This is the title of the web page
This is the title of the web page

Please assign a menu to the primary menu location under menu

State

ಚುನಾವಣೆಯಲ್ಲಿ ಮಕ್ಕಳ ಬಳಕೆ ಸಲ್ಲದು


ಗದಗ ಮಾರ್ಚ ೨೩: ಕರ್ನಾಟಕ ರಾಜ್ಯದ ೨೦೨೩ ರ ಸಾರ್ವತ್ರಿಕ ವಿಧಾನ ಸಭೆ ಚುನಾವಣಾ ಸನ್ನಿಹಿತವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ಮೆರವಣಿಗೆಯಲ್ಲಿ ಅಂದರೆ ಕರಪತ್ರ ಹಂಚಲು, ಬಿತ್ತ ಪತ್ರ ಅಂಟಿಸಲು , ಮಕ್ಕಳ ಕೈಯಲ್ಲಿ ಬಾವುಟ ನೀಡುವುದು, ಮಕ್ಕಳಿಗೆ ಪಕ್ಷದ ಚಿನ್ಹೆ ಇರುವ ಬಟ್ಟೆಗಳನ್ನು ನೀಡಿ ಮಕ್ಕಳನ್ನು ತಮ್ಮ ಚುನಾವಣಾ ಪ್ರಚಾರದಲ್ಲಿ ಬಳಸಿಕೊಳ್ಳುವ ಸಂಭವವಿರುತ್ತದೆ. ಮಕ್ಕಳು ಶಾಲಾ ಸಮಯದಲ್ಲಿ ಶಾಲೆಗಳಲ್ಲಿ ಇತರೆ ಸಮಯದಲ್ಲಿ ತಮ್ಮ ಕುಟುಂಬ ವ್ಯವಸ್ಥೆಯಲ್ಲಿ ಇರಬೇಕಾಗಿದ್ದು ನ್ಯಾಯಯುತವಾಗಿದೆ. ಮಕ್ಕಳನ್ನು ಯಾವುದೇ ರಾಜಕೀಯ ಪ್ರಚಾರದ ಉದ್ದೇಶಗಳಿಗಾಗಿ ಬಳಸುವುದು ಕಂಡು ಬಂದಲ್ಲಿ ಅಂತಹ ವ್ಯಕ್ತಿಗಳ/ ಪಕ್ಷಗಳ ಮೇಲೆ ಚುನಾವಣಾ ನೀತಿ ಸಂಹಿತೆ ಅಡಿಯಲ್ಲಿ ಪ್ರಕರಣವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಇವರಲ್ಲಿ ದಾಖಲಿಸಲಾಗುವುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಗದಗ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply