This is the title of the web page
This is the title of the web page

Please assign a menu to the primary menu location under menu

State

ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ


ಗದಗ ಸೆಪ್ಟೆಂಬರ್ ೨೦: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀನೋಪಾಯ ಇಲಾಖೆಯ ಪ್ರಾಯೋಜಿಕತ್ವದಲ್ಲಿ, ಕರ್ನಾಟಕ ಉದ್ಯಮಶೀಲತಾಬಿವೃದ್ಧಿ ಕೇಂದ್ರ (ಸಿಡಾಕ್), ಧಾರವಾಡ ಇವರು ಸ್ವಂತ ಉದ್ಯೋಗವನ್ನು ಕೈಗೊಳ್ಳಲು ಇಚ್ಚಿಸಿರುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಆಸಕ್ತ ಮಹಿಳಾ ಅಭ್ಯರ್ಥಿಗಳಿಗೆ ೧೦ ದಿನದ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮವು ರವಿವಾರದಂದು ನಗರದ ಮಹೇಶ್ವರಿ ವಿವಿದೊದ್ದೇಶಗಳ ಮಹಿಳಾ ಮಂಡಳ ದಲ್ಲಿ ಮುಕ್ತಾಯಗೊಂಡಿತು.
ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಯಶಸ್ವಿ ಮಹಿಳಾ ಉದ್ಯಮಿಯಾದ ಶ್ರೀಮತಿ ಶಕುಂತಲಾ ಮುಳಗುಂದ ಅವರು ಮಾತನಾಡಿ ೩ ವರ್ಷಗಳ ಹಿಂದೆ ತಾವು ಸಿಡಾಕ್ ವತಿಯಿಂದ ೬ ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ ಪಡೆದಿದ್ದನ್ನು ಶಿಭಿರಾರ್ಥಿಗಳಿಗೆ ತಿಳಿಸಿದರು ಮತ್ತು ತಮ್ಮ ಉದ್ಯಮದ ಅನುಭವವನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹೇಶ್ವರಿ ವಿವಿದೊದ್ದೇಶಗಳ ಮಹಿಳಾ ಮಂಡಳದ ಮುಖ್ಯಸ್ಥರಾದ ಬಸಯ್ಯ. ಹಿರೇಮಠ ವಹಿಸಿದ್ದರು.
ಸಿಡಾಕ್‌ನ ತರಬೇತುದಾರರಾದ ಮಂಜುನಾಥ ಮುಳಗುಂದ ಅವರು ಕಾರ್ಯಕ್ರಮ ನಿರೂಪಿಸಿದರು. ವಿಜಯಲಕ್ಷಿ÷್ಮ. ನೆಲ್ಲೂರ ವಂಧಿಸಿದರು. ಜಿಲ್ಲೆಯ ಒಟ್ಟು ೩೦ ಆಸಕ್ತ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಮಹಿಳೆಯರು ತರಬೇತಿಯಲ್ಲಿ ಹಾಜರಿದ್ದರು.

 


Gadi Kannadiga

Leave a Reply