ಬೆಳಗಾವಿ, ಜ.೨೪ : ಬೆಳಗಾವಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಕಾರ ಸಂಘಗಳು/ಸೌಹಾರ್ದ ಸಹಕಾರಿಗಳು ಕಡ್ಡಾಯವಾಗಿ ಲೆಕ್ಕಪರಿಶೋಧನೆಯನ್ನು ನಿಗದಿತ ಅವಧಿಯೊಳಗೆ ಪೂರೈಸಬೇಕಾಗಿರುತ್ತದೆ.
ಕೆಲವು ಸಂಘಗಳು ಲೆಕ್ಕಪರಿಶೋಧಕರನ್ನು ಆಯ್ಕೆಮಾಡಿಕೊಳ್ಳದಿರುವುದು ಕಂಡು ಬಂದಿರುತ್ತದೆ. ಈ ಪ್ರಯುಕ್ತ ನಿರ್ದೇಶಕರು, ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ, ಕರ್ನಾಟಕ ರಾಜ್ಯ, ಬೆಂಗಳೂರು ರವರು ಸಹಕಾರ ಸಂಘಗಳ ಕಾಯ್ದೆ ೬೩(೨) ರಂತೆ ಮತ್ತು ಸೌಹಾರ್ದ ಸಹಕಾರ ಸಂಘಗಳ ಕಾಯ್ದೆ ೩೩(೨) ರಂತೆ ವಂಟನೆ ಆದೇಶ ನೀಡಿರುತ್ತಾರೆ.
ಈ ಪ್ರಯುಕ್ತ ನಿಯುಕ್ತಿಗೊಂಡ ಲೆಕ್ಕಪರಿಶೋಧಕರಿಗೆ ಸಹಕಾರ ನೀಡಿ ಲೆಕ್ಕಪರಿಶೋಧನೆ ಪೂರೈಸಲು ವಿನಂತಿಸಲಾಗಿದೆ. ಲೆಕ್ಕಪರಿಶೋಧನೆ ಬಾಕಿ ಉಳಿದಲ್ಲಿ ಸಹಕಾರ ಕಾಯ್ದೆ ಅನ್ವಯ ಅಗತ್ಯ ಕ್ರಮವಿಟ್ಟು ನೊಂದಣಿ ರದ್ದತಿಗೆ ಕ್ರಮಕೈಗೊಳ್ಳಲಾಗುವುದು ಎಂದು ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ಸಹಕಾರ ಸಂಘಗಳು/ಸೌಹಾರ್ದ ಸಹಕಾರಿಗಳಿಗೆ ಲೆಕ್ಕಪರಿಶೋಧನೆ ಪೂರೈಸಲು ಆದೇಶ