This is the title of the web page
This is the title of the web page

Please assign a menu to the primary menu location under menu

Local News

ಕಾಂಗ್ರೆಸ್ ಟೂಲಕಿಟ್ ಟೆರರಿಸಂ ಮಾಡುವುದರ ಮೂಲಕ ಸಮಾಜದಲ್ಲಿ ಗೊಂದಲ ಸೃಷ್ಟಿಸುತ್ತಿದೆ: ಪಿ ರಾಜೀವ್


ಬೆಳಗಾವಿ: ಪಠ್ಯಕ್ರಮದ ಪರಿಷ್ಕರಣೆ ವಿಷಯಲ್ಲಿ ಸಮಾಜದಲ್ಲಿ ಗೊಂದಲ ಉಂಟು ಮಾಡುವುದು ಕಾಂಗ್ರೆಸ್ ನ ಕೀಳುಮಟ್ಟದ ಟ್ರೂಲ್ ಕಿಟ್ ಟೆರರಿಸಮ್ ಆಗಿದ್ದು ಸುಳ್ಳುಗಳನ್ನೇ ಸತ್ಯೆವೆಂಬಂತೆ ಹೇಳಿ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದೆ ಎಂದು  ಕುಡುಚಿ ಶಾಸಕ ಪಿ.ರಾಜೀವ ವಾಗ್ದಾಳಿ ‌ನಡೆಸಿದರು.

ಬುಧವಾರ ನಗರದ ಖಾಸಗಿ ಹೊಟೇಲ್ ಒಂದರಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ರಾಜ್ಯ ಜನರಲ್ಲಿ, ಸಾಹಿತಿಗಳಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ರೂಪದಲ್ಲಿ ಕೇಸರಿಕರಣ ಮಾಡಲಾಗುತ್ತಿದೆ ಎಂದು ಸುಳ್ಳು ಹೇಳುವುದರ ಮೂಲಕ ಅವರನ್ನು ಉದ್ರೇಕಗೊಳಿಸುವ ಕೆಲಸ ಮಾಡುತ್ತಿದೆ. ಸಮಾಜದಲ್ಲಿ ಗೊಂದಲಗಳನ್ನು ಎಬ್ಬಿಸುವುದು ಕಾಂಗ್ರೆಸ್. ಬಿಟ್ ಕ್ವಾಯಿನ್, ಸಾಹಿತ್ಯದ ವಿಷಯ  ತೆಗೆದುಕೊಂಡು ಅಪಸ್ವರ ಎತ್ತುತ್ತಾರೆ ಆದರೆ ಅದನ್ನು ಪೂರ್ಣಗೊಳಿಸದೆ ಮದ್ಯದಲ್ಲಿಯೇ ಕೈಬಿಡುತ್ತಾರೆ ಎಂದು ಹರಿಹಾಯ್ದರು.

ಬರಗೂರು ರಾಮಚಂದ್ರಪ್ಪನವರು ಸೈದ್ಧಾಂತಿಕ ವಿಚಾರ ಏನೇ ಇದ್ದರೂ ಅವರ ಅಕ್ಷರಗಳನ್ನು ಗೌರವಿಸುತ್ತೇನೆ.‌ ಆದರೆ ಬರಗೂರು ರಾಮಚಂದ್ರಪ್ಪ ಅವರು ರೋಹಿತ ಚಕ್ರತೀರ್ತ ಸಮೀತಿ ಮೇಲೆ  ಸುಳ್ಳು ಆರೋಪಗಳನ್ನು ಮಾಡುತ್ತಿದ್ದು ಅವರ ಮೊಂಡುವಾದ ಸರಿಯಲ್ಲ.

ರೋಹಿತ ಚಕ್ರ ತೀರ್ಥ  ಪಠ್ಯಕ್ರಮದ ಸಮಿತಿಯನ್ನು ಬರಗೂರು ರಾಮಚಂದ್ರಪ್ಪನವರು ವಿರೋಧ ಮಾಡುವವರು ಅವರು ಸಿದ್ದರಾಮಯ್ಯನವರ ಸರಕಾರದಲ್ಲಿ ಏನೂ ಮಾಡಿದರು ಎನ್ನುವುದನ್ನು ನೆನಪಿಸಿಕೊಳ್ಳಲಿ ಎಂದರು.

ರೋಹಿತ ಚಕ್ರತೀರ್ತ ಅವರು ಬಸವಣ್ಙನವರ ವಚನಗಳನ್ನು ಪಠ್ಯಕ್ರಮದಲ್ಲಿ ಕೈ ಬಿಟ್ಟಿಲ್ಲ. ಬರಗೂರು ರಾಮಚಂದ್ರಪ್ಪನವರ ಪಠ್ಯಕ್ರಮದಲ್ಲಿ ಕರ್ನಾಟಕದಲ್ಲಿ ಬ್ರಿಟಿಷ್ ಆಡಳಿಯದ ವಿರೋಧಗಳು ಎಂಬ ವಿಷಯದಲ್ಲಿ ಕೇವಲ ಟಿಪ್ಪು ಸುಲ್ತಾನ್, ಹೈದರಾಲಿ ಸೇರಿದಂತೆ ಕೆಲವೇ ಕೆಲವು ಜನರ ವಿಷಯ ಹಾಕಿದ್ದರು. ಯಾಕೆ ಕಿತ್ತೂರು ರಾಣಿ ಚೆನ್ನಮ್ಮ, ವೀರಮದಕರಿ ಅಂಥವರ ಹೆಸರನ್ನು ಸೇರಿಸುವ ಪ್ರಯತ್ನ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಬರಗೂರು ಸಮೀತಿ ೮ನೇ ತರಗತಿ ಸಿಂದು ಸಂಸ್ಕೃತಿ ಪಾಠವನ್ನು ಕೈಬಿಟ್ಟು  ಕಾಂಗ್ರೆಸ್ ಒಲೈಸಲು ನೆಹರು ಪತ್ರಗಳು ಎಂಬ ಪಾಠವನ್ನು ಸೇರಿಸಿದ್ದರು ಆದರೆ ರೋಹಿತ ಚಕ್ರತೀರ್ತ ಸಮೀತಿಯು ಸಿಂದು ನಾಗರಿಕತೆ ಎಂಬ ಪಾಠವನ್ನು ಸೇರಿಸಿದೆ ಇದು ತಪ್ಪೆ ಎಂದು ಪ್ರಶ್ನಿಸಿದರು.

ಬರಗುರು ಸಮೀತಿಯ ಪ್ರಸಿದ್ದ ದೇವಾಲಯಗಳು ಪಾಠದಲ್ಲಿ ಕೇವಲ ಕ್ರೈಸ್ತ ಮತ್ತು ಮುಸ್ಲಿಂ ದೇವಾಲಯಗಳನ್ನು ಮತ್ತು ಟಿಪ್ಪು ಅರಮನೆಯನ್ನು ಸೇರಿಸಿ ಹಿಂದು ದೇವಾಲಯಗಳನ್ನು ಕೈಬಿಡಲಾಗಿತ್ತು ಧರ್ಮಗಳ ಬಗ್ಗೆ ವಿವರಣೆ ಕೊಡುವ ಪಾಠದಲ್ಲಿ ಕೇವಲ ಕ್ರೈಸ್ತ ಮತ್ತು ಮುಸ್ಲಿಂ ಧರ್ಮಕ್ಕೆ ಹೆಚ್ಚನ ಆದ್ಯತೆ ನೀಡಲಾಗಿತ್ತು ಿದು ಕಾಂಗ್ರೆಸ್ ಒಲೈಕೆ ಮಾಡುವ ಕೆಲಸವಲ್ಲದೇ ಬೇರೇನು ಎಂದು ಹರಿಹಾಯ್ದರು.

ಪಠ್ಯಪುಸ್ತಕ ಪರಾಮರ್ಶೆ ಸಮೀತಿ ಸ್ವತಂತ್ರವಾಗಿರಬೇಕು ಅದರೆ ಬರಗೂರು ರಾಮಚಂದ್ರಪ್ಪ ಸಮೀತಿಯು ಸಿದ್ದರಾಯ್ಯ ಅವರ ಸರಕಾರವನ್ನು ಕಾಂಗ್ರೆಸ್ ಪಕ್ಷವನ್ನು ಮೆಚ್ಚಿಸುವ ಕೆಲಸವನ್ನು ಮಾಡಿದ್ದಾರೆ. ಈ ಎಲ್ಲ ತಪ್ಪುಗಳನ್ನು ಕಂಡುಹಿಡಿದು ರೋಹಿತ ಚಕ್ರತೀರ್ತ ಸಮೀತಿ ಸರಿ ಮಾಡುವ ಕೆಲಸ ಮಾಡಿದೆ ಪುಸ್ತಕ ಸಮೀತಿಯಲ್ಲಿ ಬಿಜೆಪಿ ಸರಕಾರ ಹಸ್ತಕ್ಷೇಪ ಮಾಡಿಲ್ಲ ಎಂದರು.

ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಜಿಲ್ಲಾ ಘಟಕದ  ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ, ನಗರ ಘಟಕದ ಪ್ರಧಾನ ಕಾರ್ಯದರ್ಶಿ  ದಾದಾಗೌಡಾ ಬಿರಾದಾರ, ಮುರುಘೇಂದ್ರಗೌಡ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Gadi Kannadiga

Leave a Reply