This is the title of the web page
This is the title of the web page

Please assign a menu to the primary menu location under menu

State

ಫೆ.೨೪ ರಂದು ಛತ್ರಪತಿ ಶಿವಾಜಿ ಮಹರಾಜ ಜಯಂತಿ: ಪೂರ್ವಭಾವಿ ಸಿದ್ಧತಾ ಸಭೆ


ಕೊಪ್ಪಳ ಫೆಬ್ರವರಿ ೧೦ : ಫೆಬ್ರವರಿ ೨೪ರಂದು ಆಚರಿಸಲ್ಪಡುವ ಛತ್ರಪತಿ ಶಿವಾಜಿ ಮಹರಾಜ ಜಯಂತಿ ಕುರಿತಂತೆ ಚರ್ಚಿಸಲು ಉಪ ವಿಭಾಗಾಧಿಕಾರಿಗಳಾದ ಬಸವಣ್ಣೆಪ್ಪ ಕಲಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಫೆ.೯ರಂದು ಪೂರ್ವಭಾವಿ ಸಿದ್ಧತಾ ಸಭೆ ನಡೆಯಿತು.
ಉಪ ವಿಭಾಗಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಮಾಜದ ಗಣ್ಯರು, ಜಯಂತಿಯನ್ನು ಈ ವರ್ಷ ಅರ್ಥಪೂರ್ಣವಾಗಿ ಆಚರಣೆ ಮಾಡಲು ಜಿಲ್ಲಾಡಳಿತವು ಅಗತ್ಯ ಕ್ರಮ ವಹಿಸಬೇಕು ಎಂದು ಕೋರಿದರು.
ಈ ವೇಳೆ ಮಾತನಾಡಿದ ಉಪ ವಿಭಾಗಾಧಿಕಾರಿಗಳು, ಈ ಜಯಂತಿ ಕಾರ್ಯಕ್ರಮದ ಯಶಸ್ವಿಗೆ ಎಲ್ಲ ಸಮಾಜದ ಮುಖಂಡರು, ಸಾರ್ವಜನಿಕರು ಸಹಕರಿಸಬೇಕು ಎಂದು ಉಪವಿಭಾಗಾಧಿಕಾರಿಗಳು ಮನವಿ ಮಾಡಿದರು.
ಜಯಂತಿ ಆಚರಣೆ ನಿಮಿತ್ತ ಅಂದು ಬೆಳಿಗ್ಗೆ ೮.೩೦ಕ್ಕೆ ಛತ್ರಪತಿ ಶಿವಾಜಿ ಮಹರಾಜರ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ಬಳಿಕ ೧೦.೩೦ಕ್ಕೆ ನಗರದ ಸಾಹಿತ್ಯ ಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಛತ್ರಪತಿ ಶಿವಾಜಿ ಮಹರಾಜರ ಕುರಿತು ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರದ ಕೊಟ್ರೇಶ್ ಮರಬನಳ್ಳಿ ಅವರು ಸಭೆಗೆ ವಿವರಿಸಿದರು.
ಸಭೆಯಲ್ಲಿ ಸಮಾಜದ ಮುಖಂಡರಾದ ಮಾರುತಿ ಕಾರಟಗಿ, ವಿಶ್ವನಾಥ ಅರಕೇರಿ, ಲಕ್ಷö್ಮಣ, ದಿನೇಶ ಆರ್ಯರ್, ಉಮೇಶ ಸುರ್ವೇ, ನಿಂಗರಾಜ, ನಾಗೇಶ ಬಡಿಗೇರ ಹಾಗೂ ಹಲವು ಗಣ್ಯರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


Gadi Kannadiga

Leave a Reply