This is the title of the web page
This is the title of the web page

Please assign a menu to the primary menu location under menu

Local News

ಹಾಸ್ಯಕೂಟದವರಿಂದ ಹಾಸ್ಯ ಸಂಜೆ


ಬೆಳಗಾವಿ ೯- ಹಾಸ್ಯಕೂಟ ಹಾಗೂ ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ ಇದೇ ದಿ. ೧೧ ಶನಿವಾರದಂದು ಸಾಯಂಕಾಲ ೪-೩೦ ಕ್ಕೆ ಕನ್ನಡ ಸಾಹಿತ್ಯ ಭವನ ಸಭಾಭವನದಲ್ಲಿ ‘ಹಾಸ್ಯ ಸಂಜೆ’ಯನ್ನು ಹಮ್ಮಿಕೊಂಡಿದ್ದಾರೆ.

ಅಧ್ಯಕ್ಷತೆಯನ್ನು ಕವಿ ಎಂ. ಎಸ್. ಇಂಚಲ ಅವರು ವಹಿಸಲಿದ್ದಾರೆ. ಪ್ರಾಯೋಜಕತ್ವವನ್ನು ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ ವಿಶ್ರಾಂತ ಉಪನಿರ್ದೇಶಕರಾದ ಆರ್. ಬಿ. ಬನಶಂಕರಿಯವರು ವಹಿಸಿಕೊಂಡಿದ್ದು ಗುಂಡೇನಟ್ಟಿ ಮಧುಕರ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಅರವಿಂದ ಹುನಗುಂದ ನಿರೂಪಿಸಲಿದ್ದು ಆರ್. ಬಿ. ಕಟ್ಟಿ ಹಾಗೂ ಜಿ. ಎಸ್. ಸೋನಾರ ಉಪಸ್ಥಿತರಿರುತ್ತಾರೆ. ಹೊಸಮುಖಗಳಾದ ತಾನಾಜಿ, ರಾಜು ಹಿರೇಮಠ ಹಾಗೂ ವಿಜಯಕುಮಾರ ಹಣ್ಣಿಕೇರಿ ತಮ್ಮ ನಗೆಮಾತುಗಳಿಂದ ರಂಜಿಸಲಿದ್ದಾರೆ.


Gadi Kannadiga

Leave a Reply