This is the title of the web page
This is the title of the web page

Please assign a menu to the primary menu location under menu

State

ಬಿಜೆಪಿ ಅಲ್ಪ ಸಂಖ್ಯಾತರ ರಾಜ್ಯಾಧ್ಯಕ್ಷರಾಗಿ ಸಯ್ಯದ್ ಸಲಾಂ ನೇಮಕ- ಕೊಪ್ಪಳ ಜಿಲ್ಲಾ ಘಟಕದಿಂದ ಅಭಿನಂದನೆ


ಕುಷ್ಟಗಿ:-ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲು ಅವರು ರಾಜ್ಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಸಯ್ಯದ ಸಲಾಂ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದು ಕೊಪ್ಪಳ ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರು ಅಮೀನುದ್ದೀನ ಮುಲ್ಲಾ ಹಾಗೂ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

ಈ ಕುರಿತು ಕೊಪ್ಪಳ ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರು ಅಮೀನುದ್ದೀನ ಮುಲ್ಲಾ ಮಾತನಾಡಿ ನೂತನ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಬಿಜೆಪಿ ಪಕ್ಷದ ಸಂಘಟನೆ ಅತ್ಯಂತ ವೇಗವಾಗಿ‌ ನಡೆಯಲಿದೆ. ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಬಿಜೆಪಿ ಪಕ್ಷ ಎಲ್ಲಾ ವರ್ಗದವರಿಗೂ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಹೀಗಾಗಿ ರಾಜ್ಯಾದ್ಯಂತ ಅಲ್ಪಸಂಖ್ಯಾತರು ಬಿಜೆಪಿಗೆ‌ಬೆಂಬಲಿಸುವ ನಿಟ್ಟಿನಲ್ಲಿ ಪಕ್ಷದ ಹಾಗೂ ಅಲ್ಪಸಂಖ್ಯಾತರಿಗೆ ನೀಡಿದ ಕೊಡುಗೆಗಳನ್ನು ಜನತೆಗೆ ತಿಳಿಸಿ ಇನ್ನಷ್ಟು ಪಕ್ಷವನ್ನು ಬಲಗೊಳಿಸಲಾಗುವುದು ಎಂದರು. ಅಲ್ಲದೇ ಇತ್ತೀಚೆಗೆ ನಡೆದ ಸ್ಥಳೀಯ ಚುನಾವಣೆಗಳಲ್ಲಿ ಕುಕನೂರ ಪಟ್ಟಣಪಂಚಾಯತಿಗೆ ಪೀರದೋಷಾಬೇಗಂ ಖಾಜಿ, ಕೊಪ್ಪಳದ ಭಾಗ್ಯನಗರ ಪ.ಪಂ.ಗೆ ರೋಷನ್ ಮಂಗಳೂರು ಈ ಇಬ್ಬರು ಬಿಜೆಪಿ ಪಕ್ಷದಿಂದ ಆಯ್ಕೆಯಾಗಿದ್ದು ಬಿಜೆಪಿ ಪಕ್ಷಕ್ಕೆ ಮುಂದಿನ ದಿನಮಾನದಲ್ಲಿ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷ ಸೇರುವುದು ಖಚಿತ ಎಂದು ತಿಳಿಸಿದರು.

ಇದೇ ವೇಳೆ ನೂತನ ರಾಜ್ಯಾಧ್ಯಕ್ಷರ ನೇಮಕಕ್ಕೆ ಅಲ್ಪಸಂಖ್ಯಾತ ಘಟಕದವರಾದ ಮರ್ದಾನಾಲಿ ಮುಜುವಾರ ಜಿಲ್ಲಾ ಕಾರ್ಯದರ್ಶಿಗಳು, ಸೈಯದ ಹುಸೇನ ಮುಲ್ಲಾ ,ಆಲಂ ಮಕಾಂದಾರ್, ಸಿಕಂದರ್ ಹೊಸಮನಿ, ರಾಜಾಸಾಬ ಕಿಡದೂರ, ಹುಸೇನ ಬಾಷಾ ಕಿನ್ನಾಳ, ಶಾಮೀದಸಾಬ ಹಗೇದಾಳ ಅಭಿನಂದಿಸಿದ್ದಾರೆ.


Gadi Kannadiga

Leave a Reply