This is the title of the web page
This is the title of the web page

Please assign a menu to the primary menu location under menu

Local News

ಬೆಳಗಾವಿಯಲ್ಲಿ ರೈಲ್ವೆ ನಿಲ್ದಾಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ಶಾಹೂ ಮಹಾರಾಜರ ಭಾವಚಿತ್ರಗಳನ್ನು ಅಳವಡಿಸಲಾಗುವುದು ಶಾಸಕ ಬೆನಕೆ


ಬೆಳಗಾವಿ :ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆರವರು ಇಂದು ಕೇಂದ್ರ ರಾಜ್ಯ ರೈಲ್ವೆ ಸಚಿವರಾದ  ರಾವಸಾಹೇಬ ದಾದರಾವ ಧಾನಜೆ ರವರನ್ನು ನವದೆಹಲಿಯಲ್ಲಿ ಬೇಟಿ ಮಾಡಿ ಸೌಹಾರ್ಧಯುತ ಚರ್ಚೆ ನಡೆಸಿದರು. ಬೆಳಗಾವಿಯಲ್ಲಿ ನೂತನವಾಗಿ ನವೀಕರಣಗೊಳ್ಳುತ್ತಿರುವ ರೈಲ್ವೆ ನಿಲ್ದಾಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ರಾಜಿರ್ಷಿ ಶಾಹೂ ಮಹಾರಾಜರ ಭಾವಚಿತ್ರಗಳನ್ನು ಅಳವಡಿಸುವ ಕುರಿತು ಚರ್ಚೆ ನಡೆಸಿ ಮನವಿಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ರೈಲ್ವೆ ರಾಜ್ಯ ಸಚಿವರನ್ನು ಬೇಟಿ ಮಾಡಿ ನಂತರದಲ್ಲಿ ಮಾತನಾಡಿದ ಅವರು ಬೆಳಗಾವಿಯಲ್ಲಿ ನೂತನವಾಗಿ ನವೀಕರಣಗೊಳ್ಳುತ್ತಿರುವ ರೈಲ್ವೆ ನಿಲ್ದಾಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ರಾಜಿರ್ಷಿ ಶಾಹೂ ಮಹಾರಾಜರ ಭಾವಚಿತ್ರಗಳನ್ನು ಅಳವಡಿಸಲಾಗಿಲ್ಲ ಇದರಿಂದ ಬೆಳಗಾವಿಯಲ್ಲಿನ ಮರಾಠಿ ಭಾಷಿಕರ ಹಾಗೂ ಶಿವ ಭಕ್ತರಿಗೆ ನೋವಿನ ಸಂಗತಿಯಾಗಿದೆ.

ಇದರ ಕುರಿತು ಸುವಿಸ್ಥಾರವಾಗಿ ವಿಚಾರಿಸಿ ಬೆಳಗಾವಿ ಜನತೆಯಲ್ಲಿ ಚರ್ಚೆಯಾಗುತ್ತಿರುವದರಿಂದ ಬೆಳಗಾವಿ ಜನತೆಯ ಮನವಿಯಂತೆ ಇಂದು ರೈಲ್ವೆ ರಾಜ್ಯ ಸಚಿವರನ್ನು ಬೇಟಿ ಮಾಡಿ ರೈಲ್ವೆ ನಿಲ್ದಾಣದಲ್ಲಿ ಆಗಿರುವ ಗೊಂದಲವನ್ನು ನಿವಾರಣೆ ಮಾಡುವಂತೆ ಮನವಿ ಮಾಡಿದರು.

ಶಾಸಕರ ಮನವಿಗೆ ಸ್ಪಂದಿಸಿದ ಸಚಿವರು ಶಾಸಕರ ಸಮ್ಮುಖದಲ್ಲಿಯೇ ಸಮಸ್ತ ಬೆಳಗಾವಿ ನಾಗರಿಕರ ಬೇಡಿಕೆಯಾದ ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ರಾಜಿರ್ಷಿ ಶಾಹೂ ಮಹಾರಾಜರ ಭಾವಚಿತ್ರಗಳನ್ನು ಅಳವಡಿಸುವ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ದೂರವಾಣ ಮೂಲಕ ಮಾತನಾಡಿ ಬೆಳಗಾವಿಯಲ್ಲಿ ನವೀಕರಣಗೊಳ್ಳುತ್ತಿರುವ ರೈಲ್ವೆ ನಿಲ್ದಾಣದ ಉದ್ಘಾಟನೆಗೂ ಮೊದಲು ರೈಲ್ವೆ ನಿಲ್ದಾಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಹಾಗೂ ರಾಜಿರ್ಷಿ ಶಾಹೂ ಮಹಾರಾಜರ ಭಾವಚಿತ್ರಗಳನ್ನು ಅಳವಡಿಸಬೇಕೆಂದು ಎಸ್.ಡಬ್ಲ್ಯೂ.ಆರ್ ಜನರಲ್ ಮ್ಯಾನೇಜರ ಇವರಿಗೆ ಸೂಚನೆಯನ್ನು ನೀಡಿದರು ಎಂಬ ಮಾಹಿತಿಯನ್ನು ಶಾಸಕ ಅನಿಲ ಬೆನಕೆರವರು ನೀಡಿದರು.

 


Gadi Kannadiga

Leave a Reply