This is the title of the web page
This is the title of the web page

Please assign a menu to the primary menu location under menu

Local News

ಮೂಡಲಗಿ ಕೆರೆಯಲ್ಲಿ ಶವ ಪತ್ತೆ ಹಿನ್ನೆಲೆ ಹೆರಿಗೆ ಆಸ್ಪತ್ರೆ ಸೀಜ್


ಬೆಳಗಾವಿ: ಇತ್ತೀಚಿಗೆ ಬೆಳಗಾವಿ ಜಿಲ್ಲೆಯ ಮುಡಲಗಿಯಲ್ಲಿ 7 ಭ್ರೂಣ ಶಿಶುಗಳು ರಸ್ತೆ ಪಕ್ಕದಲ್ಲಿ ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ತುಂಬಾ ಆತಂಕ ಸೃಷ್ಟಿಸಿತ್ತು.

ಈ ಬಗ್ಗೆ ಇವತ್ತು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಜಿಲ್ಲಾ ಆರೋಗ್ಯ ಅಧಿಕಾರಿ ಮಹೇಶ ಕೊನೆ ಅವರು, ನಿನ್ನೆ ಮುಡಲಗಿಯಲ್ಲಿ ನಡೆದ ಘಟನೆ ಬಗ್ಗೆ ಮಾಹಿತಿ ಬಂದಾಗ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು, ವಿಶೇಷ ತಂಡ ರಚಿಸಿ, ಸ್ಥಳೀಯ ಹೆರಿಗೆ ಆಸ್ಪತ್ರೆ ಹಾಗೂ ಸ್ಕ್ಯಾನಿಂಗ್ ಸೆಂಟರ್ ಮೇಲೆ ದಾಳಿ ನಡೆಸಿದಾಗ ಅಲ್ಲಿ ಇದ್ದಂತ ವೆಂಕಟೇಶ್ವರ ಹಾಸ್ಪಿಟಲ್ ನ ವೀಣಾ ಕನಕರೆಡ್ಡಿ ಎಂಬ ಹೆರಿಗೆ ವೈದ್ಯೇಳನ್ನು ತನಿಖೆ ಮಾಡಿದಾಗ, ಸಿಕ್ಕಿರುವ 7 ಭ್ರೂಣ ಇರುವಂತ ಡಬ್ಬಿಗಳು ತಮ್ಮವೇ ಎಂದು ಒಪ್ಪಿಕೊಂಡಿದ್ದಾರೆ.

ಮೂರು ನಾಲ್ಕು ದಿನದ ಹಿಂದೆ ತಮ್ಮ ಸಿಬ್ಬಂದಿಯೇ ಅವುಗಳನ್ನು ಅಲ್ಲಿ ಹಾಕಿದೆ ಎಂದಿದ್ದಾರೆ, ಇಮಿಡಿಯಟ ಆಗಿ ಹಾಸ್ಪಿಟಲ್ ಮೇಲೆ ಕೇಸ್ ದಾಖಲು ಮಾಡಿ, ಆಸ್ಪತ್ರೆಯನ್ನು ಸೀಜ್ ಮಾಡಿದ್ದೇವೆ ಎಂದರು.

ಬ್ರುಣಗಳನ್ನು ಹೆಚ್ಚಿನ ತನಿಖೆಗಾಗಿ ಪೋಸ್ಟ್ ಮಾರ್ಟಮ್ಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಸಿದ್ದೇವೆ, ವರದಿ ಬಂದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ವರದಿ ಆಧರಿಸಿ ಕಾನೂನಿನಲ್ಲಿ ಇರುವ ಪ್ರಕಾರ ಎಲ್ಲರ ಮೇಲೂ ಕ್ರಮ ಜರುಗುತ್ತದೆ, ತಪ್ಪು ಸಾಭಿತಾದರೆ ಸುಮಾರು 6 ರಿಂದ 7 ವರ್ಷ ಶಿಕ್ಷೆ ಆಗಬಹುದು ಎಂದರು.

ಇಲಾಖೆಯ ನೂಡಲ್ ಅಧಿಕಾರಿಗಳ ಕರ್ತವ್ಯಲೋಪವೂ ಇದರಲ್ಲಿ ಎದ್ದು ಕಾಣುತ್ತಿದೆ, ತಾಲೂಕು ಅಧಿಕಾರಿಗಳು ಹಾಗೂ ನೂಡಲ್ ಅಧಿಕಾರಿಗಳು ಎಲ್ಲರೂ ಸರಿಯಾದ ಮಾಹಿತಿ ನೀಡಬೇಕೆಂದು ಜಿಲ್ಲಾಧಿಕಾರಿ ಹಾಗೂ ನಾವು ಈಗಾಗಲೇ ಆದೇಶ ಮಾಡಿದ್ದೇವೆ ಎಂದರು.


Gadi Kannadiga

Leave a Reply