This is the title of the web page
This is the title of the web page

Please assign a menu to the primary menu location under menu

Local News

ವಿಕಲಚೇತನರ ಸರ್ವಾಂಗೀಣ ಅಭಿವೃದ್ಧಿಗೆ ಪ್ರಯತ್ನ ವಿಕಲಚೇತನರಿಗೆ ಸಾಧನ ಸಲಕರಣೆಗಳ ವಿತರಣಾ ಸಮಾರಂಭದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭೋಯರ್ ಹರ್ಷಲ್ ನಾರಾಯಣರಾವ್ ಅಭಿಪ್ರಾಯ


ಬೆಳಗಾವಿ:ಮಾರ್ಚ್-೯: “ಮಾನಸಿಕವಾಗಿ ಸದೃಢವಾಗಿದ್ದರೆ ಏನೆಲ್ಲಾ ಸಾಧನೆ ಮಾಡಬಹುದೆಂದೆಂಬ ಆತ್ಮಸ್ಥೈರ್ಯವನ್ನು ನಮಗೆ ವಿಕಲಚೇತನರ ಕ್ರೀಡಾ ಮನೋಭಾವ ಹಾಗೂ ಹುಮ್ಮಸ್ಸು ನೀಡುತ್ತದೆ” ಎಂದು ಬೆಳಗಾವಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭೋಯರ್ ಹರ್ಷಲ್ ನಾರಾಯಣರಾವ್ ಅಭಿಪ್ರಾಯ ಪಟ್ಟರು.
ಬೆಳಗಾವಿ ಜಿಲ್ಲಾ ವಿಕಲಚೇತನರ ಕ್ರೀಡಾ ಸಂಘ ಬೆಳಗಾವಿ ಮೂರನೇ ವಾರ್ಷಿಕೋತ್ಸವದ ಅಂಗವಾಗಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ವಿಕಲಚೇತನರ ಕ್ರೀಡಾಕೂಟ ಹಾಗೂ ಸಾಧನೆಗೈದ ವಿಕಲಚೇತನರ ಕ್ರೀಡಾಪಟುಗಳ ಸನ್ಮಾನ ಹಾಗೂ ವಿಕಲಚೇತನರಿಗೆ ಸಾಧನ ಸಲಕರಣೆಗಳ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ” ಜಿಲ್ಲೆಯ ವಿಕಲಚೇತನರು ವಿವಿಧ ಕ್ರೀಡೆಗಳಲ್ಲಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿ ಕೀರ್ತಿ ತಂದಿದ್ದಾರೆ. ವಿಕಲಚೇತನರ ಸರ್ವಾಂಗೀಣ ಅಭಿವೃದ್ಧಿಗೆಇಲಾಖೆಯ ವತಿಯಿಂದ ಪ್ರಯತ್ನಿಸುವುದಾಗಿ ಹೇಳಿದರು.
ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಹೆಚ್ಚುವರಿ ಪ್ರಾದೇಶಿಕ ಆಯ್ತುಕರಾದ ನಜಮಾ ಪೀರಜಾದೆ ಅವರು ಮಾತನಾಡಿ, ” ತಮ್ಮ ಅಂಗವಕಲ್ಯವನ್ನು ಮೆಟ್ಟಿ ನಿಂತು ಸವಾಲಾಗಿ ಎದುರಿಸುತ್ತ ಅನೇಕ ಕ್ರೀಡೆಗಳಲ್ಲಿ ಅವರು ತೋರುತ್ತಿರುವ ಉತ್ಸಾಹ ನೋಡಿದ್ರೆ ದೈಹಿಕವಾಗಿ ಎಲ್ಲ ರೀತಿಯಲ್ಲೂ ಸದೃಢರಾಗಿರುವ ನಮ್ಮಂಥವರನ್ನು ಬೆರಗುಗೊಳಿಸುತ್ತದೆ. ವಿಕಲಚೇತನರ ಜೀವನದ ಕಷ್ಟಗಳನ್ನು ನೆನೆದು ಸಭೆಯಲ್ಲಿ ಭಾವುಕರಾದರು. ವಿಕಲಚೇತನರ ಕ್ರೀಡೆಗಳಿಗೆ ವೈಯಕ್ತಿಕವಾಗಿ ೧೦,೦೦೦ ರೂಪಾಯಿ ಧನಸಹಾಯ ಮಾಡಿದ ಅವರು, ಕಾನೂನು ಚೌಕಟ್ಟಿನಲ್ಲಿ ಯೋಚಿಸಿ ಸರ್ಕಾರದಿಂದ ಅವರಿಗೆ ಸಿಗಬಹುದಾದ ನೆರವು ಕೊಡಿಸುವಲ್ಲಿ ಪ್ರಯತ್ನಿಸುವುದಾಗಿ ಹೇಳಿದರು.
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷಮುಕ್ತಾರ ಪಠಾಣ ಮಾತನಾಡಿ, ” ಸರ್ಕಾರ ವಿಕಲಚೇತನರಿಗೆ ನೀಡುವ ವಿವಿಧ ಯೋಜನೆಗಳನ್ನು ಇನ್ನೂ ಹೆಚ್ಚಿಗೆ ವಿಸ್ತರಿಸಬೇಕು. ಅದರೊಂದಿಗೆ ಸರ್ಕಾರೇತರ ಸಂಘ-ಸಂಸ್ಥೆಗಳು ಸಹಾಯಹಸ್ತ ನೀಡಬೇಕೆಂದು” ಹೇಳಿದರು.
ಸುರೇಶ ಯಾದವ ಫೌಂಡೇಶನ್ ಅಧ್ಯಕ್ಷ ಸುರೇಶ ಯಾದವ ಮಾತನಾಡಿ, “ವಿಕಲಚೇತನರ ಕುರಿತಾದ ಸಮಾಜದ ದೃಷ್ಟಿಕೋನ ಬದಲಾಗಬೇಕು. ಅವರೊಂದಿಗೆ ನಾವಿದ್ದೇವೆ ಎಂಬ ಭಾರವಸೆ ನೀಡಿದರೆ ಅವರು ಮತ್ತಷ್ಟು ಸಾಧನೆ ಮಾಡಲು ಅನುಕೂಲವಾಗುತ್ತದೆ. ಆ ನಿಟ್ಟಿನಲ್ಲಿ ನಮ್ಮ ಫೌಂಡೇಶನ್ ವಿಕಲಚೇತನರ ಸಂಘಕ್ಕೆ ನೆರವು ನೀಡಲು ಸದಾ ಸಿದ್ಧರಿದ್ದೇವೆ” ಎಂದು ಹೇಳಿದರು.
ಅತಿಥಿಗಳಾಗಿ ಬೆಳಗಾವಿ ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಜಿನೇಶ್ವರ ಪಡನಾಡ, ಶಿವರಾಜ ಹೊಳೆಪ್ಪಗೋಳ
,ಪ್ರಬುದ್ದ ಗ್ರಾಮೀಣ ಸೇವಾ ಸಂಸ್ಥೆಯ ಕಾರ್ಯದರ್ಶಿ ಆಕಾಶ ಬೇವಿನಕಟ್ಟಿ,ಮಾನವ ಬಂದುತ್ವ ವೇದಿಕೆಯ ಪ್ರಕಾಶ ಬೊಮ್ಮನ್ನವರ ಆಗಮಿಸಿದ್ದರು.
ಸಂಘದ ಅಧ್ಯಕ್ಷ ಮಹಾಂತೇಶ ಹೊಂಗಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಂತರಾಷ್ಟ್ರ ಮಟ್ಟದ ಕ್ರೀಡಾ ಪಟುಗಳು ಮತ್ತು ರಾಷ್ಟ್ರೀಯ ಕ್ರೀಡಾ ಪಟುಗಳನ್ನು ಸನ್ಮಾನಿಸಲಾಯಿತು. mಕಾರ್ಯಕ್ರಮದಲ್ಲಿ ಸುರಜ ಧಾವಣೆಕರ, ಮನಿಶಾ ಹೊಂಗಲ, ಬಸಪ್ಪಾ ಸುನದೋಳಿ, ಈರಣ್ಣ ಹೊಂಡಪಗೋಳ, ಲಕ್ಷ್ಮೀ ರಾಯನ್ನವರ, ಲಿಲಿತಾ ಗೌಸ್, ಮಹೇಶ ಹೊಸುರ ಹಾಗೂ ನೂರಾರು ವಿಕಲಚೇತನ ಕ್ರೀಡಾಪಟುಗಳು ಭಾಗವಹಿಸಿದ್ದರು.


Gadi Kannadiga

Leave a Reply