ಯರಗಟ್ಟಿ: ಅಮಟೂರ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ ಸಿಂಹವೊಂದು ಬ್ರಿಟೀಷರ್ ಬೇಟೆಯಾಡುತ್ತಿತ್ತು. ಕಿತ್ತೂರ ಸಂಸ್ಥಾನದ ಮೇಲೆ ಆಕ್ರಮಣ ಮಾಡಿದ ಬ್ರಿಟೀಷ್ ಅಧಿಕಾರಿ ಥ್ಯಾಕರೆಯ ರಕ್ತದ ರುಚಿ ನೋಡುವ ಆ ಸಿಂಹ ಬೇರೆಯಾರು ಅಲ್ಲ ವೀರಕೇಸರಿ ಅಮಟೂರು ಬಾಳಪ್ಪ. ಬ್ರಿಟೀಷರ ಎದೆಗೆ ನೇರವಾಗಿ ಗುಂಡುಕ್ಕಿ ಕಿತ್ತೂರಿನಲ್ಲಿ ನಂದಿ ಧ್ವಜ ಹಾರಿಸಿದ ವೀರಯೋಧನ ಸಾಹಸ ಮೆಚ್ಚಬೇಕು. ಅಂತಹ ಮಹಾನ್ ವ್ಯಕ್ತಿ ಪಡೆದ ನಾವೇ ಧನ್ಯ ಎಂದು ಕಾಂಗ್ರೇಸ್ ಮುಖಂಡ ವಿಶ್ವಾಸ್ ವೈದ್ಯ ಹೇಳಿದರು.
ಅವರು ಸಮೀಪದ ಹಣಬರಕಡಬಿ ಗ್ರಾಮದಲ್ಲಿ ವೀರಕೇಸರಿ ಅಮಟೂರು ಬಾಳಪ್ಪನವರ ಪುಣ್ಯಸ್ಮರಣೋತ್ಸವ ಹಾಗೂ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿ ಇಂತಹ ಒಂದು ಪುಟ್ಟ ಗ್ರಾಮದಲ್ಲಿ ಅಮಟೂರು ಬಾಳಪ್ಪನವರ ಹೆಸರಲ್ಲಿ ಟ್ರಸ್ಟ್ ಮಾಡಿ ಅವರ ಇತಿಹಾಸ ಇನ್ನು ಜೀವಂತ ಉಳಿಯುವಂತೆ ಮಾಡಿದ್ದಕ್ಕೆ ಗ್ರಾಮದ ಒಗ್ಗಟ್ಟು ಜಾತಿ ಮನೋಭಾವ ಇಲ್ಲದೆ ಎಲ್ಲ ಜನಾಂಗದವರು ಸೇರಿದ್ದಕ್ಕೆ ನನಗೆ ಸಂತೋಷ ತಂದಿದೆ ಎಂದರು.
ಸಂದರ್ಭದಲ್ಲಿ ಜ್ಯೋತೆಪ್ಪ ಪೂಜೇರಿ, ಕೃಷ್ಣಕುಮಾರ ಅಜ್ಜನವರು, ಎಮ್ ನಾಗರಾಜ ಯಾದವ್ ವಿಧಾನ ಪರಿಷತ್ ಸದಸ್ಯರು ಬೆಂಗಳೂರು, ಎ ದಿಲಿಪ್ ಕುಮಾರ ಯಾದವ್ ಖಾನಾಪೂರ ವಿಧಾನಸಭಾ ಕ್ಷೇತ್ರದ ಮುಖಂಡರು, ಅರವಿಂದ ತೆನಗಿ, ಉಮೇಶ ಯಾದವ್, ಸೂರ್ಯಕುಮಾರ ಯಾದವ್, ಅಶೋಕ ಪಾಟೀಲ, ರಂಗನಾಥ ಮೂಲಿಮನಿ, ಬಿ ಎಮ್ ಬಿಸನಾಳ, ಬಸವರಾಜ ಹಮ್ಮನ್ನವರ, ಲಕ್ಷö್ಮಣ ಕಡಬಿ, ಬಸವರಾಜ ಮಾಳಕ್ಕನವರ, ಜ್ಯೋತೆಪ್ಪ ಗುದನಟ್ಟಿ, ತಿಪ್ಪಣ್ಣ ಉದಗಟ್ಟಿ, ಹಿರಿಯರು ಹಾಗೂ ಕಾರ್ಯಕರ್ತರು ಉಪಸ್ಥೀತರಿದ್ದರು.
Gadi Kannadiga > Local News > ವೀರಕೇಸರಿ ಅಮಟೂರು ಬಾಳಪ್ಪನವರ ಪುಣ್ಯಸ್ಮರಣೋತ್ಸವ