This is the title of the web page
This is the title of the web page

Please assign a menu to the primary menu location under menu

Crime NewsLocal News

ಬೆಳಗಾವಿಯಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ: ಓರ್ವನ ಕೊಲೆ


ಬೆಳಗಾವಿ: ಹಳೆಯ ದ್ವೇಷ ಹಿನ್ನೆಲೆಯಲ್ಲಿ ಎರಡು ಗುಂಪುಗಳ ಮಧ್ಯೆ ನಡೆದ ಗಲಾಟೆಯಾಗಿದ್ದು ಓರ್ವನ ಹತ್ಯೆಯಾಗಿದೆ. 7 ಮಂದಿ ಗಾಯಗೊಂಡ ಘಟನೆ ಬೆಳಗಾವಿ ತಾಲೂಕಿನ ಕರಡಿಗುದ್ದಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಹತ್ಯೆಯಾದವನನ್ನು ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸುಣಕುಪ್ಪಿ ಗ್ರಾಮದ ಮುದುಕಪ್ಪ ಅಂಗಡಿ(25) ಎಂದು ಗುರುತಿಸಲಾಗಿದೆ. ಘರ್ಷಣೆಯಲ್ಲಿ ಏಳು ಮಂದಿಗೆ ಗಾಯಗಳಾಗಿದ್ದು, ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಮಾರಕಾಸ್ತ್ರಗಳಿಂದ ಕೊಚ್ಚಿ ಮುದುಕಪ್ಪ ಅಂಗಡಿ(25) ಎಂಬಾತನನ್ನು ಹತ್ಯೆಗೈಯಲಾಗಿದೆ. ಏಳು ಜನರಿಗೆ ಗಾಯಗಳಾಗಿದ್ದು, ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.ಹಳೆ ದ್ವೇಷ ಹಿನ್ನೆಲೆಯಲ್ಲಿ ಎರಡು ಗುಂಪುಗಳ ಸದಸ್ಯರು ಪರಸ್ಪರ ಹೊಡೆದಾಡಿಕೊಂಡಿದ್ದು, ಸದ್ಯ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Gadi Kannadiga

Leave a Reply