ಬೆಳಗಾವಿ: ನಗರದು ಕೆ.ಎಲ್.ಇ. ಸ್ವಾಯತ್ತ ವಿಶ್ವವಿದ್ಯಾಲಯವು, ಕರ್ನಾಟಕ ರಾಜ್ಯ ರಾಷ್ಟ್ರೀಯ ಸೇವಾ ಯೋಜನೆ ಕೋಶದ ಸಹಯೋಗದಲ್ಲಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆ, ಪ್ರಾದೇಶಿಕ ನಿರ್ದೇಶನಾಲಯ, ಭಾರತ ಸರ್ಕಾರದ ಬೆಂಬಲದೊಂದಿಗೆ “ರಾಷ್ಟ್ರೀಯ ಏಕೀಕರಣ ಶಿಬಿರ” ವನ್ನು ಕೆ.ಎಲ್.ಇ, ಜೆ.ಎನ್.ಎಮ್.ಸಿ ಆವರಣದಲ್ಲಿ “ಏಕೀಕರಣದ ಮೂಲಕ ಸುಸ್ಥಿರ ಅಭಿವೃದ್ದಿಯ ಕಡೆಗೆ ಸಣ್ಣ ಬದಲಾವಣೆಗಳು” ಎಂಬ ಶೀರ್ಷಿಕೆಯೊಂದಿಗೆ ದಿನಾಂಕ ೧೭/೦೧/೨೦೨೩ ರಿಂದ ೨೩/೦೧/೨೦೨೩ ರವರೆಗೆ ಆಯೋಜಿಸಲಾಗಿತ್ತು. ಈ ಶಿಬಿರದ ಸಮಾರೋಪ ಸಮಾರಂಭವನ್ನು ದಿನಾಂಕ ೨೩/೦೧/೨೦೨೩ ರಂದು ಹಮ್ಮಿಕೊಳ್ಳಲಾಗಿತ್ತು.
ಏಳು ದಿನಗಳ ಕಾಲ ಜರುಗಿದ ಈ ಶಿಬಿರದಲ್ಲಿ ಅಸ್ಸಾಂ, ಬಿಹಾರ, ಮಹಾರಾಷ್ಟ್ರ, ತಮಿಳನಾಡು ಮತ್ತು ಕರ್ನಾಟಕ ರಾಜ್ಯಗಳಿಂದ ಒಟ್ಟು ೧೫೦ ಎನ್.ಎಸ್.ಎಸ್. ಸ್ವಯಂ ಸೇವಕರು ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ರಂಗೋಲಿ, ರಸಪ್ರಶ್ನೆ ಸ್ಪರ್ಧೆ, ಸಂಸ್ಕೃತಿಕ ಕಾರ್ಯಕ್ರಮಗಳು, ಉಪನ್ಯಾಸ ಕಾರ್ಯಕ್ರಮ ಮತ್ತು ಹೊರವಲಯ ಚಟುವಟಿಕೆಗಳನ್ನು ಏರ್ಪಡಿಸಲಾಗಿತ್ತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಅಭ್ಯರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಗೌರವಾನ್ವಿತ ಅತಿಥಿಗಳಾದ ಶ್ರೀ ಪ್ರತಾಪಲಿಂಗಯ್ಯ, ಕರ್ನಾಟಕ ರಾಜ್ಯ ರಾಷ್ಟ್ರೀಯ ಸೇವಾ ಯೋಜನಾ ಕೋಶದ ಅಧಿಕಾರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು, ಇವರು ಕಾರ್ಯಕ್ರಮದ ಕುರಿತು ಭಾಷೆ, ಜಾತಿ ಮತ್ತು ಪ್ರದೇಶದ ವ್ಯತ್ಯಾಸಗಳನ್ನು ಮರೆತು ರಾಷ್ಟ್ರೀಯ ಏಕೀಕರಣದ ಬಗೆ ಕಲಿಯಬೇಕೆಂದು ಹೇಳಿದರು. ಹಾಗೂ “ರಾಷ್ಟ್ರೀಯ ಏಕೀಕರಣ ಶಿಬಿರ” ವನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಕೆ.ಎಲ್.ಇ. ಸ್ವಾಯತ್ತ ವಿಶ್ವವಿದ್ಯಾಲಯವನ್ನು ಅಭಿನಂದಿಸಿದರು.
ಕೆ.ಎಲ್.ಇ. ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ|| ನಿತಿನ್ ಗಂಗನೆ ಅವರು ಅಧ್ಯಕ್ಷೀಯ ಬಾಷಣದಲ್ಲಿ ಕೆ.ಎಲ್.ಇ. ವಿಶ್ವವಿದ್ಯಾಲಯವು ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಳನ್ನು ಬೆಂಬಲಿಸುತ್ತದೆ ಮತ್ತು ವಿದ್ಯಾರ್ಥಿಗಳು ಶಿಬಿರದ ಸಮಯದಲ್ಲಿ ಕಲಿತ ಕೌಶಲ್ಯಗಳನ್ನು ತಮ್ಮ ಸಮುದಾಯದ ಅಭಿವೃದ್ದಿಗಾಗಿ ಬಳಸಿಕೊಳ್ಳಬೇಕೆಂದು ಕರೆ ನೀಡಿದರು. ಈ ಸಮಯದಲ್ಲಿ ವಿವಿಧ ರಾಜ್ಯಗಳಿಂದ ಭಾಗವಹಿಸಿದ ಎಲ್ಲಾ ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಗಳಿಗೆ ನೆನಪಿನ ಕಾಣಿಕೆಗಳನ್ನು ವಿತರಿಸಲಾಯಿತು.
ಡಾ|| ಎನ್. ಎಸ್. ಮಹಾಂತಶೆಟ್ಟಿ, ಪ್ರಾಂಶುಪಾಲರು, ಕೆ.ಎಲ್.ಇ, ಜೆ.ಎನ್.ಎಮ್.ಸಿ ಇವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಲ್ಲರನ್ನು ಅಭಿನಂದಿಸಿದರು. ಡಾ. ವಿ.ಎ.ಕೋಠಿವಾಲೆ ಕುಲಸಚಿವರು ಸರ್ವರನ್ನು ಸ್ವಾಗತಿಸಿದರು. ಶ್ರೀ ವೀರಕುಮಾರ ಜಪ್ತಿ ಅತಿಥಿಗಳನ್ನು ಪರಿಚಯಿಸಿದರು. ಕೆ.ಎಲ್.ಇ. ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾ ಅಧಿಕಾರಿಗಳಾದ ಡಾ|| ಅಶ್ವಿನಿ ನರಸನ್ನವರ ವಂದಿಸಿದರು. ಈ ಕಾರ್ಯಕ್ರಮವು ರಾಷ್ಟ್ರ ಗೀತೆ ಹಾಡುವುದರ ಮೂಲಕ ಮುಕ್ತಾಯಗೊಂಡಿತು.
Gadi Kannadiga > State > ರಾಷ್ಟ್ರೀಯ ಏಕೀಕರಣ ಶಿಬಿರದ ಸಮಾರೋಪ ಸಮಾರಂಭ
ರಾಷ್ಟ್ರೀಯ ಏಕೀಕರಣ ಶಿಬಿರದ ಸಮಾರೋಪ ಸಮಾರಂಭ
Suresh23/01/2023
posted on