ಹುಕ್ಕೇರಿ: ಆಧುನಿಕತೆಯ ಭರಾಟೆಯಲ್ಲಿ ಮಕ್ಕಳಲ್ಲಿ ಹೆಚ್ಚುತ್ತಿರುವ ಅಪೌಷ್ಟಿಕತೆಯ ಆಹಾರ ಕೊರತೆಯನ್ನು ಕೋಳಿ ಮೊಟ್ಟೆ ಯಿಂದ ನಿಗಿಸಬಹುದು ಜೊತೆಗೆ ಕುಕ್ಕಟದಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಯ ಸ್ವ ಉದ್ಯೋಗ ಮಾಡಿ ಕುಟುಂಭ ನಿರ್ವಹಣೆ ಮಾಡಲು ಸಹಕಾರಿ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.
ಅವರು ಪಟ್ಟಣದ ಜಗಜೀವನ ರಾಮ್ ಸಮುದಾಯ ಭವನದಲ್ಲಿ ಹಮ್ಮಿಕೊಂಡ ಕರ್ನಾಟಕ ಸಹಕಾರ ಕುಕ್ಕಟ ಮಹಾಮಂಡಳ ,ಹಾಗೂ ಬೆಳಗಾವಿ ಪ್ರಾದೇಶಿಕ. ಕೇಂದ್ರ ಎನ್.ಎಲ್.ಎಮ್ ನವೀನ ಕುಕ್ಕಟ ಉತ್ಪಾದನೆ ಯೋಜನೆ ಅಡಿಯಲ್ಲಿ ಸುಲ್ತಾನಪುರ್ ಜಿ.ಟಿ ಕೋಳಿ ಸಾಕಾಣಿಕೆ ಹಾಗೂ ಮಾರಾಟ ಸಹಕಾರ , ಸಂಘದ ೧೦೦ ಜನ ಫಲಾನುಭವಿಗಳಿಗೆ ಕೋಳಿ ಮನೆ ನಿರ್ಮಿಸಲು ೩೦ ಲಕ್ಷ ಚೆಕ್ ವಿತರಣೆ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ಪ್ರಧಾನ ಮಂತ್ರಿ ಉದ್ಯೋಗ ಯೋಜನೆ ಅಡಿಯಲ್ಲಿ ಮಂಜೂರಾದ ೨೦ ಜನ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸ್ವಯಂ ಉದ್ಯೋಗ ಯೋಜನೆ ಅಡಿಯಲ್ಲಿ ೩ ಜನ ಫಲಾನುಭವಿಗಳಿಗೆ ಚೆಕ್ ವಿತರಿಸಿ ಮಾತನಾಡಿದರು.
ಅರ್ಥಿಕ ವಾಗಿ ಹಿಂದುಳಿದ ಹಾಗೂ ಸ್ವ ಉದ್ಯೋಗದ ಆಸಕ್ತರನ್ನು ಗುರುತಿಸಿ ಸರಕಾರದಿಂದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುತ್ತಿರುವ ಸುಲ್ತಾನಪೂರದ ಜಿಟಿ ಕೋಳಿ ಸಾಕಾಣಿಕೆಯ ಹಾಗೂ ಮಾರಾಟದ ಸಹಕಾರಿ ಸಂಘದ ಅಧ್ಯಕ್ಷ ಸುರೇಶ ತಳವಾರ ಅವರ ಕಾರ್ಯ ಶ್ಲಾಘನೀಯ ಎಂದರು. ಹಂತ ಹಂತವಾಗಿ ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ಸೌಲಭ್ಯ ದೊರೆಯಲಿ ಅವರಿಗೆ ತುಂಭ ಸಹಕಾರ ನೀಡುವದಾಗಿ ತಿಳಿಸಿದರು.
ಜಿಲ್ಲಾ ಕುಕ್ಕಟ ಮಹಾಮಂಡಳದ ಸಹಾಯಕ ನಿರ್ದೇಶಕ ಡಾ. ಶ್ರೀಕಾಂತ್ ಎಮ್ ಗಾವಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಕೋಳಿ ಸಾಕಾಣಿಕೆ ಉತ್ತಮ ಆದಾಯ ಹಾಗೂ ಅಪೌಷ್ಟಿಕತೆಯ ನಿವಾರಣೆಗೆ ಅನೂಕೂಲವಾಗಿದೆ .ಕೋಳಿ ಸಾಕಾಣಿಕೆ ಹಾಗೂ ಮಾರುಕಟ್ಟೆಯ ಹಿನ್ನಲೆಯಲ್ಲಿ ಹುಕ್ಕೇರಿ, ಕಿತ್ತೂರ,ಬೆಳಗಾವಿಯಲ್ಲಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಎಸ್/ಎಸ್ಟಿ, ದೌರ್ಜನ್ಯ ಕಮೀಟಿ ಸದಸ್ಯ ಹಾಗೂ ಜಿ.ಟಿ ಕೋಳಿ ಸಾಕಾಣಿಕೆ ಹಾಗೂ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಸುರೇಶ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪಶು ಆಸ್ಪತ್ರೆಯ ಸಹಾಯಕ ನಿದೇರ್ಶಕ ಆನಂದ ಪಾಟೀಲ ,ಕುಕ್ಕಟದ ನಿರ್ದೇಶಕ ಲಕ್ಷ್ಮಣ್ ಕಾಡಾಪುರೆ ಪುರಸಭೆ ಅಧ್ಯಕ್ಷ ಅಣ್ಣಪ್ಪ ಪಾಟೀಲ್ ಉಪಾಧ್ಯಕ್ಷ ಆನಂದ ಗಂಧ, ಮುಖಂಡರಾದ ಬಸವರಾಜ ಮಟಗಾರ, ದೌರ್ಜನ್ಯ ನಿಯಂತ್ರಣ ಸಮಿತಿ, ಸದಸ್ಯ ರಮೇಶ ಹುಂಜಿ ಅಪ್ಪಣ್ಣ ಖಾತೇದಾರ,ಶಂಕರ ತಿಪ್ಪನಾಯಿಕ. ಸದಾಕಟ್ಟಿ. ಸದಾಶಿವ ಕಾಂಬಳೆ,ರಾಜೇಂದ್ರ ಮೋಕಾಶಿ, ಮುತ್ತು ಕಾಂಬಳೆ ಮತ್ತಿತರರು ಉಪಸ್ಥಿತರಿದ್ದರು.
Gadi Kannadiga > Local News > ಕೋಳಿ ಮನೆ ನಿರ್ಮಿಸಲು ಫಲಾನುಭವಿಗಳಿಗೆ ಚೆಕ್ ವಿತರಣೆ