This is the title of the web page
This is the title of the web page

Please assign a menu to the primary menu location under menu

Local NewsState

ಎಸ್​ಸಿ-ಎಸ್​ಟಿ ಕುಟುಂಬಗಳಿಗೆ 75 ಯೂನಿಟ್‌ ಉಚಿತ ವಿದ್ಯುತ್ ಯೋಜನೆಗೆ ಸಿಎಂ ಅನುಮೋದನೆ


ಬೆಂಗಳೂರು: ದಾವೋಸ್‌ ಪ್ರವಾಸದಿಂದ ಮರಳುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಸ್​ಸಿ-ಎಸ್​ಟಿ ಕುಟುಂಬಗಳಿಗೆ 75 ಯೂನಿಟ್‌ ವರೆಗೆ ಉಚಿತವಾಗಿ ವಿದ್ಯುತ್ ನೀಡುವ ಯೋಜನೆಗೆ ಅನುಮೋದನೆ ನೀಡಿದ್ದಾರೆ.

ಮೇ. 1ರಿಂದ ಅನ್ವಯ ಆಗುವಂತೆ ಈ ಆದೇಶ ಜಾರಿಗೆ ಬಂದಿದ್ದು, ನಗರ ಪ್ರದೇಶಕ್ಕೂ ಈ ಯೋಜನೆಯನ್ನು ವಿಸ್ತರಿಸಿ ರಾಜ್ಯ ರ್ಕಾರದಿಂದ ಆದೇಶ ಹೊರಡಿಸಿದೆ.
ಈ ಹಿಂದೆ ಭಾಗ್ಯಜ್ಯೋತಿ ಮತ್ತು ಕುಟೀರಜ್ಯೋತಿ ಯೋಜನೆಯಡಿ ನೀಡಲಾಗುತ್ತಿದ್ದ 40 ಯೂನಿಟ್‌ ಉಚಿತ ವಿದ್ಯುತ್‌ ಯೋಜನೆಯನ್ನು 75 ಯೂನಿಟ್​​​​​ಗೆ ಹೆಚ್ಚಿಸಲಾಗಿದೆ.

ಅಷ್ಟೇ ಅಲ್ಲದೆ ಗ್ರಾಮೀಣ ಪ್ರದೇಶಗಳಿಗೆ ಸೀಮಿತವಾಗಿದ್ದ ಈ ಯೋಜನೆಯನ್ನು ನಗರ ಪ್ರದೇಶಕ್ಕೂ ವಿಸ್ತರಿಸಲಾಗಿದೆ

 


Gadi Kannadiga

Leave a Reply