ಬೆಳಗಾವಿ ೧೨- ನಗರದ ಹಾಸ್ಯಕೂಟ ಮತ್ತು ಸಾಹಿತ್ಯ ಭವನ ವಿಶ್ವಸ್ತ ಮಂಡಲಿಯವರು ಇದೇ ದಿ. ೧೪ ಶನಿವಾರ ಸಾಯಂಕಾಲ ೪-೩೦ ಕ್ಕೆ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ‘ವಿದೇಶ ವಿನೋದ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಕವಿಗಳಾದ ಡಾ. ಜಿನದತ್ತ ದೇಸಾಯಿಯವರು ವಹಿಸಲಿದ್ದಾರೆ. ಲೇಖಕರಾದ ಪಿ. ಬಿ .ಸ್ವಾಮಿಯವರು ಚಾಲನೆ ನೀಡಲಿದ್ದು ಪತ್ರಕರ್ತರಾದ ಎಲ್. ಎಸ್. ಶಾಸ್ತ್ರಿ, ಖ್ಯಾತ ವಾಗ್ಮಿಗಳಾದ ಡಾ. ಬಸವರಾಜ ಜಗಜಂಪಿ, ನಗೆಮಾತುಗಾರ ಪ್ರೊ. ಜಿ. ಕೆ. ಕುಲಕರ್ಣಿಯವರು ವಿದೇಶದಲ್ಲಿ ನಡೆದಿರುವ ವಿನೋದ ಪ್ರಸಂಗಗಳನ್ನು ಹಂಚಿಕೊಳ್ಳಲಿದ್ದಾರೆ. ಅತಿಥಿಗಳಾಗಿ ಶ್ರೀಮತಿ ಸುನಂದಾ ಎಮ್ಮಿ ಆಗಮಿಸಲಿದ್ದಾರೆ. ಗುಂಡೇನಟ್ಟಿ ಮಧುಕರ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಜಿ. ಎಸ್. ಸೋನಾರ ನಿರೂಪಿಸಲಿದ್ದಾರೆ.
Gadi Kannadiga > Local News > ‘ವಿದೇಶ ವಿನೋದ’ ಹಾಸ್ಯ ಕಾರ್ಯಕ್ರಮ