This is the title of the web page
This is the title of the web page

Please assign a menu to the primary menu location under menu

Local News

ಸಮಗ್ರ ಕ್ಷೇತ್ರದ ಅಭಿವೃದ್ಧಿ ನನ್ನ ಧ್ಯೇಯ: ಲಕ್ಷಿ÷್ಮÃ ಹೆಬ್ಬಾಳಕರ್


ಬೆಳಗಾವಿ: ಗ್ರಾಮೀಣ ಭಾಗದಲ್ಲಿ ಶಾಶ್ವತ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತ ಬಂದಿದ್ದು ಕಳೆದ ನಾಲ್ಕೂವರೆ ವರ್ಷದಲ್ಲಿ ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದ ಪ್ರತಿಯೊಂದು ಭಾಗಕ್ಕೆ ಅಭಿವೃದ್ಧಿ ಕಾಮಗಾರಿ ತರಲಾಗಿದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷಿ÷್ಮÃ ಹೆಬ್ಬಾಳಕರ್ ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಾಳೇಕುಂದ್ರಿ ಕೆ ಎಚ್ ಗ್ರಾಮದ ರಸ್ತೆ ಹಾಗೂ ಚರಂಡಿಗಳ ನಿರ್ಮಾಣಕ್ಕಾಗಿ ಒಂದು ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿದ ಶಾಸಕಿ ಬುಧವಾರ ಗ್ರಾಮದ ಮುಖ್ಯ ರಸ್ತೆ ಹಾಗೂ ಚರಂಡಿ ನಿರ್ಮಾಣದ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಕ್ಷೇತ್ರದಲ್ಲಿ ಈ ಹಿಂದೆ ಎಂದೂ ಈ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಗಳು ಆಗಿರಲಿಲ್ಲ. ನಾನು ಶಾಸಕಿಯಾಗಿ ಆಯ್ಕೆಗೊಂಡ ಬಳಿಕ ಅಭಿವೃದ್ಧಿಗಾಗಿ ನಿರಂತರ ಶ್ರಮ ವಹಿಸುತ್ತ ಬಂದಿದ್ದೇನೆ. ಮೂಲಸೌಕರ್ಯಗಳ ಅಭಿವೃದ್ಧಿಯಿಂದ ಗ್ರಾಮೀಣ ಜನರ ಜೀವನ ಮಟ್ಟದಲ್ಲಿ ಸುಧಾರಣೆ ಕಾಣುತ್ತದೆ ಎಂಬ ಆಶಯವಿದೆ. ಸಮಗ್ರ ಕ್ಷೇತ್ರವೇ ನನ್ನ ದೃಷ್ಟಿಯಾಗಿದ್ದು, ಯಾವುದೇ ಭಾಗ ಹಿಂದುಳಿಯಬಾರದೆನ್ನುವುದು ನನ್ನ ಧ್ಯೇಯ ಎಂದು ಹೇಳಿದರು.
ಇದಾದ ನಂತರ ಗ್ರಾಮದಲ್ಲಿ ಆಯೋಜಿಸಲಾಗಿದ್ದು ಅರಿಷಿಣ – ಕುಂಕುಮ ಕಾರ್ಯಕ್ರಮದಲ್ಲೂ ಲಕ್ಷಿ÷್ಮÃ ಹೆಬ್ಬಾಳಕರ್ ಭಾಗಿಯಾಗಿ, ಕ್ಷೇತ್ರದ ಮಹಿಳೆಯರು ತಮ್ಮ ಮೇಲೆ ತೋರುತ್ತಿರುವ ಅಪಾರ ಪ್ರೀತಿಗೆ ತಲೆ ಬಾಗುವುದಾಗಿ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಯಾರು ನಿಜವಾಗಿ ಕೆಲಸ ಮಾಡುತ್ತಾರೆ, ಯಾರು ಜನರೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ ಅಂತವರನ್ನು ಬೆಂಬಲಿಸಬೇಕು. ಯಾವಾಗಾದರೊಮ್ಮೆ ಬಂದು ಜನರನ್ನು ಮರುಳು ಮಾಡುವವರನ್ನು ನಂಬಬಾರದು. ಅವರು ಜನರನ್ನು ದಾರಿ ತಪ್ಪಿಸಿ ಮೋಸಮಾಡುತ್ತಾರೆ. ಅಂತವರಿಗೆ ಕ್ಷೇತ್ರದ ಅಭಿವೃದ್ಧಿ ಬೇಕಾಗಿಲ್ಲ. ಹಾಗಾಗಿ ಕ್ಷೇತ್ರದ ಜನರು ಜಾಗ್ರತರಾಗಿದ್ದು, ಮುಂದಿನ ದಿನಗಳಲ್ಲಿ ಲಕ್ಷಿ÷್ಮÃ ಹೆಬ್ಬಾಳಕರ್ ಅವರನ್ನು ಬೆಂಬಲಿಸುವ ಮೂಲಕ ಮತ್ತಷ್ಟು ಅಭಿವೃದ್ಧಿ ಯೋಜನೆಗಳನ್ನು ತರಲು ಸಹಕರಿಸಿ ಎಂದು ಮನವಿ ಮಾಡಿದರು.
ಈ ಸಮಯದಲ್ಲಿ ಡಾ.ಅಸ್ಕಿ, ನಮಸಯ್ಯ ಹಿರೇಮಠ್, ಮಹಾದೇವಿ ರಾಮಚಣ್ಣನ್ನವರ, ಅನುಸೂಯಾ ರಾಮಚಣ್ಣನ್ನವರ, ರೂಬಿನ ಶೈಖ್, ಮಂಗಲ ಬಗನ್ನವರ, ಅಂಜನಾ ಬೆಳಗಾಂವ್ಕರ್, ಯಲ್ಲಣ್ಣ ಬಾಬಣ್ಣವರ, ನಿಲೇಶ್ ಚಂದಗಡಕರ, ವಿಠ್ಠಲ ಕುರುಬರ, ಮಾರುತಿ ಸುಳಗೇಕರ್, ರವಿ ಬಾಳನ್ನವರ, ಚಂದ್ರಕಾಂತ ಧರೆನ್ನವರ, ಜೈನೂಲ್ಲಾ ಕುಡಚಿ, ಸುರೇಶ ಪಗಡಿ, ಗಣಪತಿ ಬಾಳನ್ನವರ ಹಾಗೂ ಗ್ರಾಮದ ನೂರಾರು ಮಹಿಳೆಯರು ಉಪಸ್ಥಿತರಿದ್ದರು.


Gadi Kannadiga

Leave a Reply