This is the title of the web page
This is the title of the web page

Please assign a menu to the primary menu location under menu

Local News

ಕನ್ನಡ ನುಡಿನಡೆ ಕಾಯಕ ಸಮಾರೋಪ ಸಮಾರಂಭ


ಬೆಳಗಾವಿ ೧೩- “ಕನ್ನಡ ನುಡಿನಡೆ ಕಾಯಕ ಸಮಾರೋಪ ಸಮಾರಂಭ” ವನ್ನು ಇದೇ ದಿ. ೧೭ ರವಿವಾರದಂದು ಹಮ್ಮಿಕೊಂಡಿದ್ದು ಈ ಸಮಾರಂಭ ಕುರಿತಂತೆ ಕೆಲ ವಿಷಯಗಳನ್ನು ಹಂಚಿಕೊಳ್ಳಲು ಚೆನ್ನಮ್ಮ ವೃತ್ತದ ಬಳಿ ಇರುವ ಕನ್ನಡ ಸಾಹಿತ್ಯ ಭವನದ ಸಭಾಭವನದಲ್ಲಿ ಇಂದು ದಿ. ೧೩ ಬುಧವಾರದಂದು ಬೆಳಿಗ್ಗೆ ೧೦-೩೦ ಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮಹಾನಗರ ಅಭಿವೃದ್ಧಿ ಪ್ರಾಧಿಕಾರದವರು ಪತ್ರಿಕಾ ಗೋಷ್ಠಿಯನ್ನು ಕರೆದಿದ್ದರು. ಈ ಸಂದರ್ಭದಲ್ಲಿ ಡಾ. ಅರವಿಂದ ಕುಲಕರ್ಣಿಯವರು ಕಾರ್ಯಕ್ರಮ ಹಾಗೂ ಸಂಘಟನೆ ಕುರಿತಂತೆ ಮಾತನಾಡಿದರು.
ಈ ‘ಕನ್ನಡ ನುಡಿನಡೆ ಕಾಯಕ ಸಮಾರೋಪ ಸಮಾರಂಭ’ವು ಇದೇ ದಿನಾಂಕ ೧೭ ರವಿವಾರದಂದು ಮುಂಜಾನೆ ೧೦-೩೦ ಕ್ಕೆ ಬೆಳಗಾವಿ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ. ಎಸ್. ನಾಗಾಭರಣ ಮಾಡಲಿದ್ದು ಅತಿಥಿಗಳಾಗಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಡಾ. ಸಂತೋಷ ಹಾನಗಲ್ಲ, ರಂಗಕರ್ಮಿ ಶ್ರೀಪತಿ ಮಂಜನಬೈಲು, ಗಡಿನಾಡ ಕನ್ನಡ ಹೋರಾಟಗಾರ ಅಶೋಕ ಚಂದರಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಶ್ರೀಮತಿ ವಿದ್ಯಾವತಿ ಭಜಂತ್ರಿ ಆಗಮಿಸಲಿದ್ದಾರೆ.
ನಾಡಗೀತೆ ಸ್ಪರ್ಧೆಯಲ್ಲಿ ವಿಜೇತರಾದ ಪ್ರಥಮ, ದ್ವಿತೀಯ ಹಾಗೂ ತೃತೀಯ ಮೂರು ನಗದು ಕ್ರಮವಾಗಿ ರೂ. ೫,೦೦೦ ರೂ. ೩,೦೦೦ ಹಾಗೂ ೨,೦೦೦ ಗಳಿದ್ದು ಬಹುಮಾನ ಮೊತ್ತವನ್ನು ಕನ್ನಡ ಹೋರಾಟಗಾರ ಅಶೋಕ ಚಂದರಗಿಯವರು ಕೊಡುವವರಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಭಾವಗೀತೆಯ ಸ್ಪರ್ಧೆಯಲ್ಲಿ ವಿಜೇತರಾದ ಏಳು ಜನ ಕಲಾವಿದರು ಮತ್ತೊಮ್ಮೆ ಭಾವಗೀತೆಗಳನ್ನು ಪ್ರಸ್ತುತಪಡಿಸಲಿದ್ದು ಅಲ್ಪೊಪಹಾರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ.
ಬೆಳಗಾವಿ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಮತ್ತು ಮಹಾನಗರ ಸಮಿತಿ ಡಿಸೆಂಬರ್ ೨೦೨೦ ಕ್ಕೆ ತನ್ನ ಕಾರ್ಯವನ್ನು ಪ್ರಾರಂಭಿಸಿತು. ಈ ಸಮಿತಿಯಲ್ಲಿ ಐದು ಜನ ಸದಸ್ಯರಿದ್ದು ಡಾ. ಅರವಿಂದ ಕುಲಕರ್ಣಿ, ಶ್ರೀರಂಗ ಜೋಶಿ, ಡಾ. ಎಚ್. ಐ. ತಿಮ್ಮಾಪೂರ, ಶ್ರೀ ರವಿ ಭಜಂತ್ರಿ ಮತ್ತು ಶ್ರೀಮತಿ ಸುನಂದಾ ಎಮ್ಮಿ ಐವರು ಸದಸ್ಯರಿರುತ್ತಾರೆ. ಅದರಂತೆ ಬೆಳಗಾವಿ ಮಹಾನಗರ ಪಾಲಿಕೆ ಕನ್ನಡ ಜಾಗೃತಿ ಸಮಿತಿಯಲ್ಲಿ ಶ್ರೀಮತಿ ದೀಪಿಕಾ ಚಾಟೆ, ಶ್ರೀಮತಿ ಜ್ಯೋತಿ ಬದಾಮಿ, ಡಾ. ನಿರ್ಮಲಾ ಬಟ್ಟಲ, ರಾಮಚಂದ್ರ ಕಟ್ಟಿ, ಡಾ. ಜಗಧೀಶ ಹಾರುಗೊಪ್ಪ ಮತ್ತು ಸಿ. ಕೆ. ಯರಗಟ್ಟಿಮಠ ಸದಸ್ಯರಿದ್ದಾರೆ.
ಸಂಘಟನೆ ಕಾರ್ಯ ಕುರಿತು ವಿವರಿಸಿದ ಡಾ. ಕುಲಕರ್ಣಿಯವರು ೨೦೨೦-೨೧ ಕರ್ನಾಟಕ ಸರ್ಕಾರವು ಕನ್ನಡ ಕಾಯಕ ವರ್ಷ ವಿಜೃಂಭಣೆಯಿಂದ ಪ್ರಾರಂಭ ಮಾಡಿತು. ನವೆಂಬರ್ ೨೦೨೦ ರಿಂದ ಅಕ್ಟೋಬರ್ ೨೦೨೧ ರವರೆಗೆ ಪ್ರತಿ ತಿಂಗಳೂ ಬೇರೆ ಬೇರೆ ಅಭಿಯಾನಗಳನ್ನು ಕರ್ನಾಟಕದ ತುಂಬೆಲ್ಲ ಹಮ್ಮಿಕೊಂಡಿತ್ತು. ಮೊದಲ ತಿಂಗಳಲ್ಲಿ ‘ಶುದ್ಧ ನಾಮ ಫಲಕ ಮತ್ತು ಕನ್ನಡದಲ್ಲಿ ನಾಮಫಲಕ’ ಈ ಅಭಿಯಾನದಡಿ ಸಂಪೂರ್ಣ ಬೆಳಗಾವಿಯಲ್ಲಿ ಜಾಗೃತಿ ಸಮಿತಿ ಸದಸ್ಯರು ಪ್ರತಿಯೊಂದು ಅಂಗಡಿ ಮುಗ್ಗಟ್ಟುಗಳಿಗೆ ಹೋಗಿ ಕನ್ನಡ ನಾಮಫಲಕವಿಲ್ಲದ ಹಾಗೂ ಶುದ್ಧ ಕನ್ನಡ ನಾಮಫಲಕವಿಲ್ಲದ ಸುಮಾರು ೫೩೦ ಅಂಗಡಿಗಳಿಗೆ ಪತ್ರಗಳನ್ನು ಕೊಟ್ಟು ಅದರಂತೆ ಪತ್ರಗಳ ಪ್ರತಿಗಳನ್ನು ಮಹಾನಗರ ಪಾಲಿಕೆಗಳಿಗೆ ಸಲ್ಲಿಸಿದರು ಆ ಅಂಗಡಿಯವರು ತಮ್ಮ ಲೈಸನ್ಸಗಳನ್ನು ನವೀಕರಿಸಲು ಬಂದಾಗ ಶುದ್ಧ ಕನ್ನಡ ಹಾಗೂ ಕನ್ನಡ ನಾಮಪಲಕ ಕುರಿತಂತೆ ವಿಚಾರಿಸುವಂತೆ ಹೇಳಲಾಯಿತು. ಇದರಂತೆ ನ್ಯಾಯಾಲಯ, ಸಾರಿಗೆ ಸಂಸ್ಥೆ, ಮಾಧ್ಯಮ, ವೈದ್ಯಕೀಯ, ಬೇರೆ ಬೇರೆ ಕ್ಷೇತ್ರಗಳಲ್ಲಿಯ ಕನ್ನಡ ಬಳಕೆಯ ಕುರಿತಂತೆ ಪ್ರತಿ ತಿಂಗಳೂ ಅಭಿಯಾನವನ್ನು ಮಾಡಲಾಯಿತು. ಬೆಳಗಾವಿ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಮತ್ತು ಮಹಾನಗರ ಸಮಿತಿಯವರು ಕನ್ನಡ ಬಳಸುವಲ್ಲಿ, ಉಳಿಸುವಲ್ಲಿ ಸಾಕಷ್ಟು ಶ್ರಮವಹಿಸಿ ಕೆಲಸವನ್ನು ಮಾಡಿದರು.
ವಿವಿಧ ಶಾಲೆಗಳ ವಿದ್ಯಾರ್ಥಿಗಳಿಗೆ ಕನ್ನಡ ಅಭಿಮಾನ ಜಾಗೃತಿ ಮೂಡಿಸಲು ಕನ್ನಡ ನಾಡಗೀತೆ ಹಾಗೂ ಭಾವಗೀತೆಗಳ, ನಿಬಂಧ, ರಸಪ್ರಶ್ನೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸುವಂತೆ ಕೇಂದ್ರ ಸಮಿತಿಯವರು ‘ಕನ್ನಡ ನುಡಿನಡೆ ಕಾಯಕ ಸಮಾರಂಭ’ ಅಡಿಯಲ್ಲಿ ಹಮ್ಮಿಕೊಳ್ಳುವಂತೆ ನಿರ್ದೇಶಿಸಿದ್ದರು. ಅದರಂತೆ ಬೆಳಗಾವಿ ನಗರದಲ್ಲಿ ಅಷ್ಟೇ ಅಲ್ಲದೆ ಜಾಂಬೋಟಿ, ಕಿತ್ತೂರು, ಶೀಗಿಹಳ್ಳಿ, ಲೋಂಡಾ, ಖಾನಾಪೂರ ಗಡಿನಾಡಿನ ಮೂಲೆ ಮೂಲೆಗಳಲ್ಲಿರುವ ಕನ್ನಡ, ಮರಾಠಿ ಹಾಗೂ ಆಂಗ್ಲ ಮಾಧ್ಯಮ ಶಾಲೆಗಳಿಗೆ ಹೋಗಿ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಅದರಂತೆ ಅಂತರ ಕಾಲೇಜು ಸಮೂಹ ನಾಡಗೀತೆ, ಭಾವಗೀತೆ , ರಸಪ್ರಶ್ನೆ ಏರ್ಪಡಿಸಲಾಗಿತ್ತು. ವಿಜೇತರಿಗೆ ನೆನಪಿನ ಕಾಣಿಕೆ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಪಾಲಕರು, ಶಿಕ್ಷಕರು, ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪತ್ರಿಕಾ ಗೋಷ್ಠಿಯಲ್ಲಿ ದೀಪಿಕಾ ಚಾಟೆ, ರಾಮಚಂದ್ರ ಕಟ್ಟಿ, ಡಾ. ಎಚ್. ಆಯ್. ತಿಮ್ಮಾಪೂರ, ಡಾ. ಎಲ್. ಕುಲಕರ್ಣಿ, ಡಾ. ನಿರ್ಮಲಾ ಬಟ್ಟಲ, ಸುನಂದಾ ಎಮ್ಮಿ, ಜ್ಯೋತಿ ಬದಾಮಿ ಉಪಸ್ಥಿತರಿದ್ದರು.


Gadi Kannadiga

Leave a Reply