This is the title of the web page
This is the title of the web page

Please assign a menu to the primary menu location under menu

State

ಶ್ರೀರಾಘವೇಂದ್ರಸ್ವಾಮಿಗಳ ರಥೋತ್ಸವ ಹಾಗೂ 351ನೇ ಆರಾಧನೆ


ಗಂಗಾವತಿ …ಇಲ್ಲಿಯ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಮಹಾರಥೋತ್ಸವ ಸಂಭ್ರಮದಿಂದ ಜರುಗಿತು. ಶ್ರೀ ರಾಘವೇಂದ್ರ ಸ್ವಾಮಿಗಳು 351 ನೇ ಆರಾಧನೆ ಮಹೋತ್ಸವ ಉತ್ತರಾಧನೆ ನಿಮಿತ್ಯ ಮಠದಿಂದ ಸುಂದರ ಆಂಜನೇಯ ಸ್ವಾಮಿ ದೇವಸ್ಥಾನದವರೆಗೂ ಜರುಗಿತು. 5 ಗಂಟೆಗಳ ಕಾಲ ಜರುಗಿದ ರಥೋತ್ಸವದಲ್ಲಿ ಭಕ್ತರು ಭಾಗವಹಿಸಿ ಹಣ್ಣು,ಉತ್ತತ್ತಿ ಹಾಕಿ ಭಕ್ತಿ ಸಮರ್ಪಿಸಿದರು.

ಮಾರ್ಗದಲ್ಲಿ ಭಕ್ತರು ಆರತಿ.ಕಾಯಿಯೊಂದಿಗೆ ಪೂಜೆ ಸಲ್ಲಿಸಿದರು. ಸಿಡಿ ಮುದ್ದು ಸಿಡಿಸಿ ಸಂಭ್ರಮಿಸಿದರು.
ಬೆಳಿಗ್ಗೆ ಕೀರಾಭೀಷೇಕ, ಪಂಚಾಮೃತಾಭಿಷೇಕ ,ವಿಶೇಷ ಹೂವಿನ ಅಲಂಕಾರ, ಭಜನೆ, ಪಂಡಿತರಿಂದ ಉಪನ್ಯಾಸ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ರಥೋತ್ಸವ ಸೇವಾಕರ್ತರಿಗೆ ಮಠದ ವ್ಯವಸ್ಥಾಪಕ ಸಾಮವೇದ ಗುರುರಾಜ್ ಆಚಾರ ಸನ್ಮಾನಿಸಿದರು.
ರಥೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಪರಣ್ಣ ಮುನವಳ್ಳಿ, ನವಲಿ ಗುರುರಾಜ ರಾವ್, ನಗರಸಭೆ ಸದಸ್ಯರಾದ ರಾಚಪ್ಪ ಸಿದ್ದಾಪುರ,ಶರಭೋಜಿ, ವಾಸುದೇವ ನವಲಿ,ರಾಮಕೃಷ್ಣ ಜಾಹಗಿರದಾರ,ಡಾ.ಎಚ್. ಕೆ.ಶ್ರೀಧರ್ ರಾವ್,ಎಚ್.ಕೆ.ಗೋಪಾಲಕೃಷ್ಣ, ವೆಂಕೋಬರಾವ ಹೇರೂರು, ಪ್ರಲ್ಲಾದ ಹೇರೂರು,ಡಾ.ಮಧುಸೂಧನ ಜೋಷಿ ,ಅಪ್ಪಣ್ಣ ದೇಶಪಾಂಡೆ,ದರೋಜಿ ರಂಗಣ್ಣ ಶ್ರೇಷ್ಟಿ, ಜಗನ್ನಾಥ ಮುಖ್ತೇದಾರ,ವಾಮನರಾವ ಮುಖ್ತೇದಾರ,ನಾಗರಾಜ್ ಜೋಷಿ, ಪ್ರಲ್ಲಾದರಾವ ನವಲಿ, ವಿಜಯರಾವ ಹೇರೂರು , ಹನುಮಂತರಾವ ಅಯ್ಯೋದ್ಯ.ಗುರುರಾಜ ಅಯೋಧ್ಯೆ,ವಿಜಯರಾವ ಹೇರೂರು ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

ಗಂಗಾವತಿ ವರದಿ
ಹನುಮೇಶ ಬಟಾರಿ


Gadi Kannadiga

Leave a Reply