This is the title of the web page
This is the title of the web page

Please assign a menu to the primary menu location under menu

Local News

ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾ ಕೂಟಕ್ಕೆ ಚಾಲನೆ


ನೇಸರಗಿ- ಜಿಲ್ಲಾ ಪಂಚಾಯತ ಬೆಳಗಾವಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಬೈಲಹೊಂಗಲ, ಸರಕಾರಿ ಪ್ರೌಢ ಶಾಲೆ ನೇಸರಗಿ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಸರಕಾರಿ ಸ್ವತಂತ್ರ ಪದವಿ ಕಾಲೇಜು ಆವರಣದಲ್ಲಿ ೨೦೨೨-೨೩ ನೇ ಸಾಲಿನ ನೇಸರಗಿ ವಲಯ ಮಟ್ಟದ ಪ್ರೌಢಶಾಲೆಗಳ ಇಲಾಖಾ ಕ್ರೀಡಾ ಕೂಟ ಜರುಗಿದವು.
ಕ್ರೀಡಾಕೂಟದ ದ್ವೀಪ ಪ್ರಜ್ವಲಿಸುವ ಮೂಲಕ ಬೈಲಹೊಂಗಲ ಬಿಇಓ ಎ ಎನ್ ಪ್ಯಾಟಿ ಕ್ರೀಡಾಕೂಟಕ್ಕೆ ಚಾಲನೆ £Ãಡಿದರು.
ಗ್ರಾಮೀಣ ಮಟ್ಟದಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯವಾಗಿದೆ, ಈ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರತಿಭೆ ಹೊರಹೊಮ್ಮಲು ವಲಯ ಮಟ್ಟದ ಕ್ರೀಡಾಕೂಟ ಒಂದು ಉತ್ತಮ ಪ್ರಯತ್ನವಾಗಿದೆ ಎಂದು ತಿಳಿಸಿದರು.
ಪಠ್ಯಪುಸ್ತಕ ಅಧ್ಯಯನದ ದೊಂದಿಗೆ ಕ್ರೀಡೆ ಕೂಡಾ ಮುಖ್ಯವಾಗಿದ್ದು, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಯು ಶಾಲೆಗಳು ಅಡಿಪಾಯವಾಗಿವೆ ಎಂದು ಹೇಳಿದರು.
‘ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ, ದೈಹಿಕ ಬೆಳವಣಿಗೆಗೆ ಅನುಕೂಲ. ಜತೆಗೆ ಹೊಸ ಚೈತನ್ಯ ಬರುತ್ತದೆ. ಓದಿನಲ್ಲಿ ಹೆಚ್ಚಿನ ಅಂಕ ಗಳಿಸಲು ಸಾಧ್ಯವಾಗುತ್ತದೆ. ಯಾರಿಗೆ ಯಾವ ಆಟದಲ್ಲಿ ಆಸಕ್ತಿ ಇರುತ್ತದೆಯೋ?ಅದರಲ್ಲಿ ಪಾಲ್ಗೊಳ್ಳಬೇಕು’ ಎಂದು ಹೇಳಿದರು.೧೨ ಶಾಲೆಗಳ ೪೫೦ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ಕಬಡ್ಡಿ, ಕೋ ಕೋ, ವಾಲಿಬಾಲ್, ಥ್ರೋಬಾಲ್, ಓಟದ ಸ್ಪರ್ಧೆ, ರಿಲೇ, ಶಾಟ್‌ಪುಟ್, ತಟ್ಟೆ ಎಸೆತ ಕ್ರೀಡೆಗಳು ನಡೆದವು.
ಈ ಸಂಧರ್ಭದಲ್ಲಿ ಗ್ರಾ ಪಂ ಅಧ್ಯಕ್ಷೆ ಸುಶೀಲಾ ತುಬಾಕಿ, ಎಸ್ ಟಿ ದಾಸರ, ಎ ಆರ್ ಮಾಳನ್ನವರ, ಸಿಡಿಸಿ ಉಪಾಧ್ಯಕ್ಷ ಸೋಮನಗೌಡ ಪಾಟೀಲ, ಸೋಮಶೇಖರ ಮಾಳನ್ನವರ, ರಾಜ್ಯಾಧ್ಯಕ್ಷ ರಮೇಶ ರಾಯಪ್ಪಗೋಳ, ಎಚ್ ಆಯ್ ಬೆಳವಣಕಿ, ಎಸ್ ಡಿಎಮ್ ಸಿ ಉಪಾಧ್ಯಕ್ಷ ರುದ್ರಪ್ಪ ಮದವಾಲ, ಪ್ರಾಂಶುಪಾಲ ಎಮ್ ವಾಯ್ ಹಿತಾರಗೌಡರ, ಸಲೀಮ್ ನದಾಪ, ಪಿಎಸ್‌ಐ ವಾಯ್ ಎಲ್ ಶೀಗಿಹಳ್ಳಿ, ಕ್ರೀಡಾಪಟುಗಳು ಹಾಗೂ ವಲಯ ಮಟ್ಟದ ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು.


Gadi Kannadiga

Leave a Reply