This is the title of the web page
This is the title of the web page

Please assign a menu to the primary menu location under menu

State

ಜಿಲ್ಲಾಮಟ್ಟದ ವಾರಾಂತ್ಯ ಚಟುವಟಿಕೆಗಳ ಕಾರ್ಯಾಗಾರಕ್ಕೆ ಚಾಲನೆ


ಕೊಪ್ಪಳ ಡಿಸೆಂಬರ್ ೦೭ : ಕೊಪ್ಪಳ ನಗರದ ಸರಕಾರಿ ಬಾಲಕರ ಬಾಲಮಂದಿರ ಆವರಣದಲ್ಲಿ ಜಿಲ್ಲಾ ಮಟ್ಟದ ವಾರಾಂತ್ಯ ಚಟುವಟಿಕೆಗಳ ಕಾರ್ಯಾಗಾರಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಪದ್ಮಾವತಿ ಜಿ. ಅವರು ಸಸಿಗೆ ನೀರು ಹಾಕುವುದರ ಮೂಲಕ ಚಾಲನೆ ನೀಡಿದರು.
ಬಾಲ ಭವನ ಸೊಸೈಟಿ ಬೆಂಗಳೂರು, ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲ ಭವನ ಸಮಿತಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಮಕ್ಕಳ ಜಾಗೃತಿ ಸಂಸ್ಥೆ ಇವರುಗಳ ಸಹಯೋಗದಲ್ಲಿ ಇತ್ತೀಚೆಗೆ ನಗರದ ಸರಕಾರಿ ಬಾಲಕರ ಬಾಲಮಂದಿರ ಆವರಣದಲ್ಲಿ ಜಿಲ್ಲಾ ಮಟ್ಟದ ವಾರಾಂತ್ಯ ಚಟುವಟಿಕೆಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಬಾಲ ಭವನ ಸೊಸೈಟಿ ಅವರಿಂದ ಬಾಲ ಮಂದಿರ ಮಕ್ಕಳಿಗೆ ವಿವಿಧ ಚಟುವಟಿಕೆಗಳಾದ ಚಿತ್ರಕಲೆ, ಜೇಡಿ ಮಣ್ಣಿನ ಕಲೆ, ಕರಕುಶಲೆ, ಯೋಗ, ರಂಗ ಚಟುವಟಿಕೆ, ಜೇಡಿ ಮಣ್ಣಿನ ಕಲೆ, ಸಮೂಹ ನೃತ್ಯ ಇತ್ಯಾದಿ ನಡೆಸಲಾಗುತ್ತದೆ. ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಪ್ರತಿ ಶನಿವಾರ ಹಾಗೂ ಭಾನುವಾರ ಶಾಲಾ ಅವಧಿ ನಂತರ ಮಕ್ಕಳ ಮನರಂಜನೆಗಾಗಿ ಕ್ರೀಯಾತ್ಮಕ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಆಸಕ್ತರು ಇದರ ಸದುಪಯೋಗ ಪಡೆಯುವಂತಾಗಬೇಕೆಂದು ಎಂದು ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೋಹಿಣಿ ಕೊಟಗಾರ ಅವರು ಮಾತಾನಾಡಿ, ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಲು ಬಾಲ ಭವನದಲ್ಲಿ ಇಂತಹ ಚಟುವಟಿಕೆಗಳನ್ನು ಆಯೋಜನೆ ಮಾಡಲಾಗಿದೆ. ಆದ್ದರಿಂದ ಮಕ್ಕಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಕಲಿಯಬೇಕೆಂದು ತಿಳಿಸಿದರು.
ಸರಕಾರಿ ಬಾಲಕೀಯರ ಬಾಲಮಂದಿರದ ಅಧೀಕ್ಷಕರಾದ ಭುವನೇಶ್ವರಿ ಶೀಲವಂತರ ಅವರು ಮಾತಾನಾಡಿ, ಎರಡು ಬಾಲ ಮಂದಿರದ ಮಕ್ಕಳು ಈ ವಾರಾಂತ್ಯ ಕಾರ್ಯಾಗಾರದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಹೊರ ತರಲು ಈ ಒಂದು ಕಾರ್ಯಗಾರ ಅನುಕೂಲವಾಗಿದೆ ಎಂದು ತಿಳಿಸಿದರು.
ನಂತರ ಮಕ್ಕಳಿಗೆ ಸಂಪನ್ಮೂಲ ವ್ಯಕ್ತಿಗಳು ವಿವಿಧ ಚಟುವಟಿಕೆಗಳನ್ನು ಹೇಳಿಕೊಟ್ಟರು. ಮಕ್ಕಳನ್ನು ಖುಷಿ ವ್ಯಕ್ತಪಡಿಸಿದರು. ಕಾರ್ಯಾಕ್ರಮದಲ್ಲಿ ಸರಕಾರಿ ಬಾಲಕರ ಬಾಲಮಂದಿರದ ಅಧೀಕ್ಷಕರಾದ ಮಂಜುರುಖಾನ್, ಮಕ್ಕಳ ಜಾಗೃತಿ ಸಂಸ್ಥೆಯವರು ಮತ್ತು ಸರಕಾರಿ ಬಾಲಕರ/ಬಾಲಕೀಯರ ಬಾಲಮಂದಿರ ಸಿಬ್ಬಂದಿ ಹಾಗೂ ಎರಡೂ ಬಾಲ ಮಂದಿರ ಮಕ್ಕಳು ಇದ್ದರು.
ಜಿಲ್ಲಾ ಬಾಲ ಭವನ ಕಾರ್ಯಕ್ರಮದ ಸಂಯೋಜಕ ಮೆಹಬೂಬಸಾಬ ಇಲಾಹಿ ನಿರೂಪಿಸಿದರು. ಸರಕಾರಿ ಬಾಲಕೀಯರ ಬಾಲ ಮಂದಿರದ ಆಪ್ತಸಮಾಲೋಚಕಿ ನೇತ್ರಾವತಿ ಅವರು ಸಾಗ್ವತಿಸಿದರು. ಸರಕಾರಿ ಬಾಲಕರ ಬಾಲ ಮಂದಿರದ ಆಪ್ತಸಮಾಲೋಚಕ ಕುಮಾರ ಮಂಜುನಾಥ ಅವರು ವಂದಿಸಿದರು.


Gadi Kannadiga

Leave a Reply