This is the title of the web page
This is the title of the web page

Please assign a menu to the primary menu location under menu

State

ಮಾನವ ಹಕ್ಕುಗಳ ಆಯೋಗದ ಸಮಿತಿಯಿಂದ ದೂರು


ಕುಷ್ಟಗಿ: ಬೆಂಗಳೂರಿನಲ್ಲಿ ಕೃಷಿ ಇಲಾಖೆಯ ಆಯುಕ್ತರಾದ ಶ್ರೀ ಬಿ. ಶರತ್ ರವರಿಗೆ ಮಾನವ ಹಕ್ಕುಗಳ ಆಯೋಗದ ಸಮಿತಿ ವತಿಯಿಂದ ದೂರು ನೀಡಲಾಯಿತು.

ಮಾನವ ಹಕ್ಕುಗಳ ಕಾನೂನು ಮತ್ತು ಸಾಮಾಜಿಕ ಕಲ್ಯಾಣಾಭಿವೃದ್ಧಿ (ರಿ).ವತಿಯಿಂದ ನೀಡಲಾಯಿತು.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಕೃಷಿ ಇಲಾಖೆಯಲ್ಲಿ ಕೃಷಿ ಹೊಂಡ ಹಾಗೂ ಬದು ನಿರ್ಮಾಣಗಳ ಕರ್ಮಕಾಂಡದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿ ಅದರ ಬಗ್ಗೆ ವಿವರವಾಗಿ ಚರ್ಚೆ ಮಾಡಲಾಯಿತು. ನಂತರ ಕೃಷಿ ಇಲಾಖೆಯ ಆಯುಕ್ತರು ಮಾತನಾಡಿ, ಯಾರೇ ತಪ್ಪು ಮಾಡಿದರೂ ಕೂಡಾ ಅದು ತಪ್ಪೆ, ಅದನ್ನು ತನಿಖೆ ಮಾಡಿಸಿ ಕ್ರಮವನ್ನು ತೆಗೆದುಕೊಳ್ಳುವ ಭರವಸೆಯನ್ನು ನೀಡಿದರು. ಇಲ್ಲವಾದಲ್ಲಿ ನಾವುಗಳ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ತಿಳಿಸಲಾಯಿತು.

ಈ ಸಂದರ್ಭದಲ್ಲಿ ನಾಗರಾಜ ಭೋವಿ ತಾಲ್ಲೂಕು ಅಧ್ಯಕ್ಷರು ಕುಷ್ಟಗಿ, ಶಿವಕುಮಾರ್ ಉಪಾಧ್ಯಕ್ಷರು, ಶ್ರೀಮತಿ ಸುಮಂಗಲಾ ದಕ್ಷಿಣ ಕರ್ನಾಟಕ ಭೋವಿ ಯುವ ವೇದಿಕೆ ಅಧ್ಯಕ್ಷರು.ಸೇರಿದಂತೆ ಇತರರು ಉಪಸ್ಥಿತರಿದ್ದರು.


Gadi Kannadiga

Leave a Reply