This is the title of the web page
This is the title of the web page

Please assign a menu to the primary menu location under menu

Local News

ಮಕ್ಕಳ ಕಲಿಕಾಸಕ್ತಿ, ಚೈತನ್ಯಶೀಲತೆ ವೃದ್ಧಿಗೆ ಪೂರ್ವ ಪ್ರಾಥಮಿಕ ಶಿಕ್ಷಣ ಪೂರಕ: ಚನ್ನರಾಜ ಹಟ್ಟಿಹೊಳಿ


ಬೆಳಗಾವಿ: ಪೂರ್ವ ಪ್ರಾಥಮಿಕ ಶಿಕ್ಷಣ ವಿದ್ಯಾರ್ಥಿ ಜೀವನದ ಬುನಾದಿಯಾಗಿದ್ದು ಮಕ್ಕಳಲ್ಲಿ ಕಲಿಕೆಯ ಆಸಕ್ತಿ, ಚೈತನ್ಯಶೀಲತೆ ವೃದ್ಧಿಗೆ ಪೂರಕವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.

ಅವರು ನಾಗೇರಹಾಳ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ವತಿಯಿಂದ ನೂತನವಾಗಿ ನಿರ್ಮಾಣಗೊಂಡ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ದೃಷ್ಟಿಯಿಂದ ಶೈಕ್ಷಣಿಕ ಮೂಲಸೌಕರ್ಯಗಳನ್ನು ಆದ್ಯತೆಯ ಮೇರೆಗೆ ಅಭಿವೃದ್ಧಿಪಡಿಸಲು ತಾವು ಬದ್ಧರೆಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಗಂಗಾಧರ ಯಳ್ಳೂರ ಗುರುಗಳು, ನಾಗಪ್ಪ ಯಳ್ಳೂರ, ಬಸವಣ್ಣೆಪ್ಪ ಪಗಾದ, ನಾಗಯ್ಯ ಹವಾಲ್ದಾರ, ಸುರೇಶ ಇಟಗಿ, ಶಿವಾನಂದ ಗುಂಡುಗೋಳ, ಭಾರತಿ ತಳವಾರ, ಸುಭಾಷ ಡೊಂಗದಗಾಂವಿ, ನಾಗಪ್ಪ ದೇಮಿನಕೊಪ್ಪ, ಅಸ್ಲಮ್ ಶಿಂಪಿ, ಸೋಮಪ್ಪ ಧರೆಪ್ಪಗೋಳ, ಈರಪ್ಪ ಅಂಗಡಿ, ಚಂಬಯ್ಯ ಹಿರೇಮಠ, ಭಾರತಿ ಹಿರೇಮಠ, ಈರಪ್ಪ ಯಳ್ಳೂರ, ಸಂತೋಷ ಕಂಬಿ, ಸೋಮಪ್ಪ ರಾಯಣ್ಣವರ, ನಾಗಪ್ಪ ದೊಡವಾಡಿ, ಸಿಡಿಪಿಓ ಚಂದ್ರಶೇಖರ ಸಖಸಾರೆ, ಸೋಮಪ್ಪ ತಳವಾರ, ಸುಧೀರ ಬಾನಿ, ಶ್ರೀಶೈಲ್ ಅಂಗಡಿ, ಈರಪ್ಪ ಅಂಗಡಿ, ಬಸವ್ವ ಕಮ್ಮಾರ, ವೈಶಾಲಿ ಬಡಿಗೇರ, ಕೆಕೆ ಕೊಪ್ಪ ಗ್ರಾಮದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸರ್ವಸದಸ್ಯರು, ನಾಗೇರಹಾಳ ಗ್ರಾಮದ ಸಮಸ್ತ ನಾಗರಿಕರು, ಗುರು ಹಿರಿಯರು ಉಪಸ್ಥಿತರಿದ್ದರು.


Gadi Kannadiga

Leave a Reply