ಯರಗಟ್ಟಿ:ರಾಜ್ಯ ವಿಧಾನಸಭಾ ಚುನಾವಣೆ ಅಂಗವಾಗಿ ತಾಲೂಕಿನ ಶಿರಸಂಗಿ, ಕಲ್ಲಾಪೂರ ಹಾಗೂ ಇನಾಂಗೋವನಕೊಪ್ಪ ಗ್ರಾಮದಲ್ಲಿ ಶುಕ್ರವಾರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿಶ್ವಾಸ್ ವೈದ್ಯ ಅಪಾರ ಜನರೊಂದಿಗೆ ಭರ್ಜರಿ ಪ್ರಚಾರ ನಡೆಸಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ವಿವರಿಸಿ ಮತಯಾಚಿಸಿದರು.
ಗ್ರಾಮಕ್ಕೆ ಆಗಮಿಸಿದ ವಿಶ್ವಾಸ ವೈದ್ಯ ಅವರಿಗೆ ಗ್ರಾಮದ ತಾಯಂದಿರು ಆರತಿ ಮಾಡುವ ಮೂಲಕ ಭವ್ಯ ಸ್ವಾಗತವನ್ನು ಕೋರಿದರು.
ಈ ಸಂದರ್ಭದಲ್ಲಿ ಮಹಾರಾಜ ಕಣವಿ, ಈರಪ್ಪ ಮುನವಳ್ಳಿ, ಶಂಕರಯ್ಯ ಸತ್ತಿಗೇರಿಮಠ, ಮಾರುತಿ ಪೋತರಾಜ, ಮಕ್ತುಮ್ ಯಲಿಗಾರ, ಮಲ್ಲಿಕಾರ್ಜುನ ಗೋರವನಕೊಳ್ಳ, ಡಿ.ಜಿ. ಹಣ್ಣಿಕೇರಿ, ಪ್ರಕಾಶ ಧಡೆಮ್ಮನವರ, ಮೈಬೂಬ ರಾಮದುರ್ಗ, ಎಸ್.ಎಸ್. ಗುಳ್ಳ, ಹಣಮಂತ ಹೂಲಿ, ಗದಿಗೆಪ್ಪ ಪಂಚೇನವರ, ಗದಿಗೆಪ್ಪ ಶಿರಸಂಗಿ, ಎಸ್.ಎಸ್. ಮಾಸ್ತಿ, ಸಿ.ಡಿ. ಲಿಂಗರಡ್ಡಿ, ಸಿದ್ದು ಪಟ್ಟೇದ, ಮಲ್ಲು ಮುನ್ನೂರ, ಸತೀಶ ಶೆಟ್ಟಣಗೌಡ್ರ, ರಾಚಯ್ಯ ಸತ್ತಿಗೇರಿಮಠ, ಪರಶುರಾಮ ತೋರಣಗಟ್ಟಿ, ಉಮೇಶ ಇಂಚಲ, ಮಂಜುನಾಥ ಗೀರವನಕೊಳ್ಳ, ಕೆ.ಕೆ. ಗೋಸಬಾಳ, ಯಲ್ಲಪ್ಪ ಕಣವಿ, ಜಗದೀಶ ಗುಳ್ಳ ಸೇರಿದಂತೆ ಮತ್ತಿತರು ಇದ್ದರು.
Gadi Kannadiga > Local News > ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿಶ್ವಾಸ್ ವೈದ್ಯರಿಂದ ಭರ್ಜರಿ ಪ್ರಚಾರ
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿಶ್ವಾಸ್ ವೈದ್ಯರಿಂದ ಭರ್ಜರಿ ಪ್ರಚಾರ
Suresh29/04/2023
posted on
