ಗದಗ ಅ.೧೨: ಚನ್ನಮ್ಮನ ಕಿತ್ತೂರ ಉತ್ಸವದ ಅಂಗವಾಗಿ ಜಿಲ್ಲೆಗೆ ಆಗಮಿಸಿದ ಕಿತ್ತೂರ ಚನ್ನಮ್ಮ ವಿಜಯೋತ್ಸವದ ವಿಜಯ ಜ್ಯೋತಿಗೆ ಬುಧವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಬಿಳ್ಕೊಡಲಾಯಿತು. ವಿಧಾನ ಪರಿಷತ ಸದಸ್ಯರಾದ ಎಸ್.ವಿ.ಸಂಕನೂರ ಅವರು ಚನ್ನಮ್ಮಾಜಿ ವಿಜಯ ಜ್ಯೋತಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ನಮಮ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿದ್ದಪ್ಪ ಪಲ್ಲೇದ, ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಉಪವಿಭಾಗಾಧಿಕಾರಿ ಅನ್ನಪೂರ್ಣ, ತಹಶೀಲ್ದಾರ ಕೀಶನ ಕಲಾಲ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಸಹಾಯಕ ನಿರ್ದೆಶಕ ವೀರಯ್ಯಸ್ವಾಮಿ ಹಿರೇಮಠ ಸೇರಿದಂತೆ ಚನ್ನಮ್ಮಾಜಿ ಅಭಿಮಾನಿಗಳು, ಸಾರ್ವಜನಿಕರು ಹಾಜರಿದ್ದರು.
ಜಾನಪದ ಕಲಾ ತಂಡಗಳೊಂದಿಗೆ ಕಿತ್ತೂರ ಚನ್ನಮ್ಮಾಜಿ ವಿಜಯ ಜ್ಯೋತಿಯು ಲಕ್ಕುಂಡಿ, ಬನ್ನಿಕೊಪ್ಪ ಮಾರ್ಗವಾಗಿ ಕೊಪ್ಪಳ ಜಿಲ್ಲೆಗೆ ಪ್ರಯಾಣ ಬೆಳೆಸಿತು.
ಅಕ್ಟೋಬರ ೨೩ ರಿಂದ ಪ್ರಾರಂಭವಾಗುವ ಕಿತ್ತೂರ ಉತ್ಸವದ ಅಂಗವಾಗಿ ಕಿತ್ತೂರ ಚನ್ನಮ್ಮಾಜಿ ವಿಜಯೋತ್ಸವದ ವಿಜಯ ಯಾತ್ರೆ ಜ್ಯೋತಿಗೆ ಮಾನ್ಯ ಮುಖ್ಯಮಂತ್ರಿಗಳು ಬೆಂಗಳೂರಿನ ವಿಧಾನ ಸೌಧದಲ್ಲಿ ಅಕ್ಟೋಬರ ೨ ರಂದು ಚಾಲನೆ ನೀಡಿದ್ದರು. ಈ ವಿಜಯ ಜ್ಯೋತಿಯು ರಾಜ್ಯಾದ್ಯಂತ ಸಂಚರಿಸಿ ಅಕ್ಟೋಬರ ೨೩ ರಂದು ಬೆಳಗಾವಿ ಜಿಲ್ಲೆಯ ಕಿತ್ತೂರ ತಲುಪಲಿದೆ.
Gadi Kannadiga > State > ಚನ್ನಮ್ಮನ ಕಿತ್ತೂರ ಉತ್ಸವ: ವಿಜಯ ಜ್ಯೋತಿಗೆ ಬೀಳ್ಕೊಡುಗೆ