This is the title of the web page
This is the title of the web page

Please assign a menu to the primary menu location under menu

Local News

ವಾಣಿಜ್ಯ ಶಾಸ್ತ್ರ ಮತ್ತುವ್ಯವಸ್ಥಾಪನ ಶಾಸ್ತ್ರ ಒಂದೇ ನಾಣ್ಯದ ಎರಡು ಮುಖಗಳು: ಪ್ರೊ. ಎಂ. ರಾಮಚಂದ್ರಗೌಡ


ಬೆಳಗಾವಿ: ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವಾಣಿಜ್ಯ ಹಾಗೂ ವ್ಯವಸ್ಥಾಪನ ಅಧ್ಯಾಪಕರ ಸಂಘ ಮತ್ತು ಸ್ನಾತಕೋತರ ವಾಣಿಜ್ಯ ವಿಭಾಗ ಆರ್ ಸಿ ಯು ಇವರ ಸಹಯೋಗದಲ್ಲಿ ಒಂದು ದಿನದ ರಾಷ್ಟ್ರಮಟ್ಟದ ವಿಚಾರ ಸಂಕೀರ್ಣವನ್ನು
ಬೆಳಗಾವಿಯ ನೆಹರು ನಗರದ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಯಿತು. ಪ್ರೊ. ಎಂ. ರಾಮಚಂದ್ರಗೌಡ ಕುಲಪತಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಇವರು ವಾಣಿಜ್ಯಶಾಸ್ತ್ರ ಹಾಗೂ ವ್ಯವಸ್ಥಾಪನ ವಿಷಯಗಳು ಒಂದೇ ನಾಣ್ಯದ ಎರಡು ಮುಖಗಳು ಇವು ತ್ವರಿತವಾಗಿ ಬದಲಾವಣೆ ಹೊಂದುತ್ತಿದ್ದು ಅದರ ಜೊತೆಗೆ ನಮ್ಮ ಅಧ್ಯಾಪಕರು ಸಹ ಬದಲಾವಣೆಗೆ ಹೊಂದಿಕೊಳ್ಳಬೇಕು ಎಂದು ವಿಚಾರ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದರು.
ಈ ಕಾರ್ಯಕ್ರಮದ ದಿಕ್ಸೂಚಿ ಭಾಷಣಕಾರರಾಗಿ ಕರ್ನಾಟಕ ವಿಶ್ವವಿದ್ಯಾಲಯದ ಹಿರಿಯ ಉಪನ್ಯಾಸಕರಾದ ಪ್ರೊ. ಆರ್ ಎಲ್ ಹೈದರಾಬಾದ್ ಇಂದಿನ ವಾಣಿಜ್ಯ ವಿಷಯದಲ್ಲಿ ಪ್ರಾಧ್ಯಾಪಕರು ಹೆಚ್ಚು ಹೆಚ್ಚು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.
ಅಧ್ಯಕ್ಷತೆಯನ್ನು ಪ್ರೊ. ಎಚ್ ವೈ ಕಾಂಬ್ಳೆ ವಹಿಸಿದ್ದರು. ವಿಚಾರ ಸಂಕೀರ್ಣದ ಮೊದಲನೇ ಅವಧಿಯ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಎಸ್ ಎಸ್ ಹೂಗಾರ್ ನಿವೃತ್ತ ಪ್ರಾಧ್ಯಾಪಕರು ಇವರು ಪ್ರಸ್ತುತ ವಾಣಿಜ್ಯಶಾಸ್ತ್ರ ವಿಭಾಗದ ವಿಷಯಗಳ ಬಗ್ಗೆ ವಿವರವಾಗಿ ತಮ್ಮ ವಿಚಾರವನ್ನು ತಿಳಿಸಿದರು ಅಧ್ಯಕ್ಷತೆಯನ್ನು ಪ್ರೊ. ಬಿ ಎಸ್ ನಾವಿ ಕುಲಸಚಿವರು ಅಕ್ಕಮಹಾದೇವಿ ವಿಶ್ವವಿದ್ಯಾಲಯ ವಿಜಯಪುರ ವಹಿಸಿಕೊಂಡಿದ್ದರು.
ಎರಡನೇ ಅವಧಿಯ ವಿಚಾರ ಸಂಕೀರ್ಣದ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಸೂರ್ಯ ಕುಮಾರ್ ಕನೈ ಇವರು ಪ್ರಸ್ತುತ ವ್ಯವಸ್ಥಾಪನ ವಿಷಯಗಳ ಮೇಲೆ ಬೆಳಕು ಚೆಲ್ಲಿದರು ಈ ಅವಧಿಗೆ ಅಧ್ಯಕ್ಷ ಸ್ಥಾನವನ್ನು ಡಾ. ಆರ್ ಎಂ ಪಾಟೀಲ್ ವಹಿಸಿದ್ದರು.
ಈ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಪ್ರೊ.ಶಿವಾನಂದ ಗೊರನಾಳೆ, ಕುಲಸಚಿವರು ಮೌಲ್ಯಮಾಪನ ಆರ್ ಸಿ ಯು ಬೆಳಗಾವಿ ಇವರು ಪ್ರಸ್ತುತ ವಿದ್ಯುನ್ಮಾನ ವಾಣಿಜ್ಯ ಮೇಲೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು
ಅಧ್ಯಕ್ಷತೆಯನ್ನು ಪ್ರೊ. ಎಸ್ ಬಿ ಆಕಾಶ ವಿತ್ತ ಅಧಿಕಾರಿಗಳು ಆರ್ ಸಿ ಯು ಬೆಳಗಾವಿ ವಹಿಸಿದ್ದರು. ಇದೇ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಿಂದ ಸುಮಾರು ೪೦ಕ್ಕೂ ಹೆಚ್ಚು ಪ್ರಾಧ್ಯಾಪಕರು ತಮ್ಮ ಪ್ರಬಂಧವನ್ನು ಮಂಡಿಸಿದರು.
ಆರ್ ಸಿ ಯು ಸಿ ಎಮ್ ಟಿ ಏ ಸಂಘದ ಅಧ್ಯಕ್ಷರಾದ ಡಾ. ಚಂದ್ರಶೇಖರ್ ಗುಡಸಿ, ಪ್ರೊ. ಆರ್ ವಿ ಜಲವಾದಿ ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು ವಿವಿಧ ವಿದ್ಯಾಲಯದ ಸುಮಾರು ಎರಡು ನೂರಕ್ಕೆ ಹೆಚ್ಚು ಅಧ್ಯಾಪಕರು ಭಾಗವಹಿಸಿದ್ದರು


Leave a Reply