This is the title of the web page
This is the title of the web page

Please assign a menu to the primary menu location under menu

Local News

ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮ


ಸವದತ್ತಿ: ತಾಲೂಕಿನ ಉಗರಗೋಳ ಗ್ರಾಮದಲ್ಲಿ ಮಕ್ಕಳಲ್ಲಿನ ಸೃಜನಶೀಲತೆ, ಕೌಶಲ ಹಾಗೂ ಕಲಿಕಾ ಮನೋಭಾವ ಹೆಚ್ಚಿಸಿ ಅವರಲ್ಲಿ ಅಡಗಿರುವ ಪ್ರತಿಭೆ ಹೊರತರಲು ಹಾಗೂ ಶೈಕ್ಷಣಿಕ ರಂಗದಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಲು ಬೇಸಿಗೆ ಶಿಬಿರಗಳು ಸಹಕಾರಿಯಾಗಿವೆ ಎಂದು ಧಾರವಾಡದ ತೋಟಗಾರಿಕಾ ಉಪ£ರ್ದೇಶಕ ಅಬ್ದುಲ್ ಉಸ್ತಾದ್ ಹೇಳಿದರು.
ಇಲ್ಲಿನ ಬಸವಜ್ಯೋತಿ ಪ್ರಾಥಮಿಕ ಶಾಲಾವರಣದಲ್ಲಿ ರೇಣುಕಾ ಯಲ್ಲಮ್ಮ ದೇವಿ ಶಿಕ್ಷಣ ಹಾಗೂ ವಿವಿಧೋದ್ದೇಶಗಳ ಸಂಘ ಹಾಗೂ ಜ್ಞಾನಭಾರತಿ ನವೋದಯ ತರಬೇತಿ ಕೇಂದ್ರದಿಂದ ಜರುಗಿದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೇವಲ ಶೈಕ್ಷಣಿಕ ಪ್ರಗತಿ ಮಾತ್ರವಲ್ಲದೇ ಮಕ್ಕಳಲ್ಲಿ ನಾಯಕತ್ವ ಗುಣ, ಉತ್ತಮ ಸಂವಹನ ಕೌಶಲ, ಧೃಡ £ರ್ಧಾರ ತೆಗೆದುಕೊಳ್ಳುವ ಗುಣಗಳನ್ನು ಇಲ್ಲಿ ಕಲಿಯಬಹುದು. ಶಿಬಿರದಲ್ಲಿ ಮಕ್ಕಳಿಗೆ ಇಷ್ಟವಾಗುವ ಚಟುವಟಿಕೆಗಳು ಇರುವದರಿಂದ ಆಸಕ್ತಿದಾಯಕವಾಗಿ ಕಲಿಕೆಯಲ್ಲಿ ತೊಡಗಿಕೊಳ್ಳುತ್ತಾರೆ.
ಮಕ್ಕಳು ಆಸಕ್ತಿಗಳ ಅನ್ವೇಷಣೆ, ಸಾಮಥ್ರ÷್ಯ ಮತ್ತು ದೌರ್ಬಲ್ಯ ಅರಿಯುವ ಮತ್ತು ಸ್ವಾವಲಂಬಿಯಾಗುವುದನ್ನು ಕಲಿಯುತ್ತಾರೆ. ಇಚೇಗೆ ಮೊಬೈಲ್ ಬಳಕೆಯೇ ಮಕ್ಕಳ ದಿನಚರಿಯಾಗಿದ್ದು, ದೈಹಿಕ ಹಾಗೂ ಮಾನಸಿಕ ಸಮಸ್ಯೆ ಎದುರಿಸುವಂತಾಗಿದೆ. ಕಾರಣ ಮೊಬೈಲ್ ಬಳಕೆಯಿಂದ ಮಕ್ಕಳನ್ನು ದೂರವಿಡಲು ಬೇಸಿಗೆ ಶಿಬಿರ ಸಹಕರಿಸುತ್ತದೆ. ಇಲ್ಲಿ ತಂತ್ರಜ್ಞಾನಕ್ಕಿಂತ ಸಾಂಪ್ರದಾಯಿಕ ಕಲಿಕೆಯ ಪ್ರಮಾಣ ಹೆಚ್ಚಿರುತ್ತದೆ ಎಂದರು.
ಸಂಸ್ಥೆಯ ಅಧ್ಯಕ್ಷ ಡಿ.ಎಸ್. ಕೊಪ್ಪದ ಮಾತನಾಡಿ, ಬೇಸಿಗೆ ಶಿಬಿರದಲ್ಲಿ ಮಕ್ಕಳು ಹೊಸ ಆಸಕ್ತಿಗೆ ತೆರೆದುಕೊಳ್ಳಲು ಸಾಧ್ಯ. ಪಠ್ಯದೊಟ್ಟಿಗೆ ಇತರೆ ಪಠ್ಯೇತರ ಚಟುವಟಿಕೆಗಳನ್ನು ನಡೆಸಿ ಮಕ್ಕಳ ಆಸಕ್ತಿ ಕ್ಷೇತ್ರ ಕಂಡುಕೊಳ್ಳಲು ಶಿಬಿರಗಳು ಸಹಕಾರಿಯಾಗಿವೆ. ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಸ್ವ÷್ವಂತವಾಗಿ ಆಲೋಚಿಸಲು ಉತ್ತೇಜನ £Ãಡಿ ಭವಿಷ್ಯದಲ್ಲಿ ಸಮಸ್ಯೆ ಎದುರಾಗದಂತೆ ಆರಂಭದಲ್ಲಿಯೇ ಮಕ್ಕಳನ್ನು ಗಟ್ಟಿಗೊಳಿಸಲು ಇದೊಂದು ಉತ್ತಮ ವೇದಿಕೆಯಾಗಿದೆ.
ಪಾಲಕರು ತಮ್ಮ ಮಕ್ಕಳ ಕಲಿಕೆಗೆ ಪೊ?ರೀತ್ಸಾಹ £Ãಡುವ ಮೂಲಕ ಅವರ ವಿದ್ಯಾಭ್ಯಾಸಕ್ಕೆ ದಾರಿ ದೀಪವಾಗಬೇಕು. ಪ್ರತಿ ವರ್ಷ ಮಕ್ಕಳ ಶಿಬಿರ ಸಂಘಟಿಸಿ ಮಕ್ಕಳಿಗೆ ಮಣ್ಣಿನ ಮಾದರಿ, ಚಿತ್ರಕಲೆ, ನೃತ್ಯ, ಭರತನಾಟ್ಯ, ಸ್ಪೋಕನ್ ಇಂಗ್ಲಿ?ï, ಅಬಾಕಸ್‌ನಂತಹ ವಿಶೇಷ ಕಲಿಕೆ ಮತ್ತು ತರಬೇತಿ ಹಾಗೂ ಮಾಹಿತಿ £Ãಡಲಾಗುತ್ತಿದೆ ಎಂದರು.
ಪಠ್ಯ ಹಾಗೂ ಪಠ್ಯೇತರ ವಿಷಯದಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಪ್ರೋತ್ಸಾಹಿಸಲಾಯಿತು.
ಈ ವೇಳೆ ಶೇಷಪ್ಪ ಕೊಪ್ಪದ, ಗ್ರಾಪಂ ಸದಸ್ಯೆ ಶಂಕ್ರಮ್ಮ ಮುದ್ರಗಣಿ, ಸಂಗವ್ವ ಹೀರೆಮಠ, ಶಂಕ್ರಯ್ಯ ಹೀರೆಮಠ, ಯಲ್ಲಪ್ಪ ಕುಂಬಾರ ಹಾಗೂ ಗಣ್ಯರು ಇದ್ದರು.


Leave a Reply