This is the title of the web page
This is the title of the web page

Please assign a menu to the primary menu location under menu

State

ಗಡಿ ವಿವಾದ : ಜನಪ್ರತಿನಿಧಿಗಳ ನಿರ್ಲಕ್ಷ ಮತ್ತು ಕೇಂದ್ರದ ನಿಲುವಿಗೆ ಚಿಂಚಣಿ ಶ್ರೀಗಳ ಅಕ್ಷೇಪ


ಚಿಂಚಣಿ : ಕರ್ನಾಟಕ ಮಹಾರಾಷ್ಟ್ರ ನಡುವೆ ಇರುವ ಗಡಿ ವಿವಾದಕ್ಕೆ ಸಂಬoಧಪಟ್ಟoತೆ
ಇತ್ತೀಚಿಗೆ ಕೇಂದ್ರ ಸಚಿವ ಅಮಿತ್ ಷಾ ಅವರ ನೇತೃತ್ವದಲ್ಲಿ ನಡೆದ ಉಭಯ ರಾಜ್ಯಗಳ
ಮುಖ್ಯಮಂತ್ರಿಗಳ ಸಭೆಯಲ್ಲಿ ಕೇಂದ್ರ ಸರ್ಕಾರವು ತಳೆದಿರುವ ತಟಸ್ಥ ನಿಲುವು ಸರಿಯಲ್ಲ
ಮತ್ತು ಗಡಿಭಾಗದ ಜನಪ್ರತಿನಿಧಿಗಳ ನಿಲಕ್ಷ ಧೋರಣೆ ಸಹಿಸಲಾಗದು ಎಂದು ಚಿಂಚಣಿ ಸಿದ್ಧ
ಸಂಸ್ಥಾನ ಮಠದ ಶ್ರೀ.ಅಲ್ಲಮಪ್ರಭು ಮಹಾಸ್ವಾಮಿಗಳು ಅಕ್ಷೇಪ ವ್ಯಕ್ತಪಡಿಸಿದ್ದಾರೆ.
೧೫ನೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರೂ ಆಗಿರುವ
ಅವರು ಚಿಂಚಣಿ  ಶ್ರೀ.ಮಠದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಕೇಂದ್ರ
ಸರ್ಕಾರವು ಈ ಸಂಬAಧ ಗಟ್ಟಿಯಾದ ನಿಲುವನ್ನು ತಳೆಯಬೇಕಿತ್ತು ಈ ರೀತಿಯ ತಟಸ್ಥ ನಿಲುವು
ಮಹಾರಾಷ್ಟ್ರಿಗರಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ ಅದಕ್ಕೆ ಬದಲಾಗಿ ಒಂದು ಗಡುವನ್ನು
ನಿಗದಿಪಡಿಸಿ ಅದೇ ಕಾಲಮಿತಿಯಲ್ಲಿ ಸಮಸ್ಯೆಯನ್ನು ಅವರು ಶಾಶ್ವತವಾಗಿ
ಪರಿಹರಿಸಬೇಕಿತ್ತು ಎಂದ ಅವರು ಕರ್ನಾಟಕ ಸರ್ಕಾರ ಕೂಡ ಈ ವಿಷಯದಲ್ಲಿ ಅತ್ಯಂತ
ಗಟ್ಟಿಯಾದ ನಿಲುವನ್ನು ತಳೆದು ಕೇಂದ್ರ ಸರ್ಕಾರದ ಮೇಲೆ ತೀವ್ರ ಒತ್ತಡ ತರಬೇಕು ಎಂದವರು
ಹೇಳಿದರು.
ಮಹಾಜನ ವರದಿ ಅತ್ಯುತ್ತಮವಾದ ವರದಿ ಅದನ್ನು ಎರಡು ರಾಜ್ಯಗಳವರು ಒಪ್ಪಬೇಕಿತ್ತು, ಆದರೆ
ಬೆಳಗಾವಿ ಮತ್ತು ಬೀದರ್ ನಗರಗಳಿಲ್ಲ ಎಂಬ ಕಾರಣಕ್ಕೆ ಮಹಾರಾಷ್ಟ್ರದವರು ತಕರಾರು
ತೆಗೆದರು ಗಡಿಭಾಗದಲ್ಲಿರುವ ಶ್ರೀಸಾಮಾನ್ಯರಿಗೆ ಗಡಿ ವಿವಾದ ಬೇಕೆ ಆಗಿಲ್ಲ
ಗಡಿಭಾಗದಲ್ಲಿ ಭಾಷಾ ಬಾಂಧವ್ಯಕ್ಕಾಗಲಿ ಯಾವುದೇ ರೀತಿಯ ಧಕ್ಕೆ ಇಲ್ಲ ಗಡಿ ಭಾಗದಲ್ಲಿ
ಭಾಷೆಯನ್ನು ಮತ್ತು ಗಡಿಯನ್ನು ಮೀರಿ ಸಂಬAಧಗಳು ಬೆಳೆದಿವೆ ಭಾಷಾ ವಿವಾದ ಕೆಲವೇ
ಕೆಲವರಿಂದ ಕೆದಕಿದಾಗ ಗಡಿ ಭಾಗದಲ್ಲಿರುವ ಜನಪ್ರತಿನಿಧಿಗಳು ಮಾತನಾಡುವುದಿಲ್ಲ
ತಟಸ್ಥರಾಗುತ್ತಾರೆ ಬದಲಾಗಿ ಕೇವಲ ಮತಗಳಿಗಾಗಿ ಮರಾಠಿಗರನ್ನು ಓಲೈಸುವ ಕಾರ್ಯವನ್ನು
ಮಾಡುತ್ತಾರೆ ಸರ್ಕಾರದ ಆದೇಶಗಳು ನಡವಳಿಕೆಗಳು ವ್ಯವಹಾರಗಳು ಎಲ್ಲವೂ ಕನ್ನಡದಲ್ಲಿ
ಇದ್ದಾಗ ಸರ್ಕಾರಿ ಕಾರ್ಯಕ್ರಮದಲ್ಲೂ ಕೂಡ ಇವರು ಮರಾಠಿಯಲ್ಲಿ ಮಾತನಾಡುವುದು ಸರಿಯಲ್ಲ
ಗಡಿಭಾಗದ ಜನಪ್ರತಿನಿಧಿಗಳು ಕರ್ನಾಟಕದ ಪರವಾಗಿ ಕೆಲಸ ಮಾಡುವಲ್ಲಿ ವಿಫಲರಾಗಿದ್ದಾರೆ
ಮತ್ತು ಅನಾಸಕ್ತಿ ಹೊಂದಿದ್ದಾರೆ ಇದು ಸರಿಯಲ್ಲ ಎಂದವರು ಅಭಿಪ್ರಾಯ ಪಟ್ಟರು.
ಗಡಿ ವಿವಾದದಿಂದಾಗಿ ಯಾವುದೇ ಕಾರಣಕ್ಕೂ ಉಭಯ ರಾಜ್ಯಗಳಲ್ಲಿ ಗಲಭೆಯಾಗಬಾರದು.
ಶ್ರೀಸಾಮಾನ್ಯರಿಗೆ ತೊಂದರೆ ಆಗಬಾರದು. ಆ ದೃಷ್ಟಿಯಿಂದ ಉಭಯ ರಾಜ್ಯಗಳಲ್ಲಿ ಯಾರು ಈ
ಸಂಬAಧ ಬೀದಿಗಿಡಿದು ಹೋರಾಟ ಮಾಡುವುದಾಗಲಿ ಯಾವುದೇ ಕಾರಣಕ್ಕಾಗಲಿ ಪ್ರಚೋದನಾತ್ಮಕ
ಹೇಳಿಕೆಗಳನ್ನು ನೀಡಬಾರದು ಅಲ್ಲಿನ ಭಾಷಾ ಮುಖಂಡರು ಇಲ್ಲಿಗಾಗಲಿ ಇಲ್ಲಿನ ಮುಖಂಡರಾಗಲು
ಅಲ್ಲಿಗೆ ಹೋಗುವುದಾಗಲಿ ಮಾಡಬಾರದು ಎರಡು ಕಡೆ ಸೌಹಾರ್ದತೆ ಶಾಂತಿ ಕಾಪಾಡಿಕೊಳ್ಳಬೇಕು
ಎಂಬ ಕೇಂದ್ರ ಸಚಿವ ಅಮಿತ್ ಷಾ ಅವರ ಸೂತ್ರವನ್ನು ಕರ್ನಾಟಕದವರು ಪಾಲಿಸುತ್ತಾರೆ ಆದರೆ
ಮಹಾರಾಷ್ಟ್ರದವರು ಪಾಲಿಸುವುದಿಲ್ಲ ಅದನ್ನು ಉಲ್ಲಂಘಿಸುತ್ತಿದ್ದಾರೆ ಈಗಲೂ ಬೆಳಗಾವಿಯ
ಮಹಾಮೇಳಾವಕ್ಕೆ ಯಾಕೆ ಬರಬೇಕು ಅದು ಸರಿಯಲ್ಲ ಇದನ್ನು ನಿಯಂತ್ರಿಸುವ ಕೆಲಸವನ್ನು
ಕೇಂದ್ರ ಸರ್ಕಾರ ಮಾಡಬೇಕು ಎಂದು ಅವರು ಹೇಳಿದರು.
ಕರ್ನಾಟಕದಲ್ಲಿ ಗಡಿ ಭಾಗದಲ್ಲಿ ಎಲ್ಲ ರೀತಿಯ ಅಭಿವೃದ್ಧಿ ಕಾರ್ಯಗಳು ಆಗಿವೆ ಮೂಲಭೂತ
ಸೌಲಭ್ಯಗಳು ಇವೆ. ಆದರೆ ಮಹಾರಾಷ್ಟ್ರದಲ್ಲಿ ಮಾತ್ರ ಆ ರೀತಿ ಆಗಿಲ್ಲ ಎಲ್ಲ
ವಿಚಾರಗಳನ್ನು ಸರ್ಕಾರ ಕೇಂದ್ರಕ್ಕೆ ಮುಟ್ಟಿಸಬೇಕು ನಮ್ಮ ಪರವಾದ ಎಲ್ಲ ದಾಖಲೆಗಳನ್ನು
ಸಾಕ್ಷಿಗಳನ್ನು ಕೇಂದ್ರ ಸರ್ಕಾರಕ್ಕೆ ಮುಟ್ಟಿಸುವ ಕೆಲಸವನ್ನು ಕರ್ನಾಟಕ ಸರ್ಕಾರ
ಮಾಡಬೇಕು ಅದಕ್ಕಾಗಿ ಅತ್ಯುತ್ತಮ ವಕೀಲರನ್ನು ನೇಮಿಸಬೇಕು ನಮ್ಮಲ್ಲಿರುವ ಎಲ್ಲ
ದಾಖಲೆಗಳನ್ನು ಕೇಂದ್ರ ಸರ್ಕಾರಕ್ಕೆ ತಲುಪಿಸುವ ಕೆಲಸವಾಗಬೇಕು. ಕಾವೇರಿಯಿಂದ
ಗೋದಾವರಿವರೆಗೆ ಕರ್ನಾಟಕ ಇತ್ತು ಎನ್ನುವುದನ್ನು ಓದುತ್ತೇವೆ ಎಲ್ಲ ಶಿಲಾ ಶಾಸನಗಳು,
ತಾಡೋಲಿಗಳು ಎಲ್ಲ ದಾಖಲೆಗಳು ಹಳೆಗನ್ನಡದಲ್ಲಿವೆ ಮಹಾರಾಷ್ಟ್ರದಲ್ಲಿರುವ ಪಂಚ ದೈವಗಳು
ಪಂಡರಪುರದ ವಿಠಲ, ಕೊಲ್ಲಾಪುರದ ಲಕ್ಷ್ಮಿ ದೇವಿ, ಜಿಜೂರಿಯ ಖಂಡೋಬಾ, ತುಳ್ಜಾಪುರದ
ತುಳಜಾಭವಾನಿ, ಮತ್ತು ಜ್ಯೋತಿಬಾ ಎಲ್ಲ ದೇವರುಗಳು ಕರ್ನಾಟಕದಿಂದ ಹೋದವರೇ ಆಗಿದ್ದಾರೆ
ಉದಾಹರಣೆಗೆ ಕೊಲ್ಹಾಪುರದ ಮಹಾಲಕ್ಷ್ಮಿ ದೇವಸ್ಥಾನವನ್ನು ಕಟ್ಟಿಸಿದವರು ಕರ್ನಾಟಕದ

ಶಿಲಾಹಾರರು ಎನ್ನುವ ಅರಸರು ಈ ಸಂಬAಧ ಶಿಲಾಶಾಸನ ಇಂದಿಗೂ ಹಳೆಗನ್ನಡದಲ್ಲಿದೆ ಹೀಗೆ
ಕನ್ನಡಕ್ಕೆ ದೈವವೇ ಸಾಕ್ಷಿಯಾಗಿದೆ ಇದನ್ನೆಲ್ಲಾ ಸರ್ಕಾರಕ್ಕೆ ತಲುಪಿಸುವ
ಕೆಲಸವಾಗಬೇಕು, ೧೧೮ ವರ್ಷ ಪೂರೈಸಿರುವ ಚಿಕ್ಕೋಡಿ ಕೋರ್ಟು ನೂರು ವರ್ಷಗಳ ಹಿಂದೆ
ಕೋರ್ಟಿಗೆ ಹಾಜರಾಗುವಂತೆ ಕನ್ನಡದಲ್ಲಿ ಆದೇಶ ಹೊರಡಿಸಿದೆ ದಾಖಲೆ ಇದೆ ಸಂಕೇಶ್ವರದಲ್ಲಿ
ಕನ್ನಡದಲ್ಲಿ ಎಲ್ಲ ವ್ಯವಹಾರ ನಡೆಯುತ್ತಿತ್ತು ಲೆಕ್ಕಪತ್ರಗಳನ್ನು ಕನ್ನಡದಲ್ಲಿ
ಇಡಲಾಗುತ್ತಿತ್ತು. ಆದಖಲೆಗಳಿವೆ ಇಂತಹ ನೂರಾರು ದಾಖಲೆಗಳನ್ನು ಎಚ್ ಕೆ ಪಾಟೀಲರು ಗಡಿ
ಉಸ್ತುವಾರಿ ಸಚಿವರಾದಾಗ ಶ್ರೀಮಠದಿಂದ ಅವರಿಗೆ ನೀಡಲಾಗಿದೆ ಎಂದ ಸ್ವಾಮೀಜಿಯವರು
ಸೊಲ್ಲಾಪೂರಕ್ಕೂ ಮತ್ತು ಕನ್ನಡಕ್ಕೂ ಬಹಳ ಹಳೆಯ ನಂಟು ಇಂದಿಗೂ ಸಿದ್ದರಾಮೇಶ್ವರ ಸಮಾಧಿ
ಸೊಲ್ಲಾಪುರದಲ್ಲಿದೆ ತಮಗೆ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲವೆಂದು ೨೦ ವರ್ಷದ
ಹಿಂದೆಯೇ ಕರ್ನಾಟಕಕ್ಕೆ ಸೇರುವುದಾಗಿ ಜತ್ತದವರು ಮಾತನಾಡಿದ್ದು ದಾಖಲೆ ಇದೆ ಈಗಲೂ ಗಡಿ
ಭಾಗದಲ್ಲಿರುವ ಅಲ್ಲಿನ ಬಹಳಷ್ಟು ಹಳ್ಳಿಯವರು ಗ್ರಾಮದವರು ಕರ್ನಾಟಕಕ್ಕೆ ಸೇರುವುದಾಗಿ
ಹೇಳುತ್ತಿದ್ದಾರೆ ಇದನ್ನೆಲ್ಲ ದಾಖಲಿ ಸಮೇತ ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರಕ್ಕೆ
ತಲುಪಿಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದರು.
ಕರ್ನಾಟಕದಲ್ಲಿ ಕನ್ನಡ ಭಾಷೆಗೆ ವಿಶೇಷ ಶಕ್ತಿಯನ್ನ ನೀಡಲಾಗಿದೆ ಅದು ದೈವತ್ವದ ಶಕ್ತಿ
ಕನ್ನಡಕ್ಕೆ ಕನ್ನಡ ತಾಯಿಯನ್ನುತ್ತೇವೆ ಭುವನೇಶ್ವರಿ ದೇವಿಯನ್ನು ಕನ್ನಡದ ದೇವಿ ಎಂದು
ಆರಾಧಿಸುತ್ತೇವೆ. ಹೀಗಾಗಿ ಧಾರ್ಮಿಕತೆಯ ಪ್ರಾಮುಖ್ಯತೆಯನ್ನು ಕನ್ನಡಕ್ಕೆ ನೀಡಲಾಗಿದೆ
ದಾಸ ಸಾಹಿತ್ಯ ತತ್ವ ಸಾಹಿತ್ಯ ಭಕ್ತಿ ಸಾಹಿತ್ಯವನ್ನು ಮೀರಿ ಮುಂದೆ ಹೋದ ಬಸವಣ್ಣನವರು
ಬಾಷೆಗೆ ದೈವತ್ವವನ್ನು ನೀಡಿ ದೇವ ಭಾಷೆಯನ್ನಾಗಿಸಿದರು ಹೀಗೆ ಯಾವುದೇ ಒಂದು ಭಾಷೆಗೆ
ಒಂದು ಜಾತಿಗೆ ಸೀಮಿತವಾಗದ ಮೀಸಲಾದ ಧರ್ಮವನ್ನು ಬಸವಣ್ಣನವರು ಸ್ಥಾಪಿಸಿದರು. ಆ ಧರ್ಮ
ಹರಿಯುವ ನೀರಿನ ಪ್ರವಾಹವಿದ್ದಂತೆ ಯಾರು ಬೇಕಾದರೂ ಆ ನೀರನ್ನು ಪಡೆದುಕೊಳ್ಳುವಂತೆ
ಮಾಡಿದರು ಹೀಗಾಗಿ ಲಿಂಗಾಯತ ಧರ್ಮವನ್ನು ಸರ್ವರು ಅಪ್ಪಿಕೊಳ್ಳುವಂತಾಯಿತು ಬಸವಣ್ಣ ಈ
ಮೂಲಕ ಕನ್ನಡವನ್ನು ಬೆಳೆಸುವ ಕಾರ್ಯವನ್ನು ಮಾಡಿದರು, ಜೈನರು ಕನ್ನಡವನ್ನು ಕಟ್ಟಿದರು
ಲಿಂಗಾಯಿತರು ಕನ್ನಡವನ್ನು ಬೆಳೆಸಿದರು ಹೀಗೆ ಬಸವಣ್ಣನವರ ನೇರ ವಾರಸುದರಿಕೆಯನ್ನು
ಹೊಂದಿರುವ ವಿರಕ್ತ ಮಠಗಳು ಕನ್ನಡದ ಕೆಲಸವನ್ನು ಕೈಗೆತ್ತಿಕೊಂಡವು ಗದುಗಿನ ಲಿಂಗೈಕ್ಯ
ಜಗದ್ಗುರು ಸಿದ್ದಲಿಂಗ ಮಹಾಸ್ವಾಮಿಜಿಯವರ ಮಾರ್ಗದರ್ಶನದಲ್ಲಿ ತಾವು ಶಿರೋಳ ಮಠದಿಂದ
೧೯೯೭ ರಲ್ಲಿ ಚಿಂಚಣಿ ಮಠಕ್ಕೆ ಬಂದಾಗಿನಿAದಲೂ ಅವರ ಆದೇಶದಂತೆ ಕನ್ನಡದ ಕೆಲಸವನ್ನು
ಮಾಡುತ್ತಿದ್ದೇವೆ, ನಾಡಿನ ಪ್ರಖ್ಯಾತ ಸಾಹಿತಿ ಡಾ. ಚಿದಾನಂದ ಮೂರ್ತಿ ಅವರು ಸೇರಿದಂತೆ
ಹಲವಾರು ಸಾಹಿತಿಗಳು ಚಿಂಚನೀ ಮಠಕ್ಕೆ ಬಂದು ಇಲ್ಲಿಯೇ ವಾಸ್ತವ್ಯ ಹೂಡಿ ಗಡಿಭಾಗದ
ಅಧ್ಯಯನ ಮಾಡಿ ಸರ್ಕಾರಕ್ಕೆ ಸೂಕ್ತ ವರದಿಯನ್ನು ಕಾಲಕಾಲಕ್ಕೆ ನೀಡಿದ್ದಾರೆ ಸಂಪೂರ್ಣ
ಮರಾಠಿಮಯವಾಗಿದ್ದ ಈ ಭಾಗದಲ್ಲಿ ರಾಜ್ಯೋತ್ಸವ ಆಚರಣೆ ಶುರುವಾಯಿತು ಅಂದಿನಿAದ
ಇಂದಿನವರೆಗೆ ಅದು ವರ್ಷದಿಂದ ವರ್ಷಕ್ಕೆ ವಿಜೃಂಭಿಸುತ್ತದೆ ಕನ್ನಡದ ತೇರು ಸಿರಿಗನ್ನಡದ
ತೇರನ್ನು ಮಾಡುವ ಮೂಲಕ ಧಾರ್ಮಿಕತೆಯಲ್ಲಿ ಕನ್ನಡವನ್ನು ತರುವ ಕೆಲಸ ಶ್ರೀಮಠದಿಂದ
ಆಗಿದೆ ಆ ತÉÃರಿನಲ್ಲಿ ನಾಡಿನ ಹೆಸರಾಂತ ಕಲಾವಿದರು ಸಾಹಿತಿಗಳ ಹೆಸರುಗಳು ಕನ್ನಡ ತಾಯಿ
ಭುವನೇಶ್ವರಿ ದೇವಿಯ ಮೂರ್ತಿ ಇದೆ ಇಲ್ಲಿಯವರೆಗೆ ಶ್ರೀಮಠದಿಂದ ೫೦ ಕೃತಿಗಳ ಪ್ರಕಾಶನ
ಮಾಡಲಾಗಿದೆ ಈ ಐವತ್ತು ಪುಸ್ತಕಗಳು ಇಂದು ನಾಡಿನ ಜನಕ್ಕೆ ಸಾಹಿತಿಗಳಿಗೆ
ಅಧ್ಯಯನಕಾರರಿಗೆ ಆಕರ ಗ್ರಂಥಗಳಾಗಿವೆ. ಕನ್ನಡದಿಂದ ಐದು ಪುಸ್ತಕಗಳು ಮರಾಠಿ ಭಾಷೆಗೆ
ಮರಾಠಿ ಭಾಷೆಯ ಐದು ಪುಸ್ತಕಗಳು ಕನ್ನಡಕ್ಕೆ ಭಾಷಾಂತರ ಗೊಳಿಸಲಾಗಿದೆ ಇವುಗಳಲ್ಲಿ ದತ್ತ
ಸಂಪ್ರದಾಯ ನಾಥ ಸಂಪ್ರದಾಯ ಸಂತ ಕವಿತ್ರಿಯರ ಆಂತರಿಕ ಸಂಪರ್ಕ ಹೀಗೆ ಪ್ರಮುಖ ಗ್ರಂಥಗಳ
ಪ್ರಕಟಣೆ ಆಗಿದೆ ಅದಲ್ಲದೆ ಗಡಿ ವಿವಾದಕ್ಕೆ ಸಂಬAಧಪಟ್ಟ ಮಹಾಜನ ವರದಿಯ ವಿವರ ಮಹದಾಯಿ
ಮಹದಾಯಿ ವಿವಾದ ಕುರಿತ ವಿವರಗಳನ್ನು ನೀಡುವ ಕೃತಿಗಳನ್ನು ಕೂಡ ಪ್ರಕಾಶಿತಗೊಳಿಸಲಾಗಿದೆ
ಈ ಎಲ್ಲ ಪುಸ್ತಕಗಳ ಪ್ರಕಟಣೆ ನಾಡಿನ ಜನಕ್ಕೆ ತಲುಪಲಿ ಎನ್ನುವುದಾಗಿ ಹೊರತು ಯಾವುದೇ
ವ್ಯಾಪಾರಿ ವಿಚಾರ ಇಲ್ಲ ಎಂದವರು ವಿವರಿಸಿದರು.

Gadi Kannadiga

Leave a Reply