ಕೊಪ್ಪಳ, ಅ. ೧೨: ರಾಜ್ಯಾದ್ಯಾಂತ ಸಂಚರಿಸುತ್ತಿರುವ ಚನ್ನಮ್ಮಾಜಿಯವರ ವೀರ ಜ್ಯೋತಿ ಯಾತ್ರೆಯು ಇಂದು (ಅ.೧೨) ಕೊಪ್ಪಳಕ್ಕೆ ಆಗಮಿಸಿತು. ಈ ವೇಳೆ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು ಹಾಗೂ ಹಲವು ಗಣ್ಯರು ಪುಷ್ಪಾರ್ಪಣೆ ಮೂಲಕ ಸ್ವಾಗತ ಕೋರಿದರು.
೨೦೨೨ರ ಕಿತ್ತೂರು ಉತ್ಸವದ ಅಂಗವಾಗಿ ಕಿತ್ತೂರು ಚನ್ನಮ್ಮಾಜಿಯವರ ವೀರ ಜ್ಯೋತಿ ಯಾತ್ರಾ ವಾಹನ ಸಂಚರಿಸುತ್ತಿದೆ. ಜ್ಯೋತಿ ಯಾತ್ರೆಯು ಕೊಪ್ಪಳ ನಗರಕ್ಕೆ ಆಗಮಿಸುತ್ತಿದ್ದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು, ಸಾಹಿತಿಗಳು, ಕಲಾವಿದರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ತಹಶೀಲ್ದಾರ್ ಕಚೇರಿ ಆವರಣದಲ್ಲಿ ಸ್ವಾಗತಿಸಿ, ಪೂಜಾ ಹಾಗೂ ಪುಷ್ಪಾರ್ಪಣೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ.ಕಡಿ, ಕೊಪ್ಪಳ ತಹಶೀಲ್ದಾರ್ ವಿಠಲ್ ಚೌಗಲಾ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಕೃಷ್ಣಮೂರ್ತಿ ದೇಸಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಹಳ್ಳಿ ಸೇರಿದಂತೆ ಜನಪ್ರತಿನಿಧಿಗಳು, ಸಾಹಿತಿಗಳು, ಕಲಾವಿದರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಅದ್ದೂರಿ ಮೆರವಣಿಗೆ: ಯಾತ್ರಾ ವಾಹನದ ಮೆರವಣಿಗೆಯು ತಹಶೀಲ್ದಾರ್ ಕಚೇರಿ ಆವರಣದಿಂದ ಆರಂಭಗೊಂಡು ಬಸವೇಶ್ವರ ವೃತ್ತದವರೆಗೆ ಅದ್ದೂರಿಯಾಗಿ ಸಾಗಿತು. ನಂತರ ಯಾತ್ರಾ ವಾಹನವು ಗಿಣಿಗೇರಾ ಮಾರ್ಗವಾಗಿ ವಿಜಯನಗರ ಜಿಲ್ಲೆಯತ್ತ ಸಂಚರಿಸಿತು.
Gadi Kannadiga > Local News > ಕೊಪ್ಪಳಕ್ಕೆ ಚನ್ನಮ್ಮಾಜಿಯವರ ವೀರ ಜ್ಯೋತಿ ಯಾತ್ರೆ ಆಗಮನ : ಪುಷ್ಪಾರ್ಪಣೆ
More important news
ವ್ಯಕ್ತಿ ನಾಪತ್ತೆ
30/01/2023
ನೇಕಾರರಿಗೆ ವಿಶೇಷ ಪ್ಯಾಕೇಜ್
30/01/2023
ಫ.೧ ರಂದು ಮಡಿವಾಳ ಮಾಚಿದೇವ ಜಯಂತಿ ಉತ್ಸವ
27/01/2023
ಜ.೨೮ ರಂದು ಸವಿತಾ ಮಹರ್ಷಿ ಜಯಂತಿ ಉತ್ಸವ
27/01/2023