ಬೆಳಗಾವಿ, ಆ.೧೦ : ಸಭೆಯಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಕೋಟ್ಪಾ -೨೦೦೩ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವಲ್ಲಿ ವಿವಿಧ ಇಲಾಖೆಯ ಅಧಿಕಾರಗಳ ಪಾತ್ರ ಮಹತ್ವದಾಗಿದ್ದು, ಮಕ್ಕಳು ಮತ್ತು ಯುವಜನೆತೆ ದುಶ್ಚಟಗಳಿಗೆ ಬಲಿಯಾಗಬೇಡಿ ಎಂದು ಜಿಲ್ಲಾ ಸರ್ವೆಕ್ಷಣಾಧಿಕಾರಿಗಳಾದ ಡಾ. ಎಸ್.ಎಸ್.ದೊಡ್ಡಮನಿ ಅವರು ಹೇಳಿದರು.
ಬೆಳಗಾವಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಆ.೯ ೨೦೨೩ ರಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಜಿಲ್ಲಾ ಸಮನ್ವಯ ಸಮಿತಿಯ ೧ನೇ ತ್ರೆöÊಮಾಸಿಕ ಸಭೆ ನಡೆಸಲಾಯಿತು.
ರಾಜ್ಯ ತಂಬಾಕು ನಿಯಂತ್ರಣ ಘಟಕದ ವಿಭಾಗೀಯ ಸಂಯೋಜಕರಾದ ಮಹಾಂತೇಶ ಉಳ್ಳಾಗಡ್ಡಿ ರವರು ಕಳೆದ ಸಭೆಯಲ್ಲಿ ತಿರ್ಮಾನಿಸಿದ ಅನುಪಾಲನಾ ವರದಿಯನ್ನು ಸಭೆಗೆ ಮಂಡಿಸಿ ಜಿಲ್ಲೆಯಲ್ಲಿ ತಾಲೂಕಾ ಮಟ್ಟದ ತೈಮಾಸಿಕ ಸಭೆ ತಾಲೂಕಾ ಹಂತದಲ್ಲಿ ತಂಬಾಕು ದಾಳಿ ನಡೆಸುವ ಕುರಿತು ಜಿಲ್ಲಾಧಿಕಾರಿಗಳಲ್ಲಿ ವಿನಂತಿಸಿದಾಗ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ, ನ್ಯಾಯಾಂಗ ಆವರಣ, ಅಂಜುಮನ್ ಕಾಲೇಜ, ಬಿಮ್ಸ ಆಸ್ಪತ್ರೆ, ಹಾಗೂ ಪ್ರಾಥಮಿಕ ಆರೋಗ್ಯ ಕೆಂದ್ರಗಳು, ತಹಶಿಲ್ದಾರ ಕಚೇರಿ ಮತ್ತು ಎಲ್ಲ ತಾಲೂಕು ಆಸ್ಪತ್ರೆಯಿಂದ ೧೦೦ ಮೀಟರ ಅಂತರದೊಂಳಗೆ ತಂಬಾಕು ಮಾರಾಟ ನಿಷೇಧಗೊಳಿಸಿ ಸಂಬಂದಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ಆದೇಶಿಸಿದರು ಹಾಗೂ ಜಿಲ್ಲೆಯ ಎಲ್ಲ ಶೈಕ್ಷಣಿಕ ಸಂಸ್ಥೆಗಳನ್ನು ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಗಳನ್ನಾಗಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದರು. ಸರಕಾರ ಜಾರಿಗೊಳಿಸುವ ತಂಬಾಕು ಮಾರಾಟ ಉದ್ಯಮ ಪರವಾನಿಗೆ ನೀತಿಯನ್ನು ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅನುಷ್ಠಾಣಗೊಳಿಸುವಂತೆ ಆದೇಶಿಸಿದರು ಎಂದು ಹೇಳಿದರು. ಕೋಟ್ಪಾ -೨೦೦೩ ಕಾಯ್ದೆಯ ಉಲ್ಲಂಘನೆಯನ್ನು ಸಾರ್ವಜನಿಕರಿಂದ ವರದಿ ಮಾಡಲು ರಾಜ್ಯ ತಂಬಾಕು ನಿಯಂತ್ರಣ ಘಟಕದಿಂದ ”Sಣoಠಿಣobಚಿಛಿಛಿo ಒobiಟe ಂಠಿಠಿ” ಬಿಡುಗಡೆಗೊಳಿಸಿದ್ದು, ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಹಾಗೂ ಪ್ರಚಾರ ಪಡಿಸಿ ಕೋಟ್ಪಾ-೨೦೦೩ ಕಾಯ್ದೆ ಉಲ್ಲಂಘನೆ ಮಾಡಿದಲ್ಲಿ ಕ್ರಮ ಜರುಗಿಸಲು ಆದೇಶಿಸಿದರು. ತಾಲೂಕು ಮಟ್ಟದ ತಹಶೀಲ್ದಾರರ ನೇತೃತ್ವದಲ್ಲಿ ತಾಲೂಕು ತಂಬಾಕು ನಿಯಂತ್ರಣ ಸಭೆ ಕರೆದು ವಾರದಲ್ಲಿ ಒಂದು ದಿನ ತಂಬಾಕು ಮಾರಾಟ ಮಾಡುತ್ತಿರುವ ಅಂಗಡಿಗಳ ಮೇಲೆ ಕಾರ್ಯಾಚಾರನೆ ಮಾಡಿ ಸೆಕ್ಷನ್೪ ನಾಮಫಲಕ ಪ್ರದರ್ಶಿಸಲು ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳು, ಡಾ: ಮಹೇಶ ಕೋಣಿ, ಜಿಲ್ಲಾ ಸಮೀಕ್ಷಾ ತಂಬಾಕು ನಿಯಂತ್ರಣಾಧಿಕಾರಿಗಳು ಎಸ್.ಎಸ್.ದೊಡ್ಡಮನಿ, ಕಾರ್ಯಕ್ರಮ ಅನುಷ್ಠಾಣ ಅಧಿಕಾರಿಗಳು, ಸಾರ್ವಜನಿಕ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.
Gadi Kannadiga > Local News > ಮಕ್ಕಳು, ಯುವಜನೆತೆ ದುಶ್ಚಟಗಳಿಗೆ ಬಲಿಯಾಗಬೇಡಿ: ಜಿಲ್ಲಾ ಸರ್ವೆಕ್ಷಣಾಧಿಕಾರಿಗಳಾದ ಡಾ. ಎಸ್.ಎಸ್.ದೊಡ್ಡಮನಿ
ಮಕ್ಕಳು, ಯುವಜನೆತೆ ದುಶ್ಚಟಗಳಿಗೆ ಬಲಿಯಾಗಬೇಡಿ: ಜಿಲ್ಲಾ ಸರ್ವೆಕ್ಷಣಾಧಿಕಾರಿಗಳಾದ ಡಾ. ಎಸ್.ಎಸ್.ದೊಡ್ಡಮನಿ
Suresh10/08/2023
posted on
