ಬೆಳಗಾವಿ, ಜು.೧೧: ಬೆಳಗಾವಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷಕರಾದ ಎಲ್. ವಿಜಯಲಕ್ಷ್ಮೀ ದೇವಿ ಇವರ ಮಾರ್ಗದರ್ಶನದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಜು.೮, ೨೦೨೩ ರಂದು ರಾಷ್ಟ್ರೀಯ ಲೋಕ ಅದಾಲತ್‌ನ್ನು ಹಮ್ಮಿಕೊಳ್ಳಲಾಗಿತ್ತು.
ಸದರಿ ಲೋಕ ಅದಾಲತ್‌ನಲ್ಲಿ ಬೆಳಗಾವಿ ಜಿಲ್ಲೆಯ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಕ್ರಿಮಿನಲ್ ಕಂಪೌಂಡೆಬಲ್ ೧೧೬, ಚೆಕ್ ಬೌನ್ಸ ಪ್ರಕರಣಗಳು ೧೦೦೪, ಬ್ಯಾಂಕ್ ಹಾಗೂ ಹಣ ವಸೂಲಾತಿ ಪ್ರಕರಣಗಳು ೭೦, ವಿಧ್ಯುಚ್ಚಕ್ತಿ ಪ್ರಕರಣಗಳು ೧೧೭, ವೈವಾಹಿಕ ಪ್ರಕರಣಗಳು ೩೫, ಭೂ ಸ್ವಾಧೀನ ಪ್ರಕರಣಗಳು ೪೦, ಅಸಲು ಧಾವೆ ಪ್ರಕರಣಗಳು ೮೮೧ ಹೀಗೆ ಚಾಲ್ತಿ ಇರುವ ಪ್ರಕರಣಗಳಲ್ಲಿ ಒಟ್ಟು ೨೨,೨೨೭ ಪ್ರಕರಣಗಳು ಒಟ್ಟು ೧,೦೧,೨೭,೩೩,೭೮೪ ರೂ. ಗಳ ಪರಿಹಾರ ಒದಗಿಸುವುದರ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.
ವಿಶೇಷವಾಗಿ ಬೆಳಗಾವಿ ಕೌಟುಂಬಿಕ ನ್ಯಾಯಾಲಯಗಳಲ್ಲಿ ೧೨ ಹಾಗೂ ತಾಲ್ಲೂಕುಗಳಲ್ಲಿ ೧೩ ಪತಿ-ಪತ್ನಯರು ಒಂದಾಗಿರುತ್ತಾರೆ ಎಂದು ಬೆಳಗಾವಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಪ್ರಕರಣಗಳ ರಾಜಿ
ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಪ್ರಕರಣಗಳ ರಾಜಿ
Suresh11/07/2023
posted on