ಗೋಕಾಕ: ಸಮೀಪದ ಅರಭಾಂವಿ ಪಟ್ಟಣದ ಶ್ರೀ ಪಾಂಡುರಂಗ ರುಕ್ಮೀಣಿ ದೇವಸ್ಥಾನದ ನೂತನ ಗೋಪೂರದ ಕಳಸಾರೋಹಣ ಹಾಗೂ ಧರ್ಮಸಭೆ ಕಾರ್ಯಕ್ರಮವು ದಿ. ೨೪ ಮತ್ತು ೨೫ ವಿಜೃಂಭಣೆಯಿಂದ ಜರುಗಲಿದೆ.
ದಿ. ೨೪ ರಂದು ಮುಂಜಾನೆ ೮ ಗಂಟೆಗೆ ಶ್ರೀ ದುರದುಂಡೀಶ್ವರ ಮಠದಿಂದ ಆನೆ ಅಂಬಾರಿ, ಶ್ರೀ ಹರಿ ಸಾಂಪ್ರಾದಾಯಕ ಭಜನಾ ಮಂಡಳಿ ಕಣಬರಗಿ ಮೇಲ್ಮಟ್ಟಿ ಹಾಗೂ ವಿವಿಧ ಗ್ರಾಮಗಳ ಸಂತರ ಹರಿಭಜನ ಆರತಿ, ಮುತ್ತೆöÊದೆಯರಿಂದ ಪೂರ್ನ ಕುಂಭ ಆರತಿ, ನೃತ್ಯ ಕುದುರೆ ಹಾಗೂ ಮಂಗಲ ವಾದ್ಯದಿಂದ ನೂತನ ಕಳಸವನ್ನು ಶ್ರೀ ಅರಭಾಂವಿ ದೇವಸ್ಥಾನಕ್ಕೆ ಭವ್ಯ ಮೆರವಣಿಗೆಯೊಂದಿಗೆ ಬರಮಾಡಿಕೊಳ್ಳುವುದು. ನಂತರ ಮಹಾಪ್ರಸಾದ ಜರುಗುವುದು.
ದಿ. ೨೫ ಬೆಳ್ಳಿಗ್ಗೆ ಶ್ರೀ ಪಾಂಡುರಂಗ-ರುಕ್ಮೀಣಿ ದೇವರಿಗೆ ರುದ್ರಾಭಿಷೇಕ, ನೂತನ ಕಳಸದ ಪೂಜಾ ವಿಧಿ ವಿಧಾನ ೮.೪೫ ಗಂಟೆಗೆ ಶುಭ ಮೂಹರ್ತದಲ್ಲಿ ಸರ್ವ ಪೂಜ್ಯರ ಹ.ಬ.ಪ. ಸಂತರ ಹಾಗೂ ಪಟ್ಟಣದ ಸರ್ವ ಸದ್ಭಕ್ತರ ಸಮ್ಮುಖದಲ್ಲಿ ಕಳಾಸರೋಹಣ. ನಂತರ ೧೦ ಗಂಟೆಗೆ ಧರ್ಮಸಭೆ, ಮಧ್ಯಾಹ್ನ ಮಹಾಪ್ರಸಾದ ಜರುಗಲಿದ್ದು ಈ ಎಲ್ಲ ಕಾರ್ಯಕ್ರಮಗಳಲ್ಲಿ ದುರದುಂಡೀಶ್ವರ ಸಿದ್ದಸಂಸ್ಥಾನ ಪುಣ್ಯಾರಣ್ಯಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು, ಕೊಪ್ಪಳ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಉಪ್ಪಿನ ಬೆಟಗೇರಿಯ ಮೂರು ಸಾವಿರ ಮಠದ ಶ್ರೀ ವಿರುಪಾಕ್ಷಲಿಂಗ ಮಹಾಸ್ವಾಮಿಗಳು, ಅರಭಾಂವಿ-ಚಮಕೇರಿ ಶ್ರೀ ಸದಾಶಿವ ಬಬಲಾದಿ ಮಠದ ಶ್ರೀ ಶಿವಯ್ಯ ಮಹಾಸ್ವಾಮಿಗಳು, ಪಂಡರಪೂರದ ಗೋಪಾಲ ಅಣ್ಣಾ ತುಕಾರಾಮ ವಾಸ್ಕರ ಮಹಾರಾಜರು ದಿವ್ಯ ಸಾನಿಧ್ಯ ವಹಿಸುವರು.
ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆ ವಹಿಸುವರು, ಬೆಳಗಾವಿ ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಶ್ರೀ ಪಾಂಡುರಂಗ ದೇವಸ್ಥಾನದ ವ್ಯವಸ್ಥಾಪಕರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ಶ್ರೀ ಪಾಂಡುರಂಗ ರುಕ್ಮೀಣಿ ದೇವಸ್ಥಾನದ ನೂತನ ಗೋಪೂರದ ಕಳಸಾರೋಹಣ
ಶ್ರೀ ಪಾಂಡುರಂಗ ರುಕ್ಮೀಣಿ ದೇವಸ್ಥಾನದ ನೂತನ ಗೋಪೂರದ ಕಳಸಾರೋಹಣ
Suresh21/08/2023
posted on