This is the title of the web page
This is the title of the web page

Please assign a menu to the primary menu location under menu

Local News

ಬೆಳಗಾವಿ ಜಿ.ಪಂ. ವಿಸ್ತರಣಾ ಕಟ್ಟಡ ಲೋಕಾರ್ಪಣೆಗೊಳಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ


ಬೆಳಗಾವಿ,ಡಿ.೨೮: ಬೆಳಗಾವಿ ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ಪಂಚಾಯತ ಕಟ್ಟಡಕ್ಕೆ ಹೊಂದಿಕೊಂಡಿರುವ ೨೫೮ ಲಕ್ಷ ರೂ. ಗಳಲ್ಲಿ ನಿರ್ಮಿಸಲಾದ ವಿಸ್ತರಣಾ ಕಟ್ಟಡವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಉದ್ಘಾಟಿಸಿದರು.
ಜಲ ಸಂಪನ್ಮೂಲ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ, ಗೃಹ ಸಚಿವರಾದ ಅರಗ ಜ್ಞಾನೇಂದ್ರ, ಶಾಸಕರಾದ ಅನೀಲ ಬೆನಕೆ, ಸಂಸದೆ ಮಂಗಲಾ ಅಂಗಡಿ, ಬೆಳಗಾವಿ ಪ್ರಾದೇಶಿಕ ಆಯುಕ್ತರಾದ ಎಂ.ಜಿ.ಹಿರೇಮಠ, ಜಿಲ್ಲಾಧಿಕಾರಿ ನೀತಿಶ್ ಪಾಟೀಲ್, ಜಿ.ಪಂ. ಸಿ.ಇ.ಒ ದರ್ಶನ ಎಚ್.ವಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಜಿಲ್ಲಾ ಪಂಚಾಯತ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ಪಂಚಾಯತ್ ಕಟ್ಟಡಕ್ಕೆ ಹೊಂದಿಕೊಂಡಿರುವ ವಿಸ್ತರಣಾ ಕಟ್ಟದ ನೆಲಮಹಡಿಯಲ್ಲಿ ೪೦೦೦ ಚ.ಅಡಿಯಷ್ಟು ವಾಹನ ನಿಲುಗಡೆ ಪ್ರದೇಶ ಹೊಂದಿದ್ದು ಸುಮಾರು ೨೪೦೦ ಚ. ಅಡಿಯಷ್ಟು ಶಿಕ್ಷಣ ಇಲಾಖೆಗೆ ಅಗತ್ಯವಿರುವ ಸಭಾಂಗಣ ಮತ್ತು ಉಗ್ರಾಣ ವ್ಯವಸ್ಥೆಯನ್ನ ಕಲ್ಪಿಸಲಾಗಿದೆ. ಮೊದಲನೆ ಮಹಡಿಯಲ್ಲಿ ೬೨೦೦ ಚ.ಅಡಿಯಷ್ಟು ಪ್ರದೇಶವನ್ನು ವಿಸ್ತರಿಸಿ ೨೬ ಕೆಲಸ ನಿರ್ವಾಹಕರ ಹಾಗೂ ೧ ಮುಖ್ಯ ಅಧಿಕಾರಿಗಳ ಕೊಠಡಿಗಳನ್ನು ನಿರ್ಮಿಸಲಾಗಿದೆ.


Gadi Kannadiga

Leave a Reply