This is the title of the web page
This is the title of the web page

Please assign a menu to the primary menu location under menu

State

ಪುಟ್ಟರಾಜರ ಸ್ಮರಣೆ  ಅಂದ್ರೆ  ಶಿವಶರಣರ ಸ್ಮರಣೆ ಮಾಡಿದಂತೆ: ಚನ್ನವಿರಸ್ವಾಮಿ ಹಿರೇಮಠ


ಕಲಘಟಗಿ: ಪಂ. ಪುಟ್ಟರಾಜ ಗವಾಯಿಗಳ ಸ್ಮರಣೆ ಮಾಡಿದರೆ ಬಸವಾದಿ ಶರಣರ, ಹಾನಗಲ್ಲ ಕುಮಾರೇಶ್ವರ, ಪಂಚಾಕ್ಷರಿ ಗವಾಯಿ ಹಾಗೂ ಎಲ್ಲ ಶಿವಶರಣರ ಸ್ಮರಣೆ ಮಾಡಿದಂತೆ ಎಂದು ಪುಟ್ಟರಾಜ ಸೇವಾ ಸಮಿತಿಯ ರಾಜ್ಯಾಧ್ಯಕ್ಷ ಚನ್ನವಿರಸ್ವಾಮಿ ಹಿರೇಮಠ ಹೇಳಿದರು.

ಪಟ್ಟಣದ ಹನ್ನೆರಡು ಸಾವಿರ ಮಠದ ಸಭಾಭವನದಲ್ಲಿ ಭಾನುವಾರ ಡಾ. ಪಂ ಪುಟ್ಟರಾಜ ಸೇವಾ ಸಮಿತಿ ತಾಲ್ಲೂಕ ಘಟಕ ಉದ್ಘಾಟನೆ, ಗುರು ವಚನ ಪ್ರಭ, ಗುರು ಸಾಹಿತ್ಯ ಪ್ರಚಾರ ಅಭಿಮಾನ, ತಾಲೂಕಾ ಘಟಕದ ಪದಾಧಿಕಾರಿಗಳಿಗೆ ಗುರು ಸೇವಾ ದೀಕ್ಷಾ ಸಮಾರಂಭ ಹಾಗೂ ವಿಶೇಷ ಚೇತನರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗದುಗಿನ ಡಾ. ಪಂ. ಪುಟರಾಜ ಸೇವಾ ಸಮಿತಿಯು, ಸರ್ವ ಕಲೆಗಳ ಹಾಗೂ ಕಲಾವಿದರ ರಕ್ಷಣೆಯನ್ನು ಹೊತ್ತುಕೊಂಡು ರಾಜ್ಯದಾದ್ಯಂತ ಕಲೆ ಕಲಾವಿದರ ಮತ್ತು ಗುರು ಪುಟ್ಟರಾಜರ ಸೇವೆಮಾಡಿಕೊಂಡು ಬರುತ್ತಿದೆ. ಅದರ ಭಾಗವಾಗಿ ಇಂದು ಕಲಘಟಗಿಯಲ್ಲಿ ಸಮಿತಿಯ ತಾಲೂಕಾ ಘಟಕ ಅಸ್ಥಿತ್ವಕ್ಕೆ ಬರುತ್ತಿದೆ ಎಂದರು
ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಬಸವರಾಜ ದೇವರು ರೇವಣಸಿದ್ದೇಶ್ವರ ಮಹಾಮಠ ಮನಸೂರ ಮಾತನಾಡಿ ಗವಾಯಿಗಳು ಅಂದ ಅನಾಥರ ಬಾಳಿಗೆ ಬೆಳಕಾಗಿ ಹಲವರಿಗೆ ಸ್ಫೂರ್ತಿಯ ಚಿಲುಮೆಯಾಗಿ ಸಾಂಸ್ಕೃತಿಕ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದವರು.
ಅಂತಹ ಮಹಾತ್ಮರ ಸತ್ಕಾರ್ಯ ಸರಣೆ ಮಾಡುವದರಿಂದ ನಾವು ಕೂಡಾ ದೊಡ್ಡ ಮಟ್ಟದಲ್ಲಿ ಬೆಳೆಯಲು ಸಾಧ್ಯ ಅವರ ತತ್ವ ಆದರ್ಶ ಪ್ರತಿಯೊಬ್ಬರೂ ಅಳವಡಿಸಿಕೊಂಡು ಬದುಕಿದರೆ ಜೀವನ ಪಾವನವಾಗುತ್ತದೆ ಎಂದರು.
ಜಾನಪದ ತಜ್ಞ ಮಲ್ಲಯ್ಯ ಸ್ವಾಮಿ ತೋಟಗಂಟಿ ಮಾತನಾಡಿ ಇವತ್ತು ಏನಾದರು ಕಲೆ, ಸಾಹಿತ್ಯ, ಸಂಗೀತ ಕಲಾವಿದರು ಉಳಿಯಬೇಕಾದರೆ ಪುಟ್ಟರಾಜ ಗವಾಯಿಗಳ ಶ್ರಮ ಬಹಳಷ್ಟುವಿದೆ ಎಂದರು. ಅಂದರ ಬಾಳಿಗೆ ಬೆಳಕಾಗಿ ಸಮಾಜದಲ್ಲಿ ಅವರು ಕೂಡಾ ಕಲೆ, ಸಾಹಿತ್ಯ, ಸಂಗೀತ ಅಳವಡಿಸಿಕೊಂಡು ಬದುಕುವಂತೆ ಕಲಿಸಿದ ಸಂತ ಎನಿಸಿದವರು.
ಡಾ. ಪಂ ಪುಟ್ಟರಾಜ ಸೇವಾ ಸಮಿತಿಯ ನೂತನ ತಾಲ್ಲೂಕ ಅಧ್ಯಕ್ಷರಾದ ಸುರೇಶ ಕಳಸಣ್ಣವರ ಮಾತನಾಡಿ ಕಲಘಟಗಿ ಕ್ಷೇತ್ರ ಕಲೆ, ಸಾಹಿತ್ಯ, ಶರಣರ ತವರೂರು ಅಂತಹ ಮಹಾನ ಪುರುಷರ ಸೇವೆ ಮಾಡುವದಕ್ಕೆ ನನಗೆ ಮತ್ತಷ್ಟು ಹೆಮ್ಮೆ ಅನಿಸುತ್ತದೆ ಕಾರ್ಯಕ್ರಮದ ನಿಮಿತ್ಯ ಹಲವು ಸಾಧನೆ ಮಾಡಿದ ವಿಕಲ ಚೇತನರ ಗುರುತಿಸಿ ಸನ್ಮಾನಿಸಲಾಗಿದೆ ಎಂದರು. ಹನ್ನೆರಡು ಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.
ಸಮಿತಿಯ ರಾಜ್ಯಾಧ್ಯಕ್ಷ ಚನ್ನವಿರಸ್ವಾಮಿ ಹಿರೇಮಠ ಅವರು ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ಹಾಗೂ ಪುಟ್ಟರಾಜ ಗವಾಯಿಗಳ ಪುಸ್ತಕ ನೀಡಿ ಗುರು ಸೇವಾ ಧೀಕ್ಷೆ ನೀಡಿದರು. ಸುಮಾ ಹಡಪದ ಹಳಿಯಾಳ ಹಾಗೂ ಸ್ಥಳೀಯ ಕಲಾ ತಂಡಗಳಿAದ ಸಂಗೀತ ಕಾರ್ಯಕ್ರಮ ನಡೆಯಿತು. ವಕೀಲರ ಸಂಘದ ಅಧ್ಯಕ್ಷ ಮಂಜುನಾಥ ಧನಿಗೊಂಡ, ಪರಮಾನಂದ ಒಡೆಯರ, ಎಚ್. ಎನ್ ಸುಣಗದ, ಶಿವಪ್ಪ ಅದರಗುಂಚಿ, ಗಂಗಾಧರ ಘಾಳಿ, ಮಕ್ಕಳ ಸಾಹಿತಿ ವೈ. ಜಿ ಭಗವತಿ, ಮಂಜುಳಾ ನಾಯ್ಕ, ವಿ. ಎಸ್ ನಾಗಲೋತಿಮಠ, ರವೀಂದ್ರ ತೋಟಗಂಟಿ, ಶಿವಪ್ಪ ಧನಿಗೊಂಡ, ಶಿವಪುತ್ರಯ್ಯ ತೇಗೂರಮಠ, ಗಿರೀಶ ಬಂಡಿ, ಶಂಕರಗೌಡ ಭಾವಿಕಟ್ಟಿ, ಶಿವು ಪುಂಡಿ ಸಮಿತಿಯ ಧಾರವಾಡ ಜಿಲ್ಲಾ ಸಂಚಾಲಕ ಪ್ರವೀಣ ಕುಲಕರ್ಣಿ ಇದ್ದರು.


Leave a Reply