This is the title of the web page
This is the title of the web page

Please assign a menu to the primary menu location under menu

State

ಮಕ್ಕಳು ಜೆ ಇ ಲಸಿಕೆ ಹಾಕಿಸಿಕೊಳ್ಳಬೇಕು


ಗದಗ ಡಿಸೆಂಬರ್ ೫: ನೆರೆಯ ಜಿಲ್ಲೆಗಳಲ್ಲಿ ಮೆದುಳು ಜ್ವರದ ಕೇಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಿರುವದರಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಹಾಗೂ ಮಕ್ಕಳು ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದರು. ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾರ್ತಾ ಇಲಾಖೆ, ಜಿಲ್ಲಾ ಶಿಕ್ಷಣ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರದಂದು ನಗರದ ಸಿದ್ಧಲಿಂಗ ನಗರದ ಸರಕಾರಿ ಪ್ರೌಢಶಾಲೆಯಲ್ಲಿ ಮೆದುಳು ಜ್ವರದ ಲಸಿಕಾ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.
ಮೆದುಳು ಜ್ವರ ಮಕ್ಕಳಿಗೆ ಹೆಚ್ಚಿಗೆ ಹರಡುವದರಿಂದ ಮಕ್ಕಳು ಕಡ್ಡಾಯವಾಗಿ ಜೆಇ ಲಸಿಕೆ ಹಾಕಿಸಿಕೊಳ್ಳಬೇಕು. . ಶಾಲೆಯ ಕೊಠಡಿ ಹಾಗೂ ಶಾಲೆಯ ಮೈದಾನ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ನಿರ್ದೇಶನ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಜಗದೀಶ ನುಚ್ಚಿನ ಜೆ.ಇ. ಲಸಿಕಾ ಅಭಿಯಾನ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ. ಈ ರೋಗವು ಕ್ಯೂಲೆಕ್ಸ್ ಸೊಳ್ಳೆಗಳಿಂದ ಹರಡುತ್ತದೆ. ಈ ರೋಗವು ೧೮೭೧ರಲ್ಲಿ ಜಪಾನ ದೇಶದಲ್ಲಿ ಕಂಡುಬಂದಿತು ೧೯೫೫ರಲ್ಲಿ ಭಾರತ ದೇಶದಲ್ಲಿ ಪ್ರಥಮ ಭಾರಿಗೆ ತಮಿಳುನಾಡು ವೆಲ್ಲೂರ ನಗರದಲ್ಲಿ ಕಂಡು ಬಂದಿತು ೧೯೭೮ರಲ್ಲಿ ಕರ್ನಾಟಕ ರಾಜ್ಯ ಕೋಲಾರ ಜಿಲ್ಲೆಯಲ್ಲಿ ಮೆದುಳು ಜ್ವರ ವೈರಸ್ ಕಂಡು ಬಂದಿತು ೦೧ ವರ್ಷದಿಂದ ೦೫ ವರ್ಷದ ಮಕ್ಕಳಿಗೆ ಎಡ ತೊಡೆಯಲ್ಲಿ ಲಸಿಕೆ ಹಾಕುತ್ತಾರೆ. ೦೫ ರಿಂದ ೧೫ ವರ್ಷದೊಳಗಿನ ಮಕ್ಕಳಿಗೆ ಎಡ ತೋಳಿನ ಮೇಲೆ ಲಸಿಕೆ ಹಾಕಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಎಸ್. ಎಸ್. ನೀಲಗುಂದ, ಡಾ. ಪ್ರೀತ ಖೋನಾ , ಉಮೇಶ ಕರಮುಡಿ, ಪುಷ್ಪಾ ಪಾಟೀಲ, ಪ್ರಭಾರಿ ಡಿಡಿಪಿಐ ಐ. ಆರ್. ಅಕ್ಕಿ ಬಿಇಓ ಆರ್. ಎಸ್. ಬುರಡಿ, ಎಸ್.ಎಸ್. ಮುಳಗುಂದಮಠ ಎಚ್.ಎಮ್. ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು/ಸಿಬ್ಬಂದಿಗಳು, ಶಿಕ್ಷಣ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು. ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ ಬಿ. ಎಮ್. ಗೊಜನೂರ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೂಪಸೇನ ಚೌವ್ಹಾಣ ವಂದಿಸಿದರು.


Gadi Kannadiga

Leave a Reply