This is the title of the web page
This is the title of the web page

Please assign a menu to the primary menu location under menu

State

ಸೆ. ೨೫ ರಂದು ಜಿಲ್ಲೆಯ ಚಿಕ್ಕಬೀಡ್ನಾಳ ಗ್ರಾಮದಲ್ಲಿ “ಚಿಗುರು” ಕಾರ್ಯಕ್ರಮ


ಕೊಪ್ಪಳ, ಸೆ. ೨೧ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ೨೦೨೨-೨೩ನೇ ಸಾಲಿನ “ಚಿಗುರು” ಕಾರ್ಯಕ್ರಮವನ್ನು ಇದೇ ಸೆ. ೨೫ ರಂದು ಮಧ್ಯಾಹ್ನ ೦೩ ಗಂಟೆಗೆ ಕುಕನೂರು ತಾಲ್ಲೂಕಿನ ಚಿಕ್ಕಬೀಡ್ನಾಳ ಗ್ರಾಮದ ಬಾಂಧವಿ(ರಿ) ಸಮಗ್ರ ಶಿಕ್ಷಣ ಶಾಲೆ, ವಿಸ್ತಾರ ರಂಗಶಾಲೆ ಆವರಣದಲ್ಲಿ ಆಯೋಜಿಸಲಾಗಿದೆ.
ರಾಜ್ಯ ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಹಾಲಪ್ಪ ಆಚಾರ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಹಿರೇಬೀಡ್ನಾಳ ಗ್ರಾಮ ಪಂಚಾಯತ್ ಅಧ್ಯಕ್ಷ ರೇವಣಸಿದ್ಧನಗೌಡ ಶಿವಶಂಕರ ಮಾಲಿಪಾಟೀಲ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು. ಮುಖ್ಯ ಅತಿಥಿಗಳಾಗಿ ಹಿರೇಬೀಡ್ನಾಳ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಯಮನಮ್ಮ ಯಮನಪ್ಪ ಕೊಪ್ಪಳ, ಕಲಬುರಗಿ ವಲಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಹೆಚ್ ಚನ್ನೂರ್, ಕುಕನೂರು ತಹಶೀಲ್ದಾರ ಚಿದಾನಂದ ಗುರುಸ್ವಾಮಿ, ಯಲಬುರ್ಗಾ ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಕರ್ಣಂ, ಚಿಕ್ಕಬೀಡ್ನಾಳ ಗ್ರಾಮದ ಬಾಂಧವಿ (ರಿ) ವಿಸ್ತಾರ ರಂಗಶಾಲೆಯ ನಿರ್ದೇಶಕಿ ಆಶಾ ವಿ. ಸೇರಿದಂತೆ ಹಿರೇಬೀಡ್ನಾಳ ಗ್ರಾ.ಪಂ. ಸರ್ವ ಸದಸ್ಯರು ಆಗಮಿಸುವರು.
ಸಾಂಸ್ಕೃತಿಕ ಕಾರ್ಯಕ್ರಮಗಳು :
“ಚಿಗುರು” ಕಾರ್ಯಕ್ರಮವ ಅಂಗವಾಗಿ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಇಂತಿದೆ. ಸಂಜನಾ ಭೂತಣ್ಣವರ ರಿಂದ ಶಾಸ್ತ್ರೀಯ ಸಂಗೀತ, ರಮ್ಯಾ ದೇವರಾಜ ರಿಂದ ಭರತನಾಟ್ಯ, ಐಶ್ವರ್ಯ ಹಿರೇಮಠ ರಿಂದ ಹಾರ್ಮೊನಿಯಂ ವಾದನ, ಪುಟ್ಟರಾಜ ಎಮ್. ರಿಂದ ಸುಗಮ ಸಂಗೀತ, ಅರ್ಜುನ್ ಇಟಗಿಯಿಂದ ಜನಪದ ಸಂಗೀತ, ಶಕುಂತಲಾ ಹಾಗೂ ತಂಡದಿಂದ ಸಮೂಹ ನೃತ್ಯ, ಅರುಣ & ತಂಡದಿಂದ ನಾಟಕ ಹಾಗೂ ಬಯಲಾಟ, ತೇಜಸ್ವಿನಿ ಪುರ್ತಗೇರಿ ಯಿಂದ ಏಕ ಪಾತ್ರಾಭಿನಯ, ಲಕ್ಷ್ಮೀ ಗಂಗಾವತಿ ರಿಂದ ಸಮೂಹ ನೃತ್ಯ ಜರುಗಲಿವೆ ಎಂದು ಕೊಪ್ಪಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply