This is the title of the web page
This is the title of the web page

Please assign a menu to the primary menu location under menu

Local News

ನಡೆದಾಡುವ ದೇವರು, ಅಪರೂಪದ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿ ಯವರ ಅಗಲಿಕೆಗೆ ಸಂತಾಪ


 

ಬೆಳಗಾವಿ ದಿ 03 :-ಕನ್ನಡ ನಾಡಿನಲ್ಲಿ ನಡೆದಾಡುವ ದೇವರೆಂದೇ ಪ್ರಖ್ಯಾತರಾಗಿದ್ದ,ತಮ್ಮ ಪ್ರವಚನಗಳ ಮೂಲಕ ದೇಶ ವಿದೇಶದ ಜನತೆಗೆ ಆಧ್ಯಾತ್ಮ,ಜ್ಞಾನದಾಸೋಹ ನೀಡಿರುವ  ವಿಜಯಪುರದ ಜ್ಞಾನಯೋಗಾಶ್ರಮದ ಪರಮಪೂಜ್ಯರಾದ ಅಪರೂಪದ ಸಂತ, ತಮ್ಮ ಸರಳತೆಯ ನಡೆ ನುಡಿಯಿಂದ ಜನತೆಯ ಪಾಲಿನ ದೇವರೇ ಆಗಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಅಗಲಿಕೆ ಅತೀವ ನೋವು ದುಃಖ ತಂದಿದೆ, ಈ ಶತಮಾನದ ಮಹಾನ ರಾಗಿದ್ದ ಅವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲೆಂದು ಪ್ರಾರ್ಥಿಸುತ್ತೇನೆ ಅವರ ದಿವ್ಯಾತ್ಮಕ್ಕೆ ಭಾವಪೂರ್ಣ ಶ್ರದ್ಧಾ0ಜಲಿಯನ್ನು ಸಾಹಿತಿ, ಸಂಘಟಕರಾದ ಬಸವರಾಜ ಸುಣಗಾರ ಅರ್ಪಿಸಿದ್ದಾರೆ

ನನ್ನದೇನಿದೆ ಎಲ್ಲವೂ ಭಗವಂತ ನದ್ದು ಎಂಬ ಭಾವದಿಂದ ನಡೆದು ಹೆಸರುವಾಸಿಯಾಗಿದ್ದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು

ಕೆರೆಯ ನೀರನ್ನು ಕೆರೆಗೆ ಚೆಲ್ಲಿ… ಎಂಬ ದಾಸ ವಾಣಿಯಂತೆ ನುಡಿದಂತೆ ನಡೆದುಕೊಂಡಿದ್ದ ಅಪರೂಪದ ಯೋಗಿಗಳು ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು,

ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು 09-04-2010 ರಲ್ಲಿ ಬೆಳಗಾವಿಯ ಹಸಿರುಕ್ರಾಂತಿ ದಿನಪತ್ರಿಕೆಯ ಸಂಸ್ಥಾಪಕರು, ರೈತ ಜನಪರ ಹೋರಾಟಗಾರರು ಆಗಿದ್ದ ಕಲ್ಯಾಣರಾವ ಮುಚಳಂಬಿ ಯವರ ಸಂಪಾದಕತ್ವದಲ್ಲಿ ಹೊರತಂದಿದ್ದ ದಿವ್ಯ ದರ್ಶನ ಗ್ರಂಥ  ಬಿಡುಗಡೆ ಯನ್ನು ಅಂದಿನ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ನವರು ಮಾಡಿದ್ದರು, ಆ ಸಮಯದಲ್ಲಿ ಸುತ್ತೂರು ಶ್ರೀಗಳ ಜೊತೆಗೆ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ದಿವ್ಯ ಸಾನ್ನಿದ್ಯ ವಹಿಸಿದ್ದರು ನನ್ನ ಭಾಗ್ಯ ಅಂತಹ ಮಹಾನ ವ್ಯಕ್ತಿಗಳ ಜೊತೆಗೆ ಭಾಗವಹಿಸುವ ಸುಯೋಗ ಸಿಕ್ಕಿತು, ಅದೊಂದು ಪುಣ್ಯಮಯ ಗಳಿಗೆ,

ಅಥಣಿ ತಾಲೂಕಿನ ಕಕಮರಿ ಗ್ರಾಮದಲ್ಲಿರುವ ಶ್ರೀ ಗುರುದೇವ ಸೇವಾಶ್ರಮದಲ್ಲಿ ನಡೆದ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಸಾನ್ನಿಧ್ಯ ದಲ್ಲಿ ಆದರ್ಶ ಶಿಕ್ಷಕ ಪ್ರಶಸ್ತಿ ಗುರುಸೇವಾ ರತ್ನ ಪಡೆದುಕೊಂಡು ಜೀವನ ಪಾವನ ಮಾಡಿಕೊಂಡದ್ದು ಸ್ಮರಣೀಯ ವಾಗಿದೆ, ಅವರ ದರ್ಶನಗಳನ್ನು ಹಲವಾರು ಸಮಯದಲ್ಲಿ ಪಡೆದುಕೊಂಡಿದ್ದು ನನ್ನ ಭಾಗ್ಯವೆಂದನ್ನಬಹುದು, ಅವರ ನೆನಪು, ಆರ್ಶಿವಾದ ಸದಾ ಸ್ಮರಣೀಯವಾಗಿದೆ ಎಂದು ಬೆಳಗಾವಿಯ ಶ್ರೀ ಸದ್ಗುರು ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷರಾದ

ಹಾಗೂ ಮಾಸ್ತ ಮರಡಿಯ ಹಿರಿಯ ಮುಖ್ಯ್ಯೊಪಾದ್ಯಾಯರಾದ ಬಸವರಾಜ ಸುಣಗಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ


Gadi Kannadiga

Leave a Reply