ಬೆಳಗಾವಿ; ಇದೇ ತಿಂಗಳ ಶನಿವಾರ ದಿನಾಂಕ 9 ರಂದು ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಆವರಣದಲ್ಲಿರುವ ಶ್ರೀ ಪ್ರಭುದೇವ ಇಂಡಿಪೆಂಡೆಂಟ್ ಸೈನ್ಸ್ ಪಿಯು ಕಾಲೇಜಿನಲ್ಲಿ ಒಂದು ದಿನದ ಚೆಸ್ ಟೂರ್ನಾಮೆಂಟ್ ನಡೆಯಲಿದೆ ಎಂದು ಕಾಲೇಜಿನ ಪ್ರಾಚಾರ್ಯ ಶ್ರೀಮತಿ ಸ್ವಪ್ನಾ ಜೋಶಿ ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಾಜ್ಯದ ಯಾವುದೇ ಭಾಗದ ವಿದ್ಯಾರ್ಥಿಗಳು ಈ ಟೂರ್ನಮೆಂಟ್ ನಲ್ಲಿ ಭಾಗವಹಿಸಬಹುದಾಗಿದೆ,
ನಾಲ್ಕು ವಿಭಾಗಗಳಲ್ಲಿ (ಕೆಟಗರಿ) ಪಂದ್ಯಾವಳಿಯನ್ನು ಜರುಗಿಸಲಾಗುತ್ತಿದೆ , ಎಲ್ಲ ವಿಭಾಗಗಳಿಗೂ ಪ್ರವೇಶ ಶುಲ್ಕವನ್ನು ರೂ.350/-ನಿಗದಿಪಡಿಸಲಾಗಿದ್ದು, ಒಂದರಿಂದ ನಾಲ್ಕನೇ ತರಗತಿಯವರೆಗಿನ ವಿದ್ಯಾರ್ಥಿಗಳದ್ದು “ಎ” ಕೆಟಗರಿ, ಐದರಿಂದ ಏಳನೇ ತರಗತಿಯವರೆಗಿನದ್ದು “ಬಿ” ಕೆಟಗರಿ, ಎಂಟರಿಂದ 10ನೇ ತರಗತಿಯವರೆಗೆ ಸಿ” ಕೆಟಗರಿ ಮತ್ತು ಪಿಯುಸಿ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳಿದ್ದು “ಡಿ” ಕೆಟಗರಿ ಎಂದು ವಿಭಾಗಿಸಲಾಗಿದೆ ನಾಲ್ಕೂ ವಿಭಾಗಗಳಲ್ಲಿನ ವಿಜೇತರಿಗೆ ಪ್ರತ್ಯೇಕವಾಗಿ ಬಹುಮಾನಗಳನ್ನು ನೀಡಲಾಗುತ್ತಿದೆ.
ಪ್ರಥಮ ಬಹುಮಾನ ನಗದು ರೂ 1500/- ಮತ್ತು ಟ್ರೋಫಿ, ಎರಡನೇ ಬಹುಮಾನ ರೂ 1,000/- ಮತ್ತು ಟ್ರೋಫಿ, ಮೂರನೇ ಬಹುಮಾನ ರೂ 500/- ಮತ್ತು ಟ್ರೋಫಿ ನೀಡಲಾಗುತ್ತಿದೆ ಇದಲ್ಲದೆ ಎಲ್ಲ ನಾಲ್ಕೂ ವಿಭಾಗಗಳಲ್ಲಿ ನಾಲ್ಕನೇ ರ್‍ಯಾಂಕಿನಿಂದ 10ನೇ ರ್‍ಯಾಂಕ ವರೆಗೆ ವಿಜೇತರಾಗುವ ಕ್ರೀಡಾಳುಗಳಿಗೆ ವಿಶೇಷ ಟ್ರೋಫಿಯನ್ನು ನೀಡಿ ಸತ್ಕರಿಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.
ಟೂರ್ನಾಮೆಂಟ್ ನಲ್ಲಿ ಯಾವ ಅಕಾಡೆಮಿಯಿಂದ ಅತಿ ಹೆಚ್ಚು ಕ್ರೀಡಾಳುಗಳು ಭಾಗವಹಿಸುತ್ತಾರೋ ಅಂತಹ ಅಕ್ಯಾಡಮಿಗೆ ಪ್ರಥಮ ಪ್ರಶಸ್ತಿ ನಗದು 1500 ಮತ್ತು ಟ್ರೋಫಿ, ಅದೇ ರೀತಿ ದ್ವಿತೀಯ ಪ್ರಶಸ್ತಿ ನಗದು ರೂ 1,000 ಮತ್ತು ಟ್ರೋಫಿ ಈ ರೀತಿ ವಿಶೇಷ ಬಹುಮಾನವನ್ನು ಕೂಡ ಇಲ್ಲಿ ಘೋಷಿಸಲಾಗಿದೆ. ಟೂರ್ನಾಮೆಂಟಿನಲ್ಲಿ ಭಾಗವಹಿಸುವ ಕ್ರೀಡಾಳುಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ. ಟೂರ್ನಾಮೆಂಟ್ ನಲ್ಲಿ ಭಾಗವಹಿಸುವ ಕ್ರೀಡಾಳುಗಳು ಕಡ್ಡಾಯವಾಗಿ ತಮ್ಮ ಶಾಲಾ ಸಮವಸ್ತ್ರದಲ್ಲಿ ತಮ್ಮ ಗುರುತಿನ ಚೀಟಿಯೊಂದಿಗೆ ಹಾಜರಾಗಬೇಕು. ಈ ಸಂಬಂಧ ಹೆಚ್ಚಿನ ಮಾಹಿತಿಗಳಗಾಗಿ ತೀರ್ಪುಗಾರರಾದ ಗಿರೀಶ ಬಾಚಿಕರ 8050160834, ಆಕಾಶ ಮಡಿವಾಳರ 8310259025, ಸಕ್ಷಮ ಜಾಧವ 7899425214 ಇವರುಗಳನ್ನು ಮತ್ತು ಪ್ರಭು ಶಿವನಾಯಕರ 9449441955 ಇವರನ್ನು ಸಂಪರ್ಕಿಸಬಹುದು ಎಂದು ಅವರು ವಿವರಿಸಿದ್ದಾರೆ.