This is the title of the web page
This is the title of the web page

Please assign a menu to the primary menu location under menu

Local News

ಮಕ್ಕಳಿಗೆ ಸಂಗೀತಾಭ್ಯಾಸ ಕೊಡಿಸಿ ಪ್ರೋತ್ಸಾಹ ನೀಡಬೇಕು


ಬೆಳಗಾವಿ:ಮೇ-೧೯: ”ಸಂಗೀತದಿಂದ ಶ್ರದ್ದೆ ಹಾಗೂ ಸಹನೆ ಸಾಧ್ಯವಾಗಿ ಮಕ್ಕಳ ಕಲಿಕೆಗೆ ಸಹಕಾರಿಯಾಗುತ್ತದೆ. ಹೀಗಾಗಿ ಪೋಷಕರು ಸೂಕ್ತ ಗುರುಗಳ ಮಾರ್ಗದರ್ಶನದಲ್ಲಿ ಮಕ್ಕಳಿಗೆ ಸಂಗೀತಾಭ್ಯಾಸ ಕೊಡಿಸಿ ಪ್ರೋತ್ಸಾಹ ನೀಡಬೇಕು” ಎಂದು ಕಲಾಶ್ರೀ ಪ್ರಶಸ್ತಿ ಪುರಸ್ಕೃತರಾದ ವಿದೂಷಿ ಶಾಂತಲಕ್ಷ್ಮೀ ನಾಗೇಂದ್ರನಾಥ ಅಭಿಪ್ರಾಯ ಪಟ್ಟರು.
ನಗರದ ಬುಡಾ ಕಾಲೋನಿಯ ಲಕ್ಷ್ಮೀನಗರದ ‘ನಾರಾಯಣ ರತ್ನ” ನಿವಾಸದಲ್ಲಿ ‘ನಾದಸುಧಾ ಸುಗಮ ಸಂಗೀತ ಶಾಲೆ’ಯ ನೂತನ ಶಾಖೆಯನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟನೆ ಮಾಡಿ ಮಾತನಾಡಿದ ಅವರು
“ಸಂಗೀತ ವಿದ್ವಾಂಸರಾದ ಸತ್ಯನಾರಾಯಣ ಅವರ ಮಾರ್ಗದರ್ಶನದಲ್ಲಿ ಸುತ್ತಮುತ್ತಲಿನ ನಿವಾಸಿಗಳ ಮಕ್ಕಳಿಗೆ, ಆಸಕ್ತರಿಗೆ ಅವಕಾಶ ಒದಗಿಸುತ್ತಿದ್ದಾರೆ. ನಾಗರಿಕರು ಅದರ ಸದುಪಯೋಗ ಪಡೆದುಕೊಳ್ಳಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿದ್ವಾನ್ ಎಂ. ಜಿ. ರಾವ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ” ಮಕ್ಕಳು ಗುರುಗಳಿಂದ ಸಂಗೀತ ವಿದ್ಯೆಯನ್ನು ಪಡೆದುಕೊಂಡು ಮುಂದುವರಿಸಿಕೊಂಡು ಹೋಗಬೇಕು. ನಿರಂತರ ಕಲಿಕೆಯೇ ಸಾಧನೆಯ ಮೂಲವಾಗಿರುವ ಕಾರಣ ಅರ್ಧದಲ್ಲೇ ಸಂಗೀತಾಭ್ಯಾಸ ಮೊಟಕುಗೊಳಿಸಬಾರದು” ಎಂದರು.
ಕಾರ್ಯಕ್ರಮದಲ್ಲಿ ‘ನಾದ ಸುಧಾ ಸಂಗೀತ ಶಾಲೆ’ಯ ಮಕ್ಕಳು ಕನ್ನಡ, ಹಿಂದಿ ಹಾಗೂ ಮರಾಠಿ ಗೀತೆಗಳನ್ನು ಹಾಡಿ ಪ್ರೇಕ್ಷಕರ ಮನಸೆಳೆದರು. ಅಂತರರಾಷ್ಟ್ರೀಯ ಖ್ಯಾತಿಯ ವಿದ್ವಾನ್ ಪಾರ್ಶ್ವನಾಥ ಉಪಾಧ್ಯೆ ಅವರ ಚಾಮುಂಡೇಶ್ವರಿ ನೃತ್ಯ ನೋಡುಗರ ಮೈ ಪುಳಕಿತಗೊಳಿಸಿತು. ಪ್ರತೀಕ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಯೂಟ್ಯೂಬ್-ನಲ್ಲಿ ನೇರ ಪ್ರಸಾರಗೊಂಡಿತು.
ಡಾ.ಸಂಪ್ರೀತಾ ನಾಗಭೂಷಣ, ರಘುನಾಥ ಕುಲಕರ್ಣಿ, ಶಾಂತಿನಾಥ ಉಪಾಧ್ಯೆ, ವರ್ಧಮಾನ ಉಪಾಧ್ಯೆ ಅವರು ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಭಾಗ್ಯನಗರ, ಅನಗೋಳ,ಲಕ್ಷ್ಮೀನಗರ ಮುಂತಾದ ನಾಗರಿಕರು ಉಪಸ್ಥಿತರಿದ್ದರು. ಶಾಲೆಯ ಸಂಸ್ಥಾಪಕ ಡಾ. ಸತ್ಯನಾರಾಯಣ ಅವರು ಸ್ವಾಗತಿಸಿದರು. ಪ್ರೇಮಾ ಉಪಾಧ್ಯೆ ನಿರೂಪಿಸಿ ವಂದಿಸಿದರು.


Leave a Reply