This is the title of the web page
This is the title of the web page

Please assign a menu to the primary menu location under menu

Local News

ಹಿಡಕಲ್ ಡ್ಯಾಮಿನಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿಗಳ ಪುಣ್ಯಸ್ಮರಣೋತ್ಸವ


ಯಮಕನಮರಡಿ:- ಸಮೀಪದ ಹಿಡಕಲ್ ಡ್ಯಾಮಿನ ಬಸ್ £ಲ್ದಾಣದ ಬಳಿ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಗಳವರ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ನಡೆಯಿತು. ಬೆಳಗಾವಿ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕಿನ ಅಧ್ಯಕ್ಷ ರಮೇಶ ಕತ್ತಿ ಶ್ರೀ ಸಿದ್ದೇಶ್ವರ ಸ್ವಾಮಿಗಳ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮಿಗಳು ಅಧ್ಯಾತ್ಮವನ್ನು ಆಳವಾಗಿ ಅಧ್ಯಯನ ಮಾಡಿ ಅಧ್ಯಾತ್ಮಕದ £ಜವಾದ ಸಂದೇಶವನ್ನು ಇಡೀ ಜಗತ್ತಿಗೆ ತಿಳಿಸಿಕೊಟ್ಟಿದ್ದಾರೆ. ಅಧ್ಯಾತ್ಮಿಕ ಪ್ರವಚನಗಳ ಮೂಲಕ ಮನುಕುಲದ ಉದ್ದಾರಕ್ಕಾಗಿ ಶ್ರಮಿಸಿದ ಶ್ರೀಗಳ ಅವರ ಸೇವೆಯು ಅನನ್ಯವಾದದು ಎಂದು ಹೇಳಿದರು.
ಬೆಳಗಾವಿ ಜಿಲ್ಲಾ ಹಿರಿಯ ರಾಜಕಾರಣಿ ಬಸವರಾಜ ಮಟಗಾರ ಮಾತನಾಡಿ ನಾಡಿನಾದ್ಯಂತ ಅಪಾರ ಭಕ್ತ ಸಮೂಹ ಹೊಂದಿದ್ದ ಪೂಜ್ಯರ ಅಗಲಿಕೆಯಿಂದ ನಮ್ಮ ನಾಡಿಗೆ ತುಂಬಲಾರದ ಹಾ£ಯಾಗಿದೆ ಎಂದು ಹೇಳಿದರು. ಹಿಡಕಲ್ ಡ್ಯಾಮ ವಿವಿಧ ಶಾಲಾ ಮಕ್ಕಳು ಶಿಕ್ಷಕರು ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳು ಗ್ರಾಮಸ್ಥರು ಪಾಲ್ಗೊಂಡು ಶ್ರೀಗಳವರಿಗೆ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎನ್.ಎಸ್. ಆಜರೇಕರ ಆರ್. ಕರುಣಾಕರಶೆಟ್ಟಿ, ಎಲ್.ಎಸ್. ತಳವಾರ, ಎಮ್.ಕೆ. ಮುಲ್ಲಾ, ಆಜಾದ ಮುಲ್ಲಾ, ಹೊಸಪೇಟ ಗ್ರಾ.ಪಂ. ಸದಸ್ಯರಾದ ಎನ್.ಆರ್. ಖನಗಾಂವಿ, ಸದಾನಂದ ಮಾಳ್ಯಾಗೋಳ, ಸುಮಿತ್ರಾ ಬಾಗೇವಾಡಿ, ಸುವರ್ಣಾ ಮಗದುಮ್ಮ, ಮುನ್ನಾ ಗೋಕಾಕ, ಅರ್ಜುನ ನೇಸರಗಿ, ಇರ್ಷಾದ ಕಿಲ್ಲೆದಾರ, ಭಾರತಿ ಬೆಣ್ಣಿ, ಮತ್ತು ಗಣ್ಯರಾದ ಚಂದ್ರಶೇಖರ ಗಣಾಚಾರಿ, ಅಜೀತ ಕಾಂಬಳೆ, ಸುರೇಶ ಪವಾರ, ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕ ಜೆ.ಎಸ್. ಕರೆನ್ನವರ ಸ್ವಾಗತಿಸಿ ಕಾರ್ಯಕ್ರಮ £ರೂಪಿಸಿದರು.


Gadi Kannadiga

Leave a Reply