ್ಪತ್ರೆಯ ಬಗ್ಗೆ ಹೆಚ್ಚು ಗಮನ ಹರಿಸಿದ ಅವರು ಸರ್ಕಾರದ ಹಾಗೂ ಶಾಸಕರ ನಿಧಿಯಡಿಯಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಮೊಟ್ಟ ಮೊದಲು ಹೆರಿಗೆ ವಾರ್ಡನಲ್ಲಿನ ಸ್ವಚ್ಚತೆ, ವಿಶೇಷ ಹಿರಿಗೆ ಕೊಠಡಿಗಳು, ಹೈಟೆಕ್ ಶಸ್ತ್ರ ಚಿಕಿತ್ಸಾ ವಿಭಾಗ, ಪ್ರೆöÊವೇಟ್ ಕೊಠಡಿಗಳು, ಕೋವಿಡ್ ಕಾಲದಲ್ಲಿ ಆಸ್ಪತ್ರೆಯಲ್ಲಿ ೩ ಆಕ್ಸಿಜನ್ ಉತ್ಪಾದನಾ ಘಟಕಗಳ ಸ್ಥಾಪನೆ, ಹೆಚ್ಚಿನ ಸಂಖ್ಯೆಗಳ ಬೆಡ್‌ಗಳ ವ್ಯವಸ್ಥೆ, ಎಲ್ಲ ತರಹದ ಶಸ್ತ್ರ ಚಿಕಿತ್ಸೆಗೆ ನುರಿತ ಸಿಬ್ಬಂದಿಗಳ ನೇಮಕ, ಹೈಟೆಕ್ ಡಯಾಲಿಸಿಸ್ ಸೆಂಟರ್, ಸಿಟಿ ಸ್ಕಾö್ಯನ್ ಸೆಂಟರ್, ಎಮ್.ಆರ್.ಆಯ್ ಸೆಂಟರ್ ಹಾಗೂ ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಸರ್ಕಾರಿ ಆಸ್ಪತ್ರೆಯಲ್ಲಿನ ಒಳರೋಗಿಗಳಿಗೆ ಉಚಿತ ಹೈಜನ್ ಕಿಟ್ ವಿತರಣೆ, ರೋಗಿಗಳಿಗೆ ಉಚಿತ ಪೌಷ್ಠಿಕ ಆಹಾರ ವಿತರಣೆ ಅದಲ್ಲದೆ ಹೈಟೆಕ್ ಆಯ್.ಸಿ.ಯು, ಎಮ್.ಆಯ್.ಸಿ.ಯು, ಪಿ.ಆಯ್.ಸಿ.ಯು, ಎನ್.ಆಯ್.ಸಿ,ಯು ನಂತಹ ಹಲವಾರು ಕೆಲಸಗಳನ್ನು ಮಾಡಿ ಬೆಳಗಾವಿ ಜಿಲ್ಲೆಯ ಹಾಗೂ ನೆರೆ ರಾಜ್ಯಗಳಾದ ಗೋವಾ, ಮಹಾರಾಷ್ಟ್ರದ ಬಡ ರೋಗಿಗಳಿಗೆ ಸೂಕ್ತ ಮತ್ತು ಉತ್ತಮ ಚಿಕಿತ್ಸೆ ದೊರಕುವಲ್ಲಿ ಪ್ರಾಮಾಣಿಕವಾಗಿ ಶ್ರಮ ವಹಿಸಿದ್ದಾರೆ.
ಸದ್ಯ ಬೆಳಗಾವಿ ಜಿಲ್ಲೆಯ ವಿವಿಧ ಗ್ರಾಮಗಳಿಂದ ಜಿಲ್ಲಾಸ್ಪತ್ರೆಗೆ ಬರುವ ಗರ್ಭಿಣಿಯರು, ಮಹಿಳೆಯರು, ಮಕ್ಕಳು ಸೇರಿದಂತೆ ವಿವಿಧ ರೋಗಿಗಳಿಗೆ ಗುನಮಟ್ಟದ ಚಿಕಿತ್ಸೆ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರವು ಸಮಗ್ರ ಅಭಿವೃಧ್ದಿ ಕೈಗೊಂಡಿದೆ. ಆಸ್ಪತ್ರೆಯಲ್ಲಿ ಚಿಕ್ಕಮಕ್ಕಳ ವಾರ್ಡ ಹೈಟೆಕ್ ಸ್ಪರ್ಶ ಪಡೆದುಕೊಂಡು ಖಾಸಗಿ ಆಸ್ಪತ್ರೆಗಳನ್ನು ಮೀರಿಸುವಂತಿದೆ. ಭಿಮ್ಸ್ನ ಮಕ್ಕಳ ಐಸಿಯು ವಾರ್ಡನಲ್ಲಿ ದಾಖಲಾಗುವ ಮಕ್ಕಳಲ್ಲಿ ಭಯವನ್ನು ದೂರ ಮಾಡುವ ನಿಟ್ಟಿನಲ್ಲಿ ಭೀಮ್ಸ್ ಅಧಿಕಾರಿಗಳು ಪ್ರಾಯೋಗಿವಾಗಿ ಈಗಾಗಲೇ ಒಂದು ವಾರ್ಡನಲ್ಲಿ ಅತ್ಯಾಕರ್ಷಣೆಯ ಚಿತ್ರಗಳನ್ನು ಬಿಡಿಸಿ ವಾರ್ಡಗಳಿಗೆ ರೂಪ್, ಗೋಡೆಗಳಿಗೆ ಪಿ.ಓ.ಪಿ ಮಾಡಿಸಿ ಚಿತ್ರಗಳನ್ನು ಬಿಡಿಸಲಾಗಿದೆ. ಅದಲ್ಲದೆ ಕಿಟಕಿಯ ಕರ್ಟನಗಳಿಗೂ ಆಕರ್ಷಕ ಚಿತ್ರಗಳನ್ನು ಬಿಡಿಸಿ ಮಕ್ಕಳಲ್ಲಿನ ಭಯವನ್ನು ಹೋಗಲಾಡಿಸಲು ಅನೇಕ ಆಕರ್ಷಕ ಪ್ರಾಣಿ ಪಕ್ಷಿ, ಆಟಗಳ, ನಿಸರ್ಗದ ಚಿತ್ರಗಳನ್ನು ಮೂಡಿಲಾಗಿದೆ. ಇನ್ನುಳಿದ ೫ ವಾರ್ಡಗಳಲ್ಲಿಯು ಚಿತ್ರ ಬಿಡಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಮೂರು ತಿಂಗಳಲ್ಲಿ ಅವುಗಳು ಪೂರ್ಣವಾಗಲಿವೆ.
ಹೈಟೆಕ್ ಚಿಕ್ಕ ಮಕ್ಕಳ ವಾರ್ಡ ಉದ್ಘಾಟಿಸಿ ಮಾತನಾಡಿದ ಶಾಸಕ ಅನಿಲ ಬೆನಕೆರವರು ಬೆಳಗಾವಿ ಭೀಮ್ಸ್ ಆಸ್ಪತ್ರೆಯು ಇಡೀ ದೇಶದಲ್ಲಿ ೧೨ ನೇ ಸ್ಥಾನ ಮತ್ತು ಕರ್ನಾಟಕದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದು ನಮಗೆ ಹರ್ಷ ತಂದಿದೆ. ಭೀಮ್ಸ್ ಆಸ್ಪತ್ರೆಯ ಆಡಳಿತಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ, ನಿರ್ದೇಶಕ ಡಾ. ಆರ್. ಜಿ. ವಿವೇಕಿ, ಆಸ್ಪತ್ರೆಯ ಎಲ್ಲ ವೈಧ್ಯರು, ನರ್ಸಗಳು ಹಾಗೂ ಸಿಬ್ಬಂದಿಗಳು ಕಾರಣಿಭೂತರಾಗಿದ್ದಾರೆ. ಆದ್ದರಿಂದ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸಿದರು. ಜೊತೆಜೊತೆಗೆ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಸಿಬ್ಬಂದಿ ಮಕ್ಕಳಿಗೆ ಸುಸಜ್ಜಿತ ಶಿಶುವಿಹಾರ ಕೇಂದ್ರ, ವಿಶೇಷ ಚೇತನರಿಗೆ ಪ್ರತ್ಯೇಕ ಕೌಂಟರ್ ಸ್ಥಾಪನೆ, ಆನ್‌ಲೈನ್ ಪೇಮೆಂಟ್ ವ್ಯವಸ್ಥೆ ಸೇರಿದಂತೆ ಪರಿಶಿಷ್ಠ ಜಾತಿ ಪರಿಶಿಷ್ಟ ಪಂಗಡಗಳ ವೈಧ್ಯ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ ಕಾರ್ಯಕ್ರಮವನ್ನು ಈ ಸಂದರ್ಭದಲ್ಲಿ ಶಾಸಕರು ನೆರವೇರಿಸಿದರು.
ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆ, ಪ್ರಾದೇಶಿಕ ಆಯುಕ್ತ ಆಮ್ಲಾನ ಆದಿತ್ಯ ಬಿಸ್ವಾಸ್, ನಿರ್ದೇಶಕ ಡಾ. ಆರ್, ಜಿ. ವಿವೇಕಿ, ವೈಧ್ಯಾಧಿಕಾರಿಗಳು, ವೈಧ್ಯ ಸಿಬ್ಬಂದಿಗಳು ಹಾಗೂ ಇತರರು ಉಪಸ್ಥಿತರಿದ್ದರು.


Gadi Kannadiga

Leave a Reply